ಅಂತರಂಗದ ಸೌಂದರ್ಯಕ್ಕೆ ಪುರಾಣ ಆಲಿಸಿ
Team Udayavani, Jan 24, 2020, 4:59 PM IST
ಕಲಬುರಗಿ: ದೇಹ, ತಲೆ ಮಾಸಿದರೆ ಸೋಪು, ಶ್ಯಾಂಪೋ ಹಚ್ಚಿ ಬಾಹ್ಯ ಸೌಂದರ್ಯ ಹೆಚ್ಚಿಸಲು ಹೇಗೆ ಯತ್ನಿಸುತ್ತೇವೆಯೋ ಅಂತರಂಗದ ಶುದ್ಧಿಗಾಗಿ ಪುರಾಣ-ಪ್ರವಚನ ಆಲಿಸಬೇಕೆಂದು ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕಡಣಿಯಲ್ಲಿ ಗದಿಗೇಶ್ವರ ಹಿರೇಮಠದ ನೂತನ ಕಟ್ಟಡ ಲೋಕಾರ್ಪಣೆ,
ಶ್ರೀ ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ 11ದಿನಗಳ ಶ್ರೀ ರೇಣುಕಾಚಾರ್ಯರ ಪುರಾಣಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಜೀವನ ಎನ್ನುವುದು ಸದಾ ಜಂಜಾಟದಿಂದಲೇ ಕೂಡಿದೆ. ಜೀವನ ಪಾವನಗೊಳ್ಳಬೇಕಾದರೆ,
ಪವಿತ್ರವಾದ ಜಾಗಗಳಲ್ಲಿ ಸತ್ಸಂಗ ಮಾಡಬೇಕು. ಟಿವಿ ಎದುರು ಕೂತರೆ ಬದುಕು ಪಾವನವಾಗಲಾರದು. ಟಿವಿಯಿಂದ ಮನಸ್ಸಿನ ನೆಮ್ಮದಿ ಕದಡುತ್ತದೆ. ಆದ್ದರಿಂದ ಮಠ, ಮಂದಿರಗಳಿಗೆ ಹೋಗಿ ಸಂತರ ಹಿತನುಡಿ ಆಲಿಸುವುದರಿಂದ ಬದುಕು ಪಾವನಗೊಳಿಸಿಕೊಳ್ಳುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ
ನೀಡಿ, ಮನಸ್ಸಿನ ನೆಮ್ಮದಿಗಾಗಿ ಮಠ-ಮಂದಿರಗಳತ್ತ ಜನ ಬರಬೇಕು ಎಂದು ಕರೆ ಕೊಟ್ಟರು.
ಬಿಜೆಪಿ ಮುಖಂಡ ಭೀಮಾಶಂಕರ ಪೊಲೀಸ್ ಪಾಟೀಲ ಬಿದನೂರ ಅಧ್ಯಕ್ಷತೆ ವಹಿಸಿದ್ದರು. ಹಣಮಂತರಾಯ ಎ. ಶಿವರಾಯಗೋಳ, ಗಣ್ಯರಾದ ಸಿದ್ಧಣಗೌಡ ಪಾಟೀಲ, ನಸರಣಗೌಡ
ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಮಡಿವಾಳ, ಮಿಣಜಗಿಯ ಗಣ್ಯರಾದ ಲಿಂಗಣಗೌಡ ಎ.
ಪಾಟೀಲ, ದೊಡ್ಡಪ್ಪಗೌಡ ಎಸ್. ಪೊಲೀಸ್ ಪಾಟೀಲ, ಈರಣ್ಣಗೌಡ ದಳಪತಿ, ವಿಜಯಕುಮಾರ ಬಿ. ಬಸವಪಟ್ಟಣ, ಬಸವರಾಜ ಸಾಲುಕ್ಯ, ಭೈಲಪ್ಪ ಪೂಜಾರಿ ಮುಂತಾದವರಿದ್ದರು.
ಮಹಾಂತೇಶ ಚೇಂಗಟಿ, ಮಲ್ಲಿಕಾರ್ಜುನ ಗಿರೆಪ್ಪಗೋಳ ನಿರೂಪಿಸಿದರು. ವಡಗೇರಾದ
ಪಂ ನಾಗಯ್ಯ ಶಾಸ್ತ್ರೀಗಳ ಸಿರಿಕಂಠದಲ್ಲಿ ಪುರಾಣ ಪ್ರಾರಂಭಿಸಲಾಯಿತು. ಗವಾಯಿಗಳಾದ
ರಾಮಲಿಂಗಯ್ಯ ಗೌಡಗಾಂವ ಸಂಗೀತಕ್ಕೆ ಸಿದ್ಧಣ್ಣ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡಿದರು.
ನಂದಿಯಾಗಿ ಶಂಕಣ್ಣ ಗಿರೆಪ್ಪಗೋಳ ಪುರಾಣಕ್ಕೆ ಸಾಕ್ಷಿಯಾದರು. ಚಿನ್ಮಯಗಿರಿಯ ಹಿರಿಯ
ಪೂಜ್ಯರಾದ ಸಿದ್ಧರಾಮ ಶಿವಾಚಾರ್ಯರು ಶ್ರೀ ಪಂಚಾಚಾರ್ಯರ ಬಾವುಟ ಆರೋಹಣ ಮಾಡುವ ಮೂಲಕ ಧರ್ಮ ಸಮಾರಂಭಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು ಎಂದು ಸ್ವಾಗತ ಸಮಿತಿ ಸದಸ್ಯ ಶರಣಗೌಡ ಕೆ. ಮಾಲಿ ಪಾಟೀಲ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.