Medical ಶಿಕ್ಷಣದಲ್ಲಿ ಕರ್ನಾಟಕ ರಾಷ್ಟ್ರಕ್ಕೆ ಮಾದರಿ: ಡಾ| ಪಾಟೀಲ್
ರಾಜ್ಯಮಟ್ಟದ 89ನೇ "ಮೆಡಿಕಾನ್ ಸಮ್ಮೇಳನ'
Team Udayavani, Oct 28, 2023, 10:43 PM IST
ಬೀದರ್: ಆರೋಗ್ಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಪ್ರಗತಿ ಸಾ ಧಿಸುತ್ತಿರುವ ಕರ್ನಾಟಕ ಇಂದು ರಾಷ್ಟ್ರಕ್ಕೆ ಮಾದರಿಯಾಗಿ ಹೊರಹೊಮ್ಮುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಹಮ್ಮಿಕೊಂಡಿರುವ ರಾಜ್ಯಮಟ್ಟದ 89ನೇ “ಮೆಡಿಕಾನ್ ಸಮ್ಮೇಳನ’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ತಮಿಳುನಾಡು ಬಳಿಕ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸಾರ್ವಜನಿಕರಿಗೆ ಸಾಮಾನ್ಯ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಸರಕಾರ ಹಿಂದಿನಿಂದಲೂ ಕ್ರಮ ವಹಿಸಿದೆ. ಹಾಗಾಗಿ ಇಂದು ನಮ್ಮ ರಾಜ್ಯ ಎರಡು ಕ್ಷೇತ್ರದಲ್ಲಿ ಲೀಡರ್ ಎನಿಸಿಕೊಳ್ಳುತ್ತಿದೆ ಎಂದರು.
2004ರ ವೇಳೆಗೆ ರಾಜ್ಯದಲ್ಲಿ ಕೇವಲ ನಾಲ್ಕು ಸರಕಾರಿ ವೈದ್ಯ ಕಾಲೇಜುಗಳಿದ್ದವು. ದಿ| ಧರಂ ಸಿಂಗ್ ಸರಕಾರದ ಅವ ಧಿಯಲ್ಲಿ ಜಿಲ್ಲೆಗೊಂದು ಕಾಲೇಜು ಸ್ಥಾಪನೆ ಗುರಿಯೊಂದಿಗೆ ಬೀದರ್‌ನ ಬ್ರಿಮ್ಸ್ ಸಹಿತ ಆರು ಹೊಸ ಮೆಡಿಕಲ್ ಕಾಲೇಜುಗಳನ್ನು ಘೋಷಿಸಲಾಗಿತ್ತು. 2013ರಲ್ಲಿ ತಾನು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಮತ್ತೆ ಏಳು ಕಾಲೇಜುಗಳನ್ನು ಆರಂಭಿಸಲಾಯಿತು. ಈಗ ಒಟ್ಟು 23 ವೈದ್ಯ ಕಾಲೇಜು ಹಾಗೂ ಕಲಬುರಗಿ, ಬೆಂಗಳೂರಿನಲ್ಲಿ ತಲಾ ಒಂದು ಎಎಸ್‌ಐ ಕಾಲೇಜು ಸಹಿತ ಒಟ್ಟು 25 ಸರಕಾರಿ ವೈದ್ಯಕೀಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದ ಅವರು, ಹಿಂದಿನ ನಾಯಕರ ದೂರದೃಷ್ಟಿಯ ಫಲವಾಗಿ ಇಂದು ಖಾಸಗಿ ವೈದ್ಯ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಹೇಳಿದರು.
ಪ್ರಗತಿ ವಿರೋಧಿ ಧೋರಣೆ
ಹತ್ತು ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳ ಅನುಪಾತದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ರೂಪಿಸಿರುವ ಹೊಸ ಷರತ್ತು ಪ್ರಗತಿ ವಿರೋಧಿ ಧೋರಣೆಯಾಗಿದೆ. ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳಲ್ಲಿ ವೈದ್ಯ ಶಿಕ್ಷಣ ತುಂಬಾ ಪ್ರಗತಿ ಸಾಧಿ ಸುತ್ತ ಹೊರಟಿರುವಾಗ ಇಂತಹ ನಿಯಮ ಜಾರಿಯಾದಲ್ಲಿ ಈ ಪ್ರದೇಶದಲ್ಲಿ ವೈದ್ಯ ಶಿಕ್ಷಣದ ಪ್ರಗತಿಗೆ ಪೆಟ್ಟು ಬೀಳಲಿದೆ. ವೈದ್ಯ ಶಿಕ್ಷಣ ಕೇಂದ್ರ ಹಾಗೂ ರಾಜ್ಯದ ಪಟ್ಟಿಯಲ್ಲಿರುವುದರಿಂದ ಇಂತಹ ಯಾವುದೇ ನಿಯಮಗಳನ್ನು ರೂಪಿಸುವ ಮುನ್ನ ರಾಜ್ಯಗಳ ಅಭಿಪ್ರಾಯ ಆಲಿಸುವುದು ವಾಡಿಕೆ. ಆದರೆ ಎನ್‌ಎಂಸಿ ಯಾರ ಅಭಿಪ್ರಾಯವನ್ನೂ ಕೇಳದೆ ಇಂತಹ ಪ್ರತಿಗಾಮಿ ಧೋರಣೆಯ ಷರತ್ತು ರೂಪಿಸಿ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿ ದರು.
ದೇಶಿ ಔಷಧ ಉತ್ಪಾದನೆಗೆ ಒತ್ತು: ಖೂಬಾ
ಔಷಧಗಳ ಆಮದು ಅವಲಂಬನೆ ಕಡಿಮೆ ಮಾಡಲು ದೇಶದಲ್ಲೇ ಔಷಧಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ 80 ಕ್ರಿಟಿಕಲ್ ಔಷಧಗಳ ಉತ್ಪಾದನೆ ಆರಂಭಿಸಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಔಷಧ ವಿಷಯದಲ್ಲಿ ವಿದೇಶಗಳ ಮೇಲೆ ಹೆಚ್ಚು ಅವಲಂಬನೆ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಾದರೆ ದೇಶಿಯವಾ ಗಿ ಉತ್ಪಾದನೆ ಹೆಚ್ಚಿಸುವುದು ಅಗತ್ಯ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಈ ಹಿಂದೆ ದೇಶದಲ್ಲಿ ಶ್ರೀಮಂತರು ಚಿಕಿತ್ಸೆಗಾಗಿ ಬೇರೆ ದೇಶಗಳಿಗೆ ಹೋಗುತ್ತಿದ್ದರು. ಆದರಿಂದು ಭಾರತದಲ್ಲಿ ಹೊಸ ತಂತ್ರಜ್ಞಾನದಿಂದ ವೈದ್ಯ ಕ್ಷೇತ್ರದಲ್ಲಿ ಪರಿವರ್ತನೆಯಾಗಿದೆ. ಹಾಗಾಗಿ ವಿದೇಶಿ ಪ್ರಜೆಗಳೇ ಚಿಕಿತ್ಸೆಗಾಗಿ ಇಂದು ನಮ್ಮ ರಾಷ್ಟ್ರಕ್ಕೆ ಬರುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆ ಒದಗಿಸುವ ದಿಸೆಯಲ್ಲಿ ಪೂರಕವಾಗಿ ಮೂಲ ಸೌರ್ಯಗಳ ಅಭಿವೃದ್ಧಿಗೆ ಸರಕಾರ ಹೆಜ್ಜೆಯನ್ನಿಟ್ಟಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.