ಹೋರಾಟ ತೀವ್ರ ಗೊಳಿಸಲು ಕಲ್ಯಾಣಶ್ರೀ ಸಲಹೆ
Team Udayavani, Aug 25, 2022, 7:35 PM IST
ಭಾಲ್ಕಿ: ಈಗಾಗಲೇ ಕರ್ನಾಟಕದಲ್ಲಿ ಸುಮಾರು 25 ಸಾವಿರ ಬೇಡ ಜಂಗಮರಿಗೆ ಪ್ರಮಾಣ ಪತ್ರ ದೊರೆತಿದೆ. ಇದನ್ನೇ ಎಲ್ಲರಿಗೂ ಮುಂದುವರಿಸಬೇಕು ಎಂದು ಬಳ್ಳಾರಿಯ ಕಲ್ಯಾಣ ಶ್ರೀಗಳು ಆಗ್ರಹಿಸಿದ್ದಾರೆ.
ಪಟ್ಟಣದ ತಹಸೀಲ ಕಚೇರಿ ಎದುರಿಗೆ ಟೆಂಟ್ ಹೊಡೆದು ಸುಮಾರು 48 ದಿವಸಗಳ ಕಾಲ ಹೋರಾಟ ನಡೆಸುತ್ತಿರುವ ಬೇಡ ಜಂಗಮ ಸಮಾಜದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದ ಅವರು, ಬೇಡ ಜಂಗಮ ಸಮಾಜದ ಮುಖಂಡರು, ನಿರಂತರ, ಚಾಚು ತಪ್ಪದೇ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ನಮ್ಮ ಹೋರಾಟ ನ್ಯಾಯಬದ್ಧ, ಸಂವಿಧಾನ ಬದ್ಧ ಹೋರಾಟವಾಗಿದೆ. ನಾವೇನು ಪ್ರಮಾಣ ಪತ್ರ ಹೊಸದಾಗಿ ನೀಡಬೇಕೆಂದು ಕೇಳುತಿಲ್ಲ. ಈಗಾಗಲೇ ಪಡೆದುಕೊಂಡವರ ಜೊತೆಯಲ್ಲಿ ಜಂಗಮ ಸಮಾಜದ ಕಡು ಬಡವರಿಗೂ ಪ್ರಮಾಣ ಪತ್ರ ದೊರೆಯಬೇಕು ಎನ್ನುವ ಉದ್ದೇಶದಿಂದ ಹೋರಾಟ ಮುಂದುವರಿಸಿದ್ದೇವೆ. ಗೋವಿಂದ ಕಾರಜೋಳ ಅವರು ಬೇಡ ಜಂಗಮರು ಹಂದಿ ಮಾಂಸ ತಿನ್ನುತ್ತಾರೆ, ಕುಡಿಯುತ್ತಾರೆ ಎಂದು ಸತ್ತು ಹೋದ ಕಾನೂನಿನ ಬಗ್ಗೆ ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದಕ್ಕೆ ಜಂಗಮರು ದೃತಿಗೆಡದೇ ಹೋರಾಟ ಮುಂದುವರೆಸಬೇಕು. ಬ್ರಿಟಿಷರ ಆಡಳಿತದಲ್ಲಿ, ನಿಜಾಮರ ಆಡಳಿತದಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಅದೇ ರೀತಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರೂ ಕೂಡ ಬೇಡ ಜಂಗಮರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವುದನ್ನು ಪರಿಗಣಿಸಿ ಸಂವಿಧಾನದಲ್ಲಿ ನಮಗೆ ನ್ಯಾಯ ಕೊಟ್ಟಿದ್ದಾರೆ. ಆದರೆ, ಆಡಳಿತ ಮಾಡುತ್ತಿರುವ ಜನಪ್ರತಿನಿಧಿಗಳು, ಕಾನೂನು ಮಾಡುತ್ತಿರುವ ಅಧಿಕಾರಿಗಳ ಕೈ ಹಿಡಿದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಹೋರಾಟಕ್ಕೆ ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಸಾಥ್ ನೀಡಿ, ಕಲ್ಯಾಣಶ್ರೀಗಳವರೊಂದಿಗೆ ಭಾಗವಹಿಸಿದ್ದರು. ಭಾಲ್ಕಿಯ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಡಾ| ಪ್ರಭುಲಿಂಗ ಸ್ವಾಮಿ, ಗುರಯ್ನಾ ಸ್ವಾಮಿ, ಪಂಚಯ್ನಾ ಸ್ವಾಮಿ ಮಾತನಾಡಿದರು.
ಸುಭಾಷ ಕೆನಾಡೆ, ಸತೀಶ ಸ್ವಾಮಿ, ಶಂಭುಲಿಂಗ ಸ್ವಾಮಿ, ಶಿವಶರಣಯ್ನಾ ಸ್ವಾಮಿ, ಶಿವಯೋಗಿ ಸ್ವಾಮಿ, ಕಾರ್ತಿಕ ಸ್ವಾಮಿ, ಮನ್ಮಥಯ್ನಾ ಸ್ವಾಮಿ, ಶಿವಾನಂದ ಸ್ವಾಮಿ, ಕಲ್ಲಯ್ನಾ ಸ್ವಾಮಿ, ಧೂಳಯ್ನಾ ಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.