ಸಮಸ್ಯೆಗೆ ಸ್ವಯಂ ಸೇವಕರು ಸಂಜೀವಿನಿಯಾಗಲಿ
Team Udayavani, Jan 20, 2021, 3:09 PM IST
ಬೀದರ್: ಅರೆಕಾಲಿಕ ಕಾನೂನು ಸ್ವಯಂ ಸೇವಕರು ಮೊದಲು ತಾವುಗಳು ಕಾನೂನಿನ ಅರಿವು ಮೂಡಿಸಿಕೊಂಡು ಜವಾಬ್ದಾರಿಯಿಂದ ಗ್ರಾಮದ ಜನತೆ ಸೇವೆ ಮಾಡಬೇಕು. ಸೇವಕರು ಗ್ರಾಮದ ಜನರ ಸಮಸ್ಯೆಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಕಾಡಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಅರೆಕಾಲಿಕ ಸ್ವಯಂ ಸೇವಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಡಿವಳಿಕೆ, ಸಂಸ್ಕಾರ, ಆಚಾರ-ವಿಚಾರ ಶುದ್ಧವಾಗಿರಬೇಕು. ಆಗ ಮಾತ್ರ ಜನರು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ. ನಮ್ಮ ವೇಷಭೂಷಣಗಳ ಬದಲಾಗಿ ವರ್ತನೆಯಿಂದ ವ್ಯಕ್ತಿತ್ವ ಹಿರಿದಾಗುತ್ತದೆ. ಆದ್ದರಿಂದ ಗ್ರಾಮದ ಜನರ ಸೇವೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದರು.
ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸಿದ್ರಾಮ ಪ್ರಾಸ್ತಾವಿಕ ಮಾತನಾಡಿ, ಸ್ವಯಂ ಸೇವಕರು ತರಬೇತಿ ಸದುಪಯೋಗ ಪಡೆದು ಗ್ರಾಮಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳಲ್ಲಿ ವ್ಯಾಜ್ಯಗಳಾಗುತ್ತವೆ. ಅಂತಹ ವ್ಯಾಜ್ಯ ನಿಭಾಯಿಸಿ ಅವರಿಗೆ ಕಾನೂನಿನ ಅರಿವು ಮೂಡಿಸಿ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.
ಸಂಘದ ಅಧ್ಯಕ್ಷ ಜಗದೀಶ ಜಗತಾಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯಾ ಧೀಶರುಗಳಾದ ಶಶಿಕಾಂತ ಭಾವಿಕಟ್ಟಿ, ಝರಿನಾ, ಸರ್ಕಾರಿ ಅಭಿಯೋಜಕ ಬಸವಂತರೆಡ್ಡಿ, ಪ್ರಕಾಶ ವಿ.ಎಂ, ಧನರಾಜ ಬಿರಾದಾರ, ಆರ್ .ಪಿ. ಗೌಡ, ವಿನಾಯಕರಾವ್ ಸಿಂಧೆ ವೇದಿಕೆಯಲ್ಲಿದ್ದರು.
ಪಶು ವೈದ್ಯಾಧಿ ಕಾರಿ ಡಾ| ಗೌತಮ ಅರಳಿ, ನಿವೃತ್ತ ಅಧಿ ಕಾರಿ ಭೀಮಾಶಂಕರ ಅಂಬಲಗಿ, ನ್ಯಾಯಾ ಧೀಶರಾದ ಝರಿನಾ, ಜಿಲ್ಲಾ ಕಾರಾಗೃಹ ವ್ಯವಸ್ಥಾಪಕ ಶರಣಬಸಪ್ಪ ಸ್ವಯಂ ಸೇವಕರಿಗೆ ತರಬೇತಿ ನೀಡಿದರು. ಅರೆಕಾಲಿಕ ಕಾನೂನು ಸ್ವಯಂ ಸೇವಕರು ಮೊದಲು ತಾವುಗಳು ಕಾನೂನಿನ ಅರಿವು ಮೂಡಿಸಿಕೊಂಡು ಜವಾಬ್ದಾರಿಯಿಂದ ಗ್ರಾಮದ ಜನತೆ ಸೇವೆ ಮಾಡಬೇಕು. ಸೇವಕರು ಗ್ರಾಮದ ಜನರ ಸಮಸ್ಯೆಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾ ಧೀಶ ಕಾಡಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
ಇದನ್ನೂ ಓದಿ:ಒಂದು ನಗರದ ಹನ್ನೊಂದು ಕಥೆಗಳಲ್ಲಿ ನಾವೆಲ್ಲಿ ?
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಅರೆಕಾಲಿಕ ಸ್ವಯಂ ಸೇವಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಡಿವಳಿಕೆ, ಸಂಸ್ಕಾರ, ಆಚಾರ-ವಿಚಾರ ಶುದ್ಧವಾಗಿರಬೇಕು. ಆಗ ಮಾತ್ರ ಜನರು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ. ನಮ್ಮ ವೇಷಭೂಷಣಗಳ ಬದಲಾಗಿ ವರ್ತನೆಯಿಂದ ವ್ಯಕ್ತಿತ್ವ ಹಿರಿದಾಗುತ್ತದೆ. ಆದ್ದರಿಂದ ಗ್ರಾಮದ ಜನರ ಸೇವೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದರು. ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸಿದ್ರಾಮ ಪ್ರಾಸ್ತಾವಿಕ ಮಾತನಾಡಿ, ಸ್ವಯಂ ಸೇವಕರು ತರಬೇತಿ ಸದುಪಯೋಗ ಪಡೆದು ಗ್ರಾಮಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳಲ್ಲಿ ವ್ಯಾಜ್ಯಗಳಾಗುತ್ತವೆ. ಅಂತಹ ವ್ಯಾಜ್ಯ ನಿಭಾಯಿಸಿ ಅವರಿಗೆ ಕಾನೂನಿನ ಅರಿವು ಮೂಡಿಸಿ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.
ಸಂಘದ ಅಧ್ಯಕ್ಷ ಜಗದೀಶ ಜಗತಾಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯಾ ಧೀಶರುಗಳಾದ ಶಶಿಕಾಂತ ಭಾವಿಕಟ್ಟಿ, ಝರಿನಾ, ಸರ್ಕಾರಿ ಅಭಿಯೋಜಕ ಬಸವಂತರೆಡ್ಡಿ, ಪ್ರಕಾಶ ವಿ.ಎಂ, ಧನರಾಜ ಬಿರಾದಾರ, ಆರ್ .ಪಿ. ಗೌಡ, ವಿನಾಯಕರಾವ್ ಸಿಂಧೆ ವೇದಿಕೆಯಲ್ಲಿದ್ದರು.
ಪಶು ವೈದ್ಯಾಧಿ ಕಾರಿ ಡಾ| ಗೌತಮ ಅರಳಿ, ನಿವೃತ್ತ ಅಧಿ ಕಾರಿ ಭೀಮಾಶಂಕರ ಅಂಬಲಗಿ, ನ್ಯಾಯಾ ಧೀಶರಾದ ಝರಿನಾ, ಜಿಲ್ಲಾ ಕಾರಾಗೃಹ ವ್ಯವಸ್ಥಾಪಕ ಶರಣಬಸಪ್ಪ ಸ್ವಯಂ ಸೇವಕರಿಗೆ ತರಬೇತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.