ಮಾಸ್ಕ್ ಧರಿಸಿಯೇ ಸರಳ ವಿವಾಹ
Team Udayavani, Apr 27, 2020, 1:59 PM IST
ಕಲಬುರಗಿ: ಮಾಸ್ಕ್ ಧರಿಸಿ ವಿವಾಹವಾದ ಜೋಡಿ.
ಕಲಬುರಗಿ: ಕೋವಿಡ್ ವೈರಸ್ ಹೊಡೆದೊಡಿಸಲು ಮನೆಯಲ್ಲೇ ಇರಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎನ್ನುವ ಸಂದೇಶಕ್ಕನುಗುಣವಾಗಿ ಬಸವ ಜಯಂತಿಯಂದು ಸರಳವಾಗಿ ಮನೆಯಲ್ಲೇ ಮಾಸ್ಕ್ ಧರಿಸಿ ವಧು-ವರರು ಹಸೆಮಣೆ ಏರಿದ್ದಾರೆ.
ಶಿಕ್ಷಣ ಇಲಾಖೆಯ ಬಿಆರ್‌ಪಿ ಆಗಿರುವ ಲಕ್ಷ್ಮೀಕಾಂತ ಡಿ. ಪಾಟೀಲ್ ಹಾಗೂ ಎಂಎಸ್ಸಿ ಪದವಿ ಹೊಂದಿರುವ ಸೌಮ್ಯ ಎನ್ನುವವರೇ ನಗರದ ವಿವೇಕಾನಂದ ನಗರದ ಎನ್‌ಜಿಒ ಕಾಲೋನಿಯಲ್ಲಿನ ಸ್ವಗೃಹದಲ್ಲಿ ತಂದೆ-ತಾಯಿ ಸಮ್ಮುಖದಲ್ಲೇ ಹೊಸ ಜೀವನಕ್ಕೆ ಕಾಲಿಟ್ಟರು. ಕೇವಲ 10 ನಿಮಿಷದಲ್ಲಿ ಸರಳವಾಗಿ ಮದುವೆಯಾದರು.
ಮಾಸ್ಕ್ ಧರಿಸಿಯೇ ಮದುವೆಯ ಎಲ್ಲ ವಿಧಿ-ವಿಧಾನ ನೆರವೇರಿಸಿದರು. ದೇವಾಲಯದಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲು 12 ಜನರು ಪಾಲ್ಗೊಳ್ಳಲು ಅನುಮತಿ ಪಡೆಯಲಾಗಿತ್ತು. ಆದರೆ ಮನೆಯಲ್ಲಿದ್ದುಕೊಂಡೇ ಮದುವೆಯಾಗೋಣ ಎಂದು ಪದವೀಧರರಾಗಿರುವ ವಧು-ವರರು ಮನೆಯಲ್ಲೇ ಮದುವೆಯಾಗುವ ಮೂಲಕ ಸರಳತೆ ನಿರೂಪಿಸಿದರು.
ಮಾಸ್ಕ್ ಧರಿಸಿಯೇ ದಾಂಪತ್ಯ ಜೀವನಕ್ಕೆ ಹೊಸ ಜೋಡಿ ಕಾಲಿಟ್ಟಿರುವುದು ಹಾಗೂ ಈ ನಿಟ್ಟಿನಲ್ಲಿ ಕೊರೊನಾ ಹೊಡೆದೊಡಿಸಲು ಎಲ್ಲರೂ ಕೈ ಜೋಡಿಸೋಣ ಎಂಬ ಸಂದೇಶ ಸಾರಿರುವುದು ಮಾದರಿ ಎಂದೇ ಹೇಳಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.