ಸಂಸದ ಖೂಬಾರ ಸವಾಲು ಸ್ವೀಕರಿಸಿದ ಖಂಡ್ರೆ: ಬಹಿರಂಗ ಚರ್ಚೆಗೆ ಪಂಥಾಹ್ವಾನ !

Team Udayavani, Oct 24, 2020, 5:26 PM IST

kubha

ಬೀದರ್: ವಸತಿ ಹಗರಣ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಕುರಿತು ಸಂಸದ ಭಗವಂತ ಖೂಬಾ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಈಶ್ವರ ಖಂಡ್ರೆ ನಡುವಿನ ಆರೋಪ- ಪ್ರತ್ಯಾರೋಪದ ಕೆಸರೆರಚಾಟ ಮತ್ತಷ್ಟು ಹೆಚ್ಚಿದೆ. ಭ್ರಷ್ಟಾಚಾರ ಕುರಿತು ಬಹಿರಂಗ ಚರ್ಚೆಗಾಗಿ ನ. 5ಕ್ಕೆ ವೇದಿಕೆ ಸಿದ್ಧಪಡಿಸುತ್ತೇನೆ, ಸಂಸದರಿಗೆ ಧೈರ್ಯ ಇದ್ದರೆ ಬಂದು ಉತ್ತರಿಸಲಿ ಎಂದು ಖಂಡ್ರೆ ಪಂಥಾಹ್ವಾನ ನೀಡಿದ್ದಾರೆ.

ವಸತಿ ಹಗರಣ ಮತ್ತು ಅನುಭವ ಮಂಟಪ ಸೇರಿ ಜಿಲ್ಲೆಗೆ ಕೊಡುಗೆ ಕುರಿತು ಚರ್ಚೆಸಲು ಖಂಡ್ರೆ ಅವರ ಸವಾಲನ್ನು ಒಪ್ಪಿಕೊಂಡಿದ್ದ ಸಂಸದ ಖೂಬಾ, ಶಾಸಕರೇ ದಿನ ಮತ್ತು ಸ್ಥಳವನ್ನು ನಿಗದಿ ಮಾಡಲಿ ಎಂದಿದ್ದರು. ಈಗ ಇದನ್ನು ಒಪ್ಪಿಕೊಂಡಿರುವ ಖಂಡ್ರೆ, ನ. 5ರಂದು ಬೆ. 11ಕ್ಕೆ ನಗರದ ಗಣೇಶ ಮೈದಾನದಲ್ಲಿ ವೇದಿಕೆ ಸಿದ್ದಪಡಿಸುತ್ತೇನೆ. ಸಾರ್ವಜನಿಕರ ಮುಂದೆಯೇ ಚರ್ಚೆ ನಡೆಸೋಣ. ಸಂಸದರು ಬಾರದಿದ್ದರೂ ನಾನು ಅಂದು ಜನರ ಮುಂದೆ ಸತ್ಯಾಂಶವನ್ನು ಬಹಿರಂಗ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಹುಷಾರು…ಯಾವುದು ಉತ್ತಮ…ಯಾವುದನ್ನು ಸೇವಿಸಬಾರದು?

ಸಂಸದರಿಗೆ ಯೋಗ್ಯತೆ ಇಲ್ಲ:

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಸದರ ಆರೋಪಗಳಿಗೆ ಶಾಸಕ ಖಂಡ್ರೆ ತಿರುಗೇಟು ನೀಡಿದ್ದಾರೆ. ಎರಡು ಬಾರಿ ಲಾಟರಿ ಹೊಡೆದು ಸಂಸದರಾದ ಖೂಬಾ ಅವರು, ಅನುಭವ ಮಂಟಪ ಮತ್ತು ಜಿಲ್ಲೆಗೆ ಖಂಡ್ರೆ ಪರಿವಾರದ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ನಿಜಾಮರಿಂದ ಬಂಧಮುಕ್ತ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದ ನಮ್ಮ ತಂದೆ ಭೀಮಣ್ಣ ಖಂಡ್ರೆ ಎಂದಿಗೂ ಮಾಡಿದ ಕೆಲಸಗಳನ್ನು ಪ್ರಚಾರಕ್ಕಾಗಿ ಹೇಳಿಕೊಂಡವರಲ್ಲ. ಅವರ ಬಗ್ಗೆ ಮಾತನಾಡಲು ಖೂಬಾಗೆ ಯಾವುದೇ ಅರ್ಹತೆ, ಯೋಗ್ಯತೆಯೇ ಇಲ್ಲ. ನಮ್ಮ ತಂದೆಯ ಸೇವೆಯಷ್ಟು ಅವರ ವಯಸ್ಸಾಗಿಲ್ಲ ಎಂದು ಕಿಡಿಕಾರಿದರು.

