ಆ್ಯಪ್‌ಗಳಲ್ಲೂ ಕನ್ನಡ ಅಳವಡಿಕೆ


Team Udayavani, Jan 5, 2021, 1:15 PM IST

ಆ್ಯಪ್‌ಗಳಲ್ಲೂ ಕನ್ನಡ ಅಳವಡಿಕೆ

ಬೀದರ: ತಂತ್ರಜ್ಞತೆ ಮತ್ತು ತಂತ್ರಾಂಶದಲ್ಲಿ ಈಗಾಗಲೇ ಕನ್ನಡವನ್ನುಅಳವಡಿಸಲಾಗಿದೆ. ನಾವು ಬಳಸುವವಿವಿಧ ಆ್ಯಪ್‌ಗ್ಳಲ್ಲಿಯೂ ಇನ್ಮುಂದೆಕನ್ನಡ ಅಳವಡಿಸಲಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಹಿರಿಯ ರಂಗ ಸಂಘಟಕ ಟಿ.ಎಸ್‌. ನಾಗಾಭರಣ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ವಿಜಯಕುಮಾರ ಸೋನಾರೆ ನಿವಾಸದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‌ ಹಾಗೂ ಜನಪದ ಕಲಾವಿದರ ಬಳಗದ ಅಭಿನಂದನೆಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಪಡೆಯಸದಸ್ಯನಾಗಿ ಕನ್ನಡದ ಕಾಯಕ ಮಾಡಲು ಮುಂದಾಗುವಂತೆ ಮಾಡಬೇಕು. ಕನ್ನಡದ ಕೆಲಸ ಅಂದರೆ ಅದು ನಮ್ಮ ಕೆಲಸ, ನಮ್ಮ ಮನೆಯ ಕೆಲಸ ಎಂಬ ಭಾವನೆ ಎಲ್ಲರಲ್ಲಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು.

ತಾತ್ವಿಕವಾಗಿ ತತ್ವನಿಷ್ಠವಾಗಿ ಮಾಡಬೇಕಾದ ಕಾರ್ಯವನ್ನು ಮಾಡಿ ತೋರಿಸುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ. ಹೀಗಾಗಿ ಕನ್ನಡದ ಬಳಕೆ ಅನುಷ್ಠಾನಕ್ಕೆ ತರಬೇಕಾದರೆ ನಮಗೆ ಎದುರಾಗುವ ಸಮಸ್ಯೆಗಳು ಯಾವುದು ಎಂಬುದನ್ನು ಪಟ್ಟಿ ಮಾಡಿದರೆ ಅದಕ್ಕೆ ಪರಿಹಾರಗಳೇನು? ಎಂಬುದನ್ನು ಚರ್ಚಿಸಬಹುದು ಎಂದು ಹೇಳಿದರು.

ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಕನ್ನಡ ಕಟ್ಟುಕಾರ್ಯವನ್ನು ಜಿಲ್ಲೆಯ ಸಮಸ್ತ ಕನ್ನಡಿಗರಸಹಕಾರದೊಂದಿಗೆ ಮಾಡುತ್ತೇವೆ. ಎದುರಾಗುವ ಎಲ್ಲ ಸಮಸ್ಯೆಗಳನ್ನುನಿವಾರಿಸಿಕೊಳ್ಳುವತ್ತ ಕನ್ನಡವನ್ನು ಕಟ್ಟೋಣ ಎಂದರು.

ಪರಿಷತ್ತಿನ ಜಿಲ್ಲಾಧ್ಯಕ್ಷೆ ಪಾರ್ವತಿಸೋನಾರೆ ಮಾತನಾಡಿ, ಬೀದರನಲ್ಲಿ ಬಹು ಧರ್ಮಿಯರು ಮತ್ತು ಬಹು ಭಾಷೆಗಳನ್ನು ಮಾತನಾಡುವವರುಇದ್ದಾರೆ. ಮಕ್ಕಳೇ ಕನ್ನಡದ ರಥವನ್ನುಎಳೆದುಕೊಂಡು ಹೋಗುವುದರಿಂದಅವರ ಮೂಲಕವೇ ಕನ್ನಡ ಕಟ್ಟಬೇಕಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ರಾಮ ಸಿಂಧೆ, ಜೆಎನ್‌ ಡಫಳಾಪೂರ, ಶ್ರೀಮಂತ ಸಪಾಟೆ,ರವಿ ನೇಳಗೆ, ಮಹೇಶ ಹಳೆಯಂಬುರೆ,ಚಂದ್ರಾವತಿ ಘಂಟೆ, ಖುಷಿ ಘಟೆ ಇದ್ದರು.ಎಂ.ಪಿ ಮುದಾಳೆ ಸ್ವಾಗತಿಸಿದರು. ಚಂದ್ರಕಾಂತ ಹಳೆಂಬುರೆ ನಿರೂಪಿಸಿದರು. ಸುನೀಲ ಭಾವಿಕಟ್ಟಿ ವಂದಿಸಿದರು.

ಬದ್ಧತೆ ಮನಸ್ಸುಗಳಿದ್ದರೆ ಕನ್ನಡ ಕಟ್ಟಲು ಸಾಧ್ಯ :

ಬೀದರ: ನಗರದ ರಂಗಮಂದಿರದಲ್ಲಿ ಸೋಮವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರು ಜಿಲ್ಲೆಯ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಸಾಹಿತಿ, ಚಿಂತಕರ ಜತೆ ಸಭೆ ನಡೆಸಿ,ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಲು ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡಬೇಕು ಎಂದು ಕೋರಿದರು.

