ಪ್ರಜಾಪ್ರಭುತ್ವ ಪರಿಚಯಿಸಿದ್ದುಲಿಂಗಾಯತ
Team Udayavani, Oct 7, 2017, 12:52 PM IST
ಬೀದರ: ವಿಶ್ವಕ್ಕೆ ಪ್ರಜಾಪ್ರಭುತ್ವ ಪರಿಚಯಿಸಿದ ಹೆಗ್ಗಳಿಕೆ ಲಿಂಗಾಯತ ಧರ್ಮದ್ದು. ಸಮಾಜದಲ್ಲಿನ ಮೇಲು-ಕೀಳು, ಮೂಢನಂಬಿಕೆ-ಮೂಢ ಆಚಾರಗಳನ್ನು ಅಲ್ಲಗಳೆದು ಸರ್ವಸಮಾನತೆ ಸಾರಿದ ಬಸವಣ್ಣ 900 ವರ್ಷಗಳ ಹಿಂದೆಯೇ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ ಎಂದು ಕಲಬುರಗಿಯ ಪಿಡಿಎ ಕಾಲೇಜಿನ ಉಪನ್ಯಾಸಕ ಸಂಜಯ ಮಾಕಾಲ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ಜರುಗಿದ ಶರಣ ಸಂಗಮ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಲಿಂಗಾಯತ ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಸ್ವತಂತ್ರ ಧರ್ಮವಾಗಿದೆ. ಇದು ಅನೇಕ ದಾಖಲೆಗಳಿಂದ ಸಿದ್ಧವಾಗಿವೆ. ಹೈ.ಕ. ನಿಜಾಂ ಸರ್ಕಾರದ ದಾಖಲೆಗಳಲ್ಲಿ ಲಿಂಗಾಯತ ಧರ್ಮ ಮತ್ತು ಹಿಂದೂ ಧರ್ಮ ಬೇರೆ ಬೇರೆಯಾಗಿ ಉಲ್ಲೇಖವಾಗಿವೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಮುಂಬೈ ಕರ್ನಾಟಕ ಮತ್ತು ಮದ್ರಾಸ ಪ್ರಾಂತ್ಯಗಳ ಸರ್ಕಾರಿ ದಾಖಲೆಗಳಲ್ಲಿ ಮತ್ತು ಗೆಜೆಟಿಯರ್‌ಗಳಲ್ಲಿ ಲಿಂಗಾಯತವೆಂದೇ ನಮೂದಾಗಿದೆ ಎಂದರು.
ಭಾರತದಲ್ಲಿ 1870ರಿಂದ ಜನಗಣತಿ ಆರಂಭವಾದಾಗಿನಿಂದ ಸ್ವತಂತ್ರ ಭಾರತದ 1950ರ ವರೆಗೆ ಜನಗಣತಿ, ಶಾಲಾ ದಾಖಲಾತಿ, ತಹಶೀಲ್ದಾರ ದಾಖಲಾತಿ, ಗೆಜೆಟ್‌ಗಳಲ್ಲಿ ಲಿಂಗಾಯತ ಎಂದು ನಮೂದಿಸಿದ್ದನ್ನು ದಾಖಲೆಗಳು ದೃಢಪಡಿಸುತ್ತವೆ. ಎಲ್ಲಿಯೂ ವೀರಶೈವ ಪದ ಬಳಕೆ ಕಾಣಸಿಗುವುದಿಲ್ಲ. 1955ರ ನಂತರ ವೀರಶೈವ ಪದ ಸೇರಿಕೊಂಡಿದೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ಸಹ ಲಿಂಗಾಯತ ಒಂದು ಧರ್ಮ ಎಂದು ಅನೇಕ ಸಲ ಹೇಳಿದೆ ಎಂದರು.
ಲಿಂಗಾಯತ ಧರ್ಮದ ಆಚರಣೆಗಳು ಹಿಂದೂ ಆಚರಣೆಗಳಿಗಿಂತ ತುಂಬಾ ಭಿನ್ನವಾಗಿವೆ. ಲಿಂಗಾಯತ ಧರ್ಮದ ಸ್ಥಾಪಕರು ಬಸವಣ್ಣ. ಲಿಂಗಾಯತ ಧರ್ಮ ಸಂಹಿತೆ ವಚನಗಳು. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳು ಲಿಂಗಾಯತರ ಆಚರಣೆಗಳಾಗಿವೆ. ಹೀಗಾಗಿ ಲಿಂಗಾಯತ ಸರ್ವತಂತ್ರ ಸ್ವತಂತ್ರ ಧರ್ಮ. ವೀರಶೈವ ಲಿಂಗಾಯತದ ಒಂದು ಶಾಖೆ ಮಾತ್ರ ಎಂದು ದಾಖಲೆಗಳ ಸಮೇತ ಅವರು ಪ್ರತಿಪಾದಿಸಿದರು.
ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಾಗಿರುವ ಲಿಂಗಾಯತರಿಗೆ ನ್ಯಾಯವಾಗಿ ಅಲ್ಪಸಂಖ್ಯಾತ ಸ್ಥಾನಮಾನ ದೊರೆಯಬೇಕೆಂದು ನಡೆಯುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಸರ್ಕಾರಗಳು ಕೂಡಲೇ ಗಮನ ಹರಿಸಿ ಲಿಂಗಾಯತರಿಗೆ ನ್ಯಾಯ ಒದಗಿಸಬೇಕು ಎಂದರು.
ಎಇಇ ಪ್ರಕಾಶ ಮಠಪತಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿ ಮಾತನಾಡಿದರು. ಮಾಣಿಕಪ್ಪ ಗೋರನಾಳೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಉದ್ಯಮಿ ಜಯರಾಜ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಅಶೋಕ ವಂಗೆಪಲ್ಲಿ, ವೀರಶೆಟ್ಟಿ ರಾಠೊಡ ಮತ್ತು ಬಾಬುರಾವ್ ರಾಠೊಡ ಉಪಸ್ಥಿತರಿದ್ದರು. ಕಾಶಿನಾಥ ಜನವಾಡಕರ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.
ಇದೇ ವೇಳೆ ಮೈಸೂರು ದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್‌ನ ಕಲಾವಿದರಾದ ರೇಖಾ ಸೌದಿ, ಗುರುದೇವ, ಅಬೀದ ಅಲಿಖಾನ್ ಹಾಗೂ ಸಂಸ್ಥೆಯ ಅಧ್ಯಕ್ಷ ಅನೀಲ ದೇಶಮುಖ ಅವರನ್ನು ಸನ್ಮಾನಿಸಲಾಯಿತು. ನಂತರ ಬೆಳಗು ತಂಡದ ಸದಸ್ಯರು ವಚನ ರಸಮಂಜರಿ ನಡೆಸಿಕೊಟ್ಟರು. ದತ್ತು ಮಹಾರಾಜ ಹಾರ್ಮೊನಿಯಂ ಮತ್ತು ರಮೇಶ ಕೋಳಾರ ತಬಲಾ ಸಾಥ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.