ಅನುಭವ ಮಂಟಪ ನಿರ್ಮಾಣ ಯಾವಾಗ ಆಗಿದೆ ಎಂಬ ಅರಿವಿಲ್ಲದೇ ಸಂಸದರು ಮಾತನಾಡಿದ್ದಾರೆ. ಲಿಂ. ಚನ್ನಬಸವ ಪಟ್ಟದ್ದೇವರು ಮತ್ತು ಭೀಮಣ್ಣ ಖಂಡ್ರೆ ತಪೋನುಷ್ಠಾನದಿಂದಾಗಿ ಮಂಟಪ ಸಿದ್ಧಗೊಂಡಿದೆ. ಊರೂರು ಸುತ್ತಿ ಸಂಪನ್ಮೂಲ ಕ್ರೂಢೀಕರಣ ಮಾಡಿದ್ದಲ್ಲದೇ ಸ್ವತ ಕಲ್ಲು, ಮಣ್ಣು ಎತ್ತಿ ಕಾಯಕ ಮಾಡಿ ಕೈಜೋಡಿಸಿದ್ದು ಇತಿಹಾಸ. ಪಟ್ಟದ್ದೇವರ ಲಿಂಗೈಕ್ಯ ನಂತರ ಅನುಭವ ಮಂಟಪದ ಅಧ್ಯಕ್ಷರಾಗಿ ಎಲ್ಲರ ಸಹಕಾರದೊಂದಿಗೆ ಶರಣ ಕಮ್ಮಟಗಳನ್ನು ಆಯೋಜಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದೇನೆ. ತಂದೆ ಭೀಮಣ್ಣ ಒಂದು ಸಮುದಾಯಕ್ಕೆ ಸೀಮಿತರಾಗದೇ, ಎಲ್ಲ ವರ್ಗಗಳ, ಜಿಲ್ಲೆಯ ಸಮಗ್ರ ಪ್ರಗತಿಗೆ ದುಡಿದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:  ಅ.29ರಿಂದ ಫ್ಲಿಫ್ ಕಾರ್ಟ್ Big Diwali Sale ಆರಂಭ: ಮೊಬೈಲ್, TV ಗಳಿಗೆ ಭರ್ಜರಿ ಡಿಸ್ಕೌಂಟ್

ಬಿಕೆಡಿಬಿಗೆ 78 ಕೋಟಿ ಅನುದಾನ:

ಬಸವಕಲ್ಯಾಣವನ್ನು ಅಂತರಾಷ್ಟ್ರೀಯ ತಾಣವನ್ನಾಗಿಸಲು ಕೃಷ್ಣ ಸರ್ಕಾರದ ಅವಧಿಯಲ್ಲಿ ಬಿಕೆಡಿಬಿಯನ್ನು ಸ್ಥಾಪಿಸಲಾಯಿತು. ಇದಕ್ಕೆ ನನ್ನ ಒತ್ತಡ, ಶ್ರಮವೇ ಕಾರಣ. ನಂತರ ದಿ. ಧರಂಸಿಂಗ್ ಸರ್ಕಾರದ ಅವಧಿಯಲ್ಲಿ ಬಿಕೆಡಿಬಿಗೆ ಶಾಸನ ಸ್ಥಾನಮಾನ ಕೊಟ್ಟು ಅನುದಾನ ಒದಗಿಸಲಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಟ್ಟು 78.88 ಕೋಟಿ ರೂ. ಕಲ್ಪಿಸಲಾಗಿದೆ. ಇದನ್ನು ಅರಿಯದ ಸಂಸದರು ಬಸವಕಲ್ಯಾಣಕ್ಕೆ ನನ್ನ ಕೊಡುಗೆಯನ್ನು ಕೇಳಿದ್ದಾರೆ ಎಂದರು.

