ಜನಪದ ಗ್ರಾಮ ಸಮುದಾಯದ ಜ್ಞಾನ
Team Udayavani, Feb 4, 2020, 12:30 PM IST
ಬೀದರ: ಗ್ರಾಮ ಸಮುದಾಯದ ಜ್ಞಾನವೇ ಜನಪದ ಜ್ಞಾನ. ನಗರದ ಜನರಲ್ಲಿ ಬರೀ ಪುಸ್ತಕದ ಜ್ಞಾನವಿದ್ದರೆ, ಹಳ್ಳಿ ಜನರಲ್ಲಿ ಲೋಕಜ್ಞಾನವಿರುತ್ತದೆ. ಹಳ್ಳಿಯ ಜಾನಪದ ಸಂಸ್ಕೃತಿಯ ಜನರನ್ನು ಯಾವತ್ತೂ ದಡ್ಡರು ಎಂದು ಭಾವಿಸಬಾರದು ಎಂದು ಜಾನಪದ ಪರಿಷತ್ತಿನ ವಿಭಾಗೀಯ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಹೇಳಿದರು.
ನಗರದ ಚಂದ್ರಪ್ಪಾ ಗೌರಶೆಟ್ಟಿ ಕಾಲೇಜಿನಲ್ಲಿ ನಗರ ಜಾನಪದ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಶಾಲಾ-ಕಾಲೇಜಿಗೊಂದು ಜನಪದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿವಿಧರೋಗಗಳಿಗೆ ಇಂದಿಗೂ ಜನಪದ ಔಷಧ ನೀಡಿ ಪ್ರಾಣ ಕಾಪಾಡುತ್ತಾರೆ. ಇವರಿಗೆ ಈ ವೈದ್ಯಕೀಯ ಜ್ಞಾನ ನೀಡಿದ್ದು ಯಾವುದೇ ಮೆಡಿಕಲ್ ಕಾಲೇಜು ಅಲ್ಲ. ಬದಲಾಗಿ ಸಮುದಾಯದ ಹಿರಿಯರು ನೀಡಿದ ಜ್ಞಾನ. ಇಂತಹ ಜ್ಞಾನ ಯಾವುದೇ ಪುಸ್ತಕದಲ್ಲಿ ಸಿಗುವುದಿಲ್ಲ. ಆದ್ದರಿಂದ ಜನಪದ ಜ್ಞಾನವನ್ನು ಇಂದಿನ ಮಕ್ಕಳು ಅಳವಡಿಸಿಕೊಂಡು ಮುಂದಿನ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಜಾನಪದದಲ್ಲಿ ವಿಡಂಬನೆ, ಹಾಸ್ಯ, ನೈತಿಕ ಮೌಲ್ಯ, ಮಾನವೀಯ ಮೌಲ್ಯ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸದ ಅಂಶ ಇರುತ್ತವೆ. ಜನಪದ ಒಡಪು, ಹಾಡು, ಕಥೆ, ನಾಟಕ ಮತ್ತು ನೃತ್ಯದಲ್ಲಿ ಪರಸ್ಪರ ಬಾಂಧವ್ಯ ಗಟ್ಟಿಗೊಳಿಸುವ ತಂತ್ರಗಾರಿಕೆ ಇದೆ ಎಂದು ತಿಳಿಸಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಚನ್ನಬಸಪ್ಪ ಹಾಲಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಸಂಸ್ಕೃತಿಯನ್ನು ನಿಜವಾಗಿಯೂ ಎತ್ತಿ ಹಿಡಿದ ಕೀರ್ತಿ ಜನಪದರಿಗೆ ಸಲ್ಲುತ್ತದೆ. ಅತ್ಯಂತ ಶ್ರೀಮಂತ ಸಾಹಿತ್ಯ ಜನಪದವಾಗಿದೆ. ಆದರೆ, ದುರ್ದೈವ ನಮ್ಮ ಜನಪದ ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ಮತ್ತು ರಾಜಾಶ್ರಯ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ರಮೇಶಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸೂರ್ಯಕಾಂತ ಐನಾಪೂರ, ಈರಣ್ಣಾ ಕೆ. ಗೌತಮ ಭೋಸಲೆ, ಕೆ. ಚಂದ್ರಕಲಾ, ಅಂಜಲಿ, ಶಿವಪುತ್ರ ಸಿನ್ನೂರ, ಧನರಾಜ ಆನೆಕಲೆ, ರಘುನಾಥ ಪಾಂಚಾಳ, ವೈಜನಾಥ ಚಿಮಕೂರೆ, ಮಹಾರುದ್ರ ಡಾಕುಳಗೆ, ಸಿದ್ದು ಫುಲಾರಿ, ಕೆ. ಪರ್ವತರೆಡ್ಡಿ ಇದ್ದರು.ಪರಿಷತ್ತಿನ ನಿರ್ದೇಶಕ ಬಸವರಾಜ ಹೆಗ್ಗೆ ಸ್ವಾಗತಿಸಿದರು. ಡಾ| ಚಂದ್ರಪ್ಪ ಭತಮುರ್ಗೆ ನಿರೂಪಿಸಿದರು. ನಿರ್ದೇಶಕ ಶ್ರೀನಿವಾಸರೆಡ್ಡಿ ಚಿಲ್ಲರ್ಗಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.