ಈ ವೇಳೆ ಹಿರಿಯ ಜಾನಪದ ವಿದ್ವಾಂಸ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಜಾನಪದ ವಿಶ್ವಕೋಶ

ಪ್ರಕಟಿಸಬೇಕು. ಬೀದರದಂತಹ ಗಡಿ ಜಿಲ್ಲೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ಅಭ್ಯಾಸ ಮಾಡುವವರಿಗೆ 2,000 ಪ್ರೋತ್ಸಾಹ ಧನ ನೀಡಬೇಕು. ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಬೀದರನಲ್ಲಿ ಮರಾಠಿ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವ ಶಿಕ್ಷಕರ ಕೊರತೆ ಇದೆ. ಅಗತ್ಯಕ್ಕನುಸಾರ ಕನ್ನಡಭಾಷಾ ಶಿಕ್ಷಕರ ನೇಮಕವಾಗಬೇಕು. ಎಲ್ಲಾ ಅಂಗಡಿಗಳಲ್ಲಿ ಕನ್ನಡದಲ್ಲಿಯೇನಾಮಫಲಕ ಇರುವಂತಾಗಬೇಕು ಎಂದು ಸಲಹೆ ಮಾಡಿದರು.

ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ, ಕನ್ನಡ ಕಾರ್ಯಕ್ರಮಗಳುಬರಿ ಬೆಂಗಳೂರಿಗೆ ಸೀಮಿತವಾಗದಿರಲಿ. ಬೀದರದಂತಹ ಗಡಿ ಜಿಲ್ಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚಿನರೀತಿಯಲ್ಲಿ ನಡೆಯಲು ಅವಕಾಶ ನೀಡಬೇಕು ಎಂದರು. ಪತ್ರಕರ್ತ ವಿರೂಪಾಕ್ಷ ಗಾದಗಿ ಮಾತನಾಡಿ, ಅಧೀನ ನ್ಯಾಯಾಲಯಗಳಲ್ಲಿ ಹೊರಡಿಸುವ ಆದೇಶ-ಸುತ್ತೋಲೆಗಳು ಕನ್ನಡ ಭಾಷೆಯಲ್ಲಿ ಇರಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಟಿ.ಎಸ್‌ನಾಗಾಭರಣ ಅವರು, ಕನ್ನಡವನ್ನು ಬಲಪಡಿಸಲು ಒತ್ತು ಕೊಡಲಾಗುವುದು.ಇದಕ್ಕೆ ಪೂರಕವಾದ ಎಲ್ಲ ಕಾರ್ಯಗಳನ್ನು ನಡೆಸಲಾಗುವುದು. ನಾವುಕನ್ನಡವನ್ನು ಗೌರವ ಪ್ರೀತಿಯಿಂದಕಾಪಾಡಬೇಕು. ಸಮಸ್ಯೆಗಳಿಗೆ ಉತ್ತರಕಂಡುಕೊಳ್ಳೋಣ. ಗಡಿಯಲ್ಲಿಬರೀ ಶಿಕ್ಷಕರನ್ನು ನೇಮಿಸಿದರಷ್ಟೇಸಮಸ್ಯೆ ಪರಿಹಾರವಾಗದು. ಮೂಲತೊಂದರೆಯನ್ನು ಹೇಗೆ ನಿವಾರಿಸಬಹುದು ಎಂಬುದರ ಬಗ್ಗೆ ಯೋಚಿಸೋಣ. ಮನ ಪರಿವರ್ತನೆ ಕೆಲಸ ಮಾಡೋಣ. ಕೇವಲಕಾನೂನು ಆದೇಶ, ಸುತ್ತೋಲೆಗಳಿಂದಕನ್ನಡ ಕಟ್ಟಲು ಆಗುವುದಿಲ್ಲ ಎಂಬುದುನಮಗೀಗ ಅರಿವಿಗೆ ಬಂದಿದೆ. ಕನ್ನಡವನ್ನುಕಟ್ಟುವ ಬದ್ದತೆಯ ಮನಸುಗಳಿದ್ದಾಗಕನ್ನಡ ಕಟ್ಟಲು ಸಾಧ್ಯವಾಗಲಿದೆ ಎಂದರು.

ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ ಮಾತನಾಡಿದರು. ಪ್ರೊ|ಎಸ್‌.ವಿ.ಕಲ್ಮಠ, ಶಂಭುಲಿಂಗ ವಾಲದೊಡ್ಡಿ,ರಾಜಕುಮಾರ ಹೆಬ್ಟಾಳೆ, ಸಂತೋಷ ಜೋಳದಾಪಕೆ ಅವರು ಸಲಹೆಗಳನ್ನು ನೀಡಿದರು. ಸುರೇಶ ಬಡಿಗೇರ, ರಮೇಶ ಬಿರಾದಾರ, ವಿಜಯಕುಮಾರ ಸೋನಾರೆ, ಎಂ.ಪಿ.ಮುದಾಳೆ ಇದ್ದರು.

ಟಾಪ್ ನ್ಯೂಸ್

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar: ಅ.28ರಂದು 5 ನೇ ವಚನ ಸಾಹಿತ್ಯ ಸಮ್ಮೇಳನ

Bidar: ಅ.28ರಂದು 5ನೇ ವಚನ ಸಾಹಿತ್ಯ ಸಮ್ಮೇಳನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.