ಇನ್ನೂ ನಾನು ಸಚಿವನಾದ ಬಳಿಕ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕಾಗಿ ಗೋರುಚ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, ಅಗತ್ಯ ಯೋಜನಾ ವಿನ್ಯಾಸ ತಯ್ಯಾರಿಸಿ ಅಂದಿನ ಸಿಎಂ ಸಿದ್ಧರಾಮಯ್ಯಗೆ ಸಲ್ಲಿಸಿದಾಗ ಅದನ್ನು ಅವರು ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ ಬಜೆಟ್ ಮೇಲಿನ ಚರ್ಚೆ ವೇಳೆ ಅಗತ್ಯ ಅನುದಾನ ಒದಗಿಸುವುದಾಗಿ ಘೋಷಿಸಿದ್ದರು. ಆದರೆ, ನಂತರ ಚುನಾವಣೆ ಬಂದು ಹಾಗೆಯೇ ಉಳಿಯಿತು ಎಂದ ಶಾಸಕ ಖಂಡ್ರೆ, ಈಗ ಬಿಜೆಪಿ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದರು ಹೇಳಿದ್ದು, ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.

ನಾನು ಪೌರಾಡಳಿತ ಸಚಿವನಾಗಿ ಜಿಲ್ಲೆಗೆ 333 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಮಾಂಜ್ರಾ ನದಿಯಿಂದ 15 ಕೆರೆಗಳ ತುಂಬಲು 280 ಕೋಟಿ ರೂ. ಕಲ್ಪಿಸಿ, ಕೆಲಸಗಳು ಪ್ರಗತಿಯಲ್ಲಿವೆ ಎಂದು ಹೇಳಿದ ಶಾಸಕ ಖಂಡ್ರೆ, ಸಂಸದರಾಗಿ ಖೂಬಾ ಅವರ ಕೊಡುಗೆ ಏನೆಂಬುದು ಬಹಿರಂಗ ಮಾಡಲಿ. ಬೇರೆ ಜಿಲ್ಲೆಗೆ ಸ್ಥಳಾಂತರ ಆಗುತ್ತಿರುವ ಸಿಪೇಡ್ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಹೆದ್ದಾರಿಗಳು ಹದಗೆಟ್ಟರೂ ಸರಿಪಡಿಸುವ ಕೆಲಸ ಆಗಿಲ್ಲ. ಅವರಿಗೆ ನನ್ನ ಸೇವೆ ಬಗ್ಗೆ ಮಾತನಾಡಲು ಮರ್ಯಾದೆ ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರೇ ಎಲ್ಲರಿಗೂ ಲಸಿಕೆ ಕೊಡುತ್ತೇವೆ, ನಮಗೆ ಧಮ್ ಇದೆ: ಡಿಸಿಎಂ ಅಶ್ವಥ ನಾರಾಯಣ

ಖೂಬಾ ಪುಕ್ಕಲು ಸಂಸದ

ಭಗವಂತ ಖೂಬಾ ಪುಕ್ಕಲು ಸಂಸದ. ಬೀದರ ಜಿಲ್ಲೆ, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಧಾನಿ ಬಳಿ ಮಾತನಾಡಲು ಅವರಿಗೆ ಆಗಲ್ಲ. ಎರಡು ಬಾರಿ ಲಾಟರಿ ಹೊಡೆದು ಆಯ್ಕೆಯಾಗಿ ಜಿಲ್ಲೆಯಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ. ನನ್ನ ಪರಿವಾರವರು ಯಾರು ಗುತ್ತಿಗೆ ಕೆಲಸ ಮಾಡುವುದಿಲ್ಲ. ನೀವೇ (ಸಂಸದ) ಆಸ್ಪತ್ರೆಯಲ್ಲಿ ಬಟ್ಟೆ ಒಗೆಯುವುದರಿಂದ ಹಿಡಿದು ಎಲ್ಲವೂ ಗುತ್ತಿಗೆ ಹಿಡಿದು ಭ್ರಮಾಂಡ ಭ್ರಷ್ಟಾಚಾರ ಮಾಡಿ ನನ್ನ ಮೇಲೆ ಆರೋಪ ಮಾಡುತ್ತಿದ್ದೀರಿ ಎಂದು ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: ವಿದೇಶಿ ಸ್ಕಾಚ್ ಗೆ ನಿಷೇಧ? ಭಾರತದ ಸೇನಾ ಕ್ಯಾಂಟಿನ್ ನಲ್ಲಿ ಆಮದು ವಸ್ತು ಖರೀದಿಸುವಂತಿಲ್ಲ…

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.