ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಕೈಜೋಡಿಸಿ
Team Udayavani, Apr 1, 2022, 2:52 PM IST
ಬೀದರ: ಕಸದ ಸಮರ್ಪಕ ವಿಲೇವಾರಿ, ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಗ್ರಾಮದ ಜನರು ಕೈ ಜೋಡಿಸಬೇಕು ಎಂದು ತಾಪಂ ಪ್ರಭಾರಿ ಇಒ ಕೀರ್ತನಾ ಶ್ರೀನಿವಾಸ ಹೇಳಿದರು.
ಇಲ್ಲಿನ ಚಿಟ್ಟಾ ಗ್ರಾಪಂಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆಯಿಂದ ಮಾರಕ ಕಾಯಿಲೆಗಳು ಬರುತ್ತವೆ. ಪ್ಲಾಸ್ಟಿಕ್ ಬಳಸದೇ ಪರ್ಯಾಯ ದಾರಿ ಕಂಡುಕೊಳ್ಳಬೇಕು. ಇದರ ಬದಲಾಗಿ ಪೇಪರ್ ಹಾಗೂ ಕಾಟನ್ ಬಟ್ಟೆಗಳ ಕೈ ಚೀಲಗಳನ್ನು ಬಳಸಬೇಕು. ಘನ ಮತ್ತು ದ್ರವ ತ್ಯಾಜ್ಯ ಹಾಗೂ ಮುಖ್ಯವಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಪಂ ಮಾಡುವಲ್ಲಿ ತೆಗೆದುಕೊಳ್ಳುವ ಕ್ರಮಗಳು ಬಹುಮುಖ್ಯವಾಗಿದ್ದು, ಎಲ್ಲರೂ ಜೊತೆಗೂಡಿ ಮಾಡಿದರೆ ಈ ಕಾರ್ಯ ಯಶಸ್ವಿಗೊಳ್ಳಲು ಸಾಧ್ಯ ಎಂದರು.
ಸರ್ಕಾರಿ ಜಾಗದಲ್ಲಿ ಎಸ್‌ಡಬ್ಲ್ಯೂಎಂ ನಿರ್ವಾಹಣಾ (ಘನ, ದ್ರವ, ತ್ಯಾಜ್ಯ) ಘಟಕವು ನಿರ್ಮಾಣ ಮಾಡುವ ಮೂಲಕ ಕೆಲಸದ ಕಾರ್ಯ ಪ್ರಗತಿಯು ಯಶಸ್ವಿಯಾಗಿ ಮಾಡಬೇಕು. ಪ್ಲಾಸ್ಟಿಕ್ ಮುಕ್ತ ಗೊಳಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಯ ಜನರಿಗೆ ಪ್ಲಾಸ್ಟಿಕ್ ಬಳಸದಂತೆ ಮನವೊಲಿಸಬೇಕು ಎಂದು ಹೇಳಿದರು.
ಜಿಪಂ (ನರೇಗಾ) ಜಿಲ್ಲಾ ಐಇಸಿ ಸಂಯೋಜಕ ಮರೆಪ್ಪ ಸಿ. ಹರವಾಳ್ಕರ್, ತಾಲೂಕು ಐಇಸಿ ಸಂಯೋಜಕ ಸತ್ಯಜೀತ್ ವೈಜನಾಥ, ಪಿಡಿಒ ಪೂಜಾ ನೀಲಾ, ಅಧ್ಯಕ್ಷ ರಮೇಶ ಬಿರಾದಾರ, ಸದಸ್ಯರಾದ ಸತೀಶ, ಅಕºರ್, ದೀಪಿಕಾ ಮಚ್ಛೇಂದ್ರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.