ಭೀಮಾ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ
Team Udayavani, Apr 18, 2020, 3:19 PM IST
ಜೇವರ್ಗಿ: ಮಂದರವಾಡ ಗ್ರಾಮದಲ್ಲಿ ಸಿಪಿಐ ರಮೇಶ ರೊಟ್ಟಿ ಕೋವಿಡ್ ವೈರಸ್ ಕುರಿತು ಜನಜಾಗೃತಿ ಮೂಡಿಸಿದರು. ಸಿಡಿಪಿಒ ಶಿವಪ್ರಕಾಶ ಹಿರೇಮಠ ಇದ್ದರು.
ಜೇವರ್ಗಿ: ಕಲಬುರಗಿ ತಾಲೂಕಿನ ಸರಡಗಿ ಬಿ., ಕವಲಗಾ ಕೆ. ಗ್ರಾಮದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿಂದ ತಾಲೂಕಿನ ಭೀಮಾ ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸಿಪಿಐ ರಮೇಶ ರೊಟ್ಟಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ತಾಲೂಕಿನ ಕೂಡಿ, ಕೋನಾಹಿಪ್ಪರಗಾ, ಮಂದರವಾಡ, ಕೋಬಾಳ, ಬಣಮಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಕೋವಿಡ್ ಕುರಿತು ಜನಜಾಗೃತಿ ಮೂಡಿಸಿದರು.
ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಲಾಠಿ ರುಚಿ ತೋರಿಸಿದರು. ಗ್ರಾಮದಲ್ಲಿ ಜನರು ಕುಳಿತುಕೊಳ್ಳುವ ಸ್ಥಳಗಳಲ್ಲಿ ಸುಟ್ಟ ಆಯಿಲ್ ಹಾಕಲಾಗಿದೆ. ಮನೆ ಬಿಟ್ಟು ಹೊರಗೆ ಬಾರದಂತೆ ಗ್ರಾ.ಪಂ ವತಿಯಿಂದ ಡಂಗುರ ಸಾರಲಾಗುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಅಧಿ ಕಾರಿಗಳು ನದಿ ತೀರದ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮಂದರವಾಡ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯಲ್ಲಿ ಸಿಪಿಐ ರಮೇಶ ರೊಟ್ಟಿ ಮಾತನಾಡಿ, ಭೀಮಾ ನದಿ ತೀರದ ಹಳ್ಳಿಗಳ ಜನರು ಎಚ್ಚರದಿಂದಿರಬೇಕು ಮತ್ತು ಬೇರೆ ಜಿಲ್ಲೆ, ತಾಲೂಕಿನ ಜನರನ್ನು ತಮ್ಮ ಗ್ರಾಮಕ್ಕೆ ಸೇರಿಸಿಕೊಳ್ಳಬಾರದು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.