ಶಾಂತಿ-ಸುವ್ಯವಸ್ಥೆ ಕಾಪಾಡಲು 36 ವೃತ್ತದಲ್ಲಿ 110 ಕ್ಯಾಮೆರಾ ಅಳವಡಿಕೆ
ಜಿಲ್ಲೆಯ ಇತರೆ ನಗರ ಹಾಗೂ ಗ್ರಾಪಂಗಳಿಗೂ ವಿಸ್ತರಿಸುವ ಯೋಜನೆ ಇದೆ
Team Udayavani, Nov 2, 2022, 6:05 PM IST
ಬಸವಕಲ್ಯಾಣ: ರಾಜ್ಯದಲ್ಲಿ ಬಸವಕಲ್ಯಾಣ ನಗರದ 36 ವೃತ್ತಗಳಲ್ಲಿ 110 ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಪ್ರಪ್ರಥಮ ನಗರ ಎನಿಸಿಕೊಂಡಿದೆ. ಬಸವಕಲ್ಯಾಣದಲ್ಲಿ ಅಹಿತಕರ ಘಟನೆಗಳು ಆಗದಿರಲಿ ಮತ್ತು ಬಸವಣ್ಣನವರು ಮತ್ತು ಮಹಾತ್ಮ ಗಾಂಧೀಜಿ ಕಂಡ ಕನಸುಗಳು ನನಸಾಗಲಿ ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ಸಿಪಿಐ ವೃತ್ತ ಕಚೇರಿಯಲ್ಲಿ ಮಂಗಳವಾರ ಸಿಸಿ ಟಿವಿ ನಿಯಂತ್ರಣ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಈ ಸಿಸಿ ಕ್ಯಾಮೆರಾಗಳು ಅಪರಾಧಿಕ ಕೃತ್ಯದಲ್ಲಿ ಭಾಗಿಯಾಗುವವರನ್ನು ಹೆಡೆಮುರಿ ಕಟ್ಟಲು ಸಹಕಾರಿ.
ಇಲ್ಲಿಯ ಬಿಕೆಡಿಬಿ ಅನುದಾನದಿಂದ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತೆಯಿಂದಾಗಿ ಇದು ಸಾಧ್ಯವಾಗಿದೆ. ಮುಂದಿನ ಮೂರು ವರ್ಷಗಳವರೆಗೆ ಗುತ್ತಿಗೆದಾರರು ಇದನ್ನು ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಕಲ್ಯಾಣ ಜಗತ್ತಿನ ಸುಂದರ ಪ್ರವಾಸಿ ತಾಣವಾಗಲು ಸಿಸಿ ಕ್ಯಾಮೆರಾಗಳು ಉತ್ತಮವಾಗಿವೆ ಎಂದರು.
ಹುಮನಾಬಾದ ಎಎಸ್‌ಪಿ ಶಿವಾಂಶು ರಾಜಪುತ ಮಾತನಾಡಿ, ಸಮಾಜದಲ್ಲಿ ಅಹಿತಕರ ಘಟನೆಗಳು ತಡೆಗಟ್ಟುವ ನಿಟಿನಲ್ಲಿ ಈ ಕ್ಯಾಮೆರಾಗಳು ಸಹಕಾರಿ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಲು ನಮ್ಮ ಕ್ಯಾಮೆರಾಗಳು ಉಪಯೋಗಕ್ಕೆ ಬರುತ್ತವೆ. ಜಿಲ್ಲೆಯ ಇತರೆ ನಗರ ಹಾಗೂ ಗ್ರಾಪಂಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು.
ಸಹಾಯಕ ಆಯುಕ್ತ ರಮೇಶ ಕೋಲಾರ, ಬಿಕೆಡಿಬಿ ತಹಶೀಲ್ದಾರ್ ಮೊಹಮ್ಮದ್ ಮೋಸಿನ್ ಮಾತನಾಡಿ, ನಗರದ 36 ಸ್ಥಳಗಳಲ್ಲಿ 110 ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು ಇದರಿದ ಅಪರಾಧ ಕೃತ್ಯಗಳು ತಡೆಗಟ್ಟಲು ಸಾಧ್ಯ ಎಂದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ನಗರಸಭೆ ಅಧ್ಯಕ್ಷೆ ಶಹಜಹಾನ ತನ್ವೀರ ಅಹ್ಮದ್, ತಹಶೀಲ್ದಾರ್ ಶಾಂತಗೌಡ ಬಿರಾದಾರ, ನಗರಸಭೆ ಪೌರಾಯುಕ್ತ ಶಿವಕುಮಾರ, ಇಒ ಕಿರಣ ಪಾಟೀಲ, ನಗರ ಸಿಪಿಐ ಸುಶೀಲಕುಮಾರ ಸೇರಿದಂತೆ ವಿವಿಧ ಠಾಣೆಗಳ ಪಿಎಸ್‌ಐಗಳಾದ ವಸೀಮ್ ಪಟೇಲ್, ಬಸಲಿಂಗಪ್ಪ, ಪುಷ್ಪಾ, ಲಿಂಗಪ್ಪಾ ಮಣ್ಣೂರ, ರೇಣುಕಾ ಹಾಗೂ ಸಿಬ್ಬಂದಿ ಇದ್ದರು.
ಅಪರಾಧಿಕ ಕೃತ್ಯ ತಡೆಗೆ ಕಟ್ಟೆಚ್ಚರ
ಇಲ್ಲಿಯ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ 50 ಲಕ್ಷ ರೂ. ವೆಚ್ಚದಲ್ಲಿ ನಗರದ ಪ್ರಮುಖ 36 ಸ್ಥಳಗಳಲ್ಲಿ 110 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 16 ಸ್ಥಳಗಳಲ್ಲಿ ಎಲ್‌ಇಡಿ ಮೂಲಕ ನಿಗಾ ಮಾಡಲಾಗುತ್ತಿದೆ. ಹೀಗಾಗಿ ಒಟ್ಟಾರೆ ನಗರ ಪ್ರದೇಶ ಈಗ ಪೊಲೀಸ್ ಕಂಟ್ರೋಲ್‌ನಲ್ಲಿದೆ. ಯಾವುದೇ ಅಹಿತಕರ ಘಟನೆಗಳು ನಡೆದರೂ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.