ಲಿಂಗಾಕರ್ಷಕ ಬಲೆಯಿಂದ ಕೀಟಬಾಧೆ ನಿರ್ವಹಣೆ ಸಾಧ್ಯ
Team Udayavani, Mar 15, 2022, 4:35 PM IST
ಬೀದರ: ಪರಿಸರ ಸ್ನೇಹಿ ತಂತ್ರಜ್ಞಾನಗಳಾದ ಲಿಂಗಾಕರ್ಷಕ ಬಲೆಗಳನ್ನು ಬಳಸುವುದರಿಂದ ಕೀಟನಾಶಕ ಕಡಿಮೆ ಬಳಸಬಹುದು ಹಾಗೂ ಕೀಟ ಬಾಧೆ ಸಮಗ್ರವಾಗಿ ನಿರ್ವಹಿಸಲು ಸಾಧ್ಯ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ| ಎಸ್.ವಿ. ಪಾಟೀಲ ತಿಳಿಸಿದರು.
ಬೇಮಳಖೇಡದ ರಾಘವೇಂದ್ರ ಪಟ್ನೆ ಅವರ ಮಾವಿನ ತೋಟದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿವಿ ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಆಶ್ರಯದಲ್ಲಿ ನಡೆದ ಮಾವಿನಲ್ಲಿ ಹಣ್ಣಿನ ನೊಣ ಬಾಧೆ ಹಾಗೂ ಮಿಡಿಕಾಯಿ ಉದುರುವಿಕೆ ನಿರ್ವಹಣೆ ಕುರಿತು ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ವಾತಾವರಣದಲ್ಲಿ ಬಹು ಬೆಳೆ ಪದ್ಧತಿ ಹಾಗೂ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು ಎಂದರು.
ಪ್ರಾಧ್ಯಾಪಕ ಡಾ| ಪ್ರವೀಣ ಜೋಳಗಿಕರ, ಡಾ| ಪ್ರಶಾಂತ, ಡಾ| ಶ್ರೀನಿವಾಸ್ ಎನ್., ಡಾ| ಆನಂದ ಪಾಟೀಲ, ಡಾ| ರಾಜಕುಮಾರ ಎಂ., ಡಾ| ಶಶಿಕಲಾ ರುಳಿ ಮಾವಿನಲ್ಲಿ ಮಿಡಿ ಹಣ್ಣಿನ ಹಾಗೂ ಹಣ್ಣು ನೊಣದ ನಿರ್ವಹಣೆ, ಕಬ್ಬಿನ ಬೇಸಾಯದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಮೂಲಕ ಹತೋಟಿ ಕ್ರಮಗಳಾದ ಹಣ್ಣಿನ ಮಿಡಿಕಾಯಿ ಉದುರುವುದನ್ನು ತಡೆಗಟ್ಟಲು ಸಸ್ಯಚೋದಕವಾದ ಪ್ಲಾನೋಫಿಕ್ಸ್ 0.5 ಮಿ.ಲೀ. ನೀರಿಗೆ ಸೇರಿಸಿ ಸಿಂಪಡಣೆ ಮಾಡಬೇಕು, ಹಣ್ಣಿನ ನೊಣ ಬಾಧೆ ತಡೆಗಟ್ಟಲು ಪ್ರತಿ ಎಕರೆಗೆ 4-5 ಲಿಂಗಾಕರ್ಷಕ ಬಲೆ ಹಾಕುವುದರಿಂದ ನೊಣದ ಬಾಧೆ ನಿರ್ವಹಣೆ ಮಾಡಲು ಸೂಚಿಸಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ವಿನೋದಕುಮಾರ ಗುಮ್ಮೆದ್, ಸದಸ್ಯ ಲಕ್ಷ್ಮೀಕಾಂತ ಬೀರನಳ್ಳಿ, ರಾಘವೇಂದ್ರ ಪಟ್ನೆ ಡಾ| ಮುಹಮ್ಮದ ಫಾರೂಕ್, ನೀಲಕಂಠ ರೆಡ್ಡಿ ಇದ್ದರು. ಮಹಾವಿದ್ಯಾಲಯದ ವಿಸ್ತರಣಾ ಮುಂದಾಳು ಡಾ| ಶ್ರೀನಿವಾಸ ಎನ್. ಪ್ರಾಸ್ತಾವಿಕ ಮಾತನಾಡಿದರು. ಡಾ| ಆನಂದ ಪಾಟೀಲ ಸ್ವಾಗತಿಸಿದರು. ಡಾ| ಪ್ರಶಾಂತ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.