ಗುತ್ತಿಗೆ ಕ್ಷೇತ್ರದಲ್ಲಿ ಕೊಳ್ಳುರ್ ವಿಶಿಷ್ಟ ಛಾಪು: ಪಾಟೀಲ
Team Udayavani, Sep 21, 2018, 12:41 PM IST
ಬೀದರ: ನಗರದ ಜಿ.ಕೆ. ಟವರ್‌ನಲ್ಲಿ ಕೊಳ್ಳುರ್ ಗುರುನಾಥ ಕನ್‌ಸ್ಟ್ರಕ್ಷನ್ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್ ಕಚೇರಿಯನ್ನು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಡೀ ರಾಜ್ಯದಲ್ಲೇ ಉತ್ತಮ ಗುಣಮಟ್ಟದ ಕೆಲಸ ಮಾಡುವ ಮೂಲಕ ಗುರುನಾಥ ಕೊಳ್ಳುರ್ ಅವರು ಗುತ್ತಿಗೆ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿಕೊಂಡಿದ್ದಾರೆ.
ನಿಗದಿತ ಅವಧಿಗಿಂತ ಮೊದಲೇ ಕೆಲಸ ಮಾಡಿ ತೋರಿಸುವುದು ಇವರ ವಿಶೇಷತೆಯಾಗಿದೆ. ವೃತ್ತಿ ಜೊತೆಗೆ ದಾನಿ ಎನಿಸಿದ್ದು, ಸಮಾಜೋಧಾರ್ಮಿಕ ಚಟುವಟಿಕೆಗಳಿಗೆ ಸದಾ ಸಹಾಯಹಸ್ತ ನೀಡುತ್ತಿದ್ದಾರೆ. ಸರಳ, ಸಜ್ಜನಿಕೆಯೇ ಇಂದು ಕೊಳ್ಳುರ್ ಅವರನ್ನು ಸಮಾಜದಲ್ಲಿ ಎತ್ತರಕ್ಕೆ ಬೆಳೆಸಿದೆ. ಸ್ವತಃ ಕಷ್ಟಗಳನ್ನು ಎದುರಿಸಿ ಮೇಲೆ ಬಂದ ಕೊಳ್ಳುರ್ ಅವರು ಸದಾ ಇನ್ನೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವ ದೊಡ್ಡ ಗುಣ ಹೊಂದಿದ್ದಾರೆ. ಜಾತಿ, ಮತದ ಭೇದ ಮಾಡದೆ ಅವಕಾಶ ಸಿಕ್ಕಾಗ ಕೈಲಾದಷ್ಟು ನೆರವು ನೀಡುವ, ಉದಾರವಾಗಿ ಸಹಾಯ ಮಾಡುವ ಮನಸ್ಸಿನವರಾಗಿದ್ದಾರೆ ಎಂದು ಹೇಳಿದರು.
ಚಿದಂಬರಾಶ್ರಮ ಸಿದ್ದಾರೂಢ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಸಮಾಜೋಧಾರ್ಮಿಕ ಕಾರ್ಯಕ್ರಮಗಳು ಕೊಳ್ಳುರ್ ಅವರು ಇಲ್ಲದೆ ನಡೆಯುವುದಿಲ್ಲ ಎಂಬಂತಿದೆ. ಸಮಾಜದ
ವಿವಿಧ ಸೇವಾ ಚಟುವಟಿಕೆಗಳಲ್ಲಿ ಕೊಳ್ಳುರ್ ಅವರು ಅಷ್ಟೊಂದು ಸಕ್ರಿಯ ಸಹಭಾಗಿತ್ವ ಹೊಂದಿರುವುದು ಮಾದರಿ. ಅವರ ಸರಳ ಜೀವನ, ಪಾಲಕರ ಬಗೆಗಿನ ಗೌರವಾಭಿಮಾನ ಇಂದಿನ ಯುವಕರಿಗೆ ಮಾದರಿಯಾಗಿದೆ.
ಹೆತ್ತವರ ಆಶೀರ್ವಾದವಿದ್ದಾಗಲೇ ಎಲ್ಲ ಹಾದಿಗಳು ಸುಗಮ ಆಗುತ್ತವೆ. ಅದಕ್ಕೆ ಕೊಳ್ಳುರ್ ಅವರ ಜೀವನ-ಸಾಧನೆಯೇ ಸಾಕ್ಷಿ ಎಂದು ಹೇಳಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ|
ಬಸವಲಿಂಗ ಪಟ್ಟದ್ದೇವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಮೇಹಕರ-ತಡೋಳಾ ಗುರುಕುಲಾಶ್ರಮದ ಶ್ರೀ ರಾಜೇಶ್ವರ ಶಿವಾಚಾರ್ಯರು, ಕೌಠಾ ಬಸವಯೋಗಾಶ್ರಮದ ಶ್ರೀ ಸಿದ್ದರಾಮ ಶರಣರು ಬೆಲ್ದಾಳ್, ಸಂಸದ ಭಗವಂತ ಖೂಬಾ ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ಕ ಅನ್ನಪೂರ್ಣ ತಾಯಿ ಅವರು ಬರೆದಿರುವ ಗುರುವಚನ ಧರ್ಮಗ್ರಂಥದ 13ನೇ ಆವೃತ್ತಿಯನ್ನು ಸಚಿವ ರಾಜಶೇಖರ ಪಾಟೀಲ್ ಬಿಡುಗಡೆ ಮಾಡಿದರು. ಬಸವಗಿರಿ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ, ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಶ್ರೀ ಶಿವಾನಂದ ಮಹಾಸ್ವಾಮೀಜಿ, ಭಾಲ್ಕಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇದ್ದೇವರು, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ, ಬಸವ ಸೇವಾ ಪ್ರತಿಷ್ಠಾನದ ಡಾ| ಗಂಗಾಂಬಿಕೆ ಅಕ್ಕ, ಬಸವ ಮಂಟಪದ ಮಾತೆ ಸತ್ಯಾದೇವಿ, ಶಾಸಕರಾದ ರಹೀಮ್ ಖಾನ್, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಅರವಿಂದಕುಮಾರ ಅರಳಿ, ಡಾ| ಚಂದ್ರಶೇಖರ ಪಾಟೀಲ, ರಮೇಶ ಮಠಪತಿ, ಗುರುನಾಥ ಕೊಳ್ಳುರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.