ಹಾಳಾದ ಗುಲಾಬಿ ಬೆಳೆ: ಪರಿಹಾರಕ್ಕೆ ಮನವಿ
Team Udayavani, Apr 16, 2020, 5:27 PM IST
ಕಲಬುರಗಿ: ಮಾರಾಟವಾಗದೇ ಹಾಳಾಗಿರುವ ಗುಲಾಬಿ ಹೂ ಪ್ರದರ್ಶಿಸಲಾಯಿತು.
ಕಲಬುರಗಿ: ತಾಲೂಕಿನ ಕುಮಸಿ ಗ್ರಾಮದ ರೈತ ವೀರೇಂದ್ರ ಪಾಟೀಲ ಬೆಳೆದ ನಾಲ್ಕು ಎಕರೆ ಗುಲಾಬಿ ಹೂವು ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರಾಟವಾಗದೇ ಸಂಪೂರ್ಣ ಹಾಳಾಗಿದ್ದು, ಪರಿಹಾರ ಒದಗಿಸಬೇಕು ಎಂದು ಕಲ್ಯಾಣ ಕರ್ನಾಟಕ ತೋಟಗಾರಿಕೆ, ಅರಣ್ಯ, ಕೃಷಿ ಮತ್ತು ಪರಿಸರ ಸಂರಕ್ಷಣ ಸಮಿತಿ ಮನವಿ ಮಾಡಿದೆ.
ಬೇಸಿಗೆಯಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಗುಲಾಬಿಗೆ ಬೇಡಿಕೆ ಬಹಳಷ್ಟಿರುತ್ತಿತ್ತು. ಈ ವೇಳೆ ಸುಮಾರು 6ರಿಂದ 8 ಲಕ್ಷ ರೂ. ಆದಾಯ ಬರಬಹುದೆಂದು ಭಾವಿಸಲಾಗಿತ್ತು. ಆದರೆ ಬೆಳೆದು ನಿಂತ ಗುಲಾಬಿ ಹೂವು ಶೇ. 75ರಷ್ಟು ಒಣಗಿದೆ. ಇನ್ನೊಂದು ವಾರದಲ್ಲಿ ಸಂಪೂರ್ಣ ಒಣಗುತ್ತದೆ. ಹೀಗಾಗಿ ಬೆಳೆಯಲು ಖರ್ಚು ಮಾಡಿದ ಹಣವೂ ಮರಳಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಹೂವು ಬೆಳೆದ ರೈತರಿಗೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ, ಕೃಷಿ ಸಚಿವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ರೈತರು ಗುಲಾಬಿ, ಮಲ್ಲಿಗೆ, ಚೆಂಡು ಮುಂತಾದ ಹೂ ಬೆಳೆದಿದ್ದಾರೆ. ಆದರೆ ಮಾರಾಟ ಆಗದಿರುವುದರಿಂದ ಚಿಂತಾಕ್ರಾಂತರಾಗಿದ್ದಾರೆ. ಇಂತಹ ರೈತರಿಗೆ ಸೂಕ್ತ ಪರಿಹಾರ ದರ ನೀಡಬೇಕೆಂದು ಜಿಲ್ಲಾಧಿ ಕಾರಿ ಮತ್ತು ತೋಟಗಾರಿಕೆ ಇಲಾಖೆಗೆ ಸಮಿತಿ ಅಧ್ಯಕ್ಷ ವೀರೇಂದ್ರ ಪಾಟೀಲ ಕುಮಸಿ, ಕೋಶಾಧ್ಯಕ್ಷ ಜಗದೀಶ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಬಿ. ಅಂಬಲಗಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
3 ತಿಂಗಳಿಂದ ಸಂಬಳ ನೀಡದ್ದಕ್ಕೆ 30 ಅಡಿ ಎತ್ತರದ ಕಂಬ ಏರಿ ಆತ್ಮಹ*ತ್ಯೆಗೆ ಯತ್ನ
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ
Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್ ಆದೇಶ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.