ಬ್ರಿಮ್ಸ್ ನಲ್ಲಿ ವೆಂಟಿಲೇಟರ್‌ಗಳ ಕೊರತೆ
Team Udayavani, Sep 23, 2020, 5:29 PM IST
ಬೀದರ: ಕೋವಿಡ್ ಸೋಂಕಿನ ಸಂದಿಗ್ಧ ಸ್ಥಿತಿಯಲ್ಲಿ ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ. ಬ್ರಿಮ್ಸ್‌ಗೆ ಮಂಜೂರಾಗಿರುವ 61 ವೆಂಟಿಲೇಟರ್‌ಗಳ ಪೈಕಿ ಸರ್ಕಾರ 40 ಯಂತ್ರ ಪೂರೈಸಿದೆ.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರೇ ಮಾಹಿತಿ ನೀಡಿದ್ದಾರೆ. ಅಧಿವೇಶನದಲ್ಲಿ ಎಂಎಲ್‌ಸಿ ವಿಜಯಸಿಂಗ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 530 ಹಾಸಿಗೆಗಳಿದ್ದು, ಅವುಗಳ ಪೈಕಿ 36 ಐಸಿಯು, 6 ಟ್ರಿಯಾಜ್ (ಚಿಕಿತ್ಸೆ ಸರದಿ) ಹಾಗೂ 488 ಆಕ್ಸಿಜನ್ ಹಾಸಿಗೆಗಳಿವೆ ಎಂದು ತಿಳಿಸಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದ್ದು, ಸೂಕ್ತ ಸಿಬ್ಬಂದಿಗಳ ನೇಮಕಾತಿ ಮಾಡದಿರುವುದೇ ಇದಕ್ಕೆ ಕಾರಣ ಎಂದು ಹೇಳಿರುವ ಸಚಿವರು, ಬ್ರಿಮ್ಸ್‌ಗೆ ಮಂಜೂರಾದ ಎ ವೃಂದದ 243ರ ಪೈಕಿ 115 ಕಾಯಂ ಹಾಗೂ 33 ಗುತ್ತಿಗೆ ನೌಕರರು, ಬಿ ವೃಂದದ 8ರ ಪೈಕಿ 3 ಕಾಯಂ, ಸಿ ವೃಂದದ 430ರ ಪೈಕಿ 285 ಕಾಯಂ ಹಾಗೂ 6 ಗುತ್ತಿಗೆ ನೌಕರರು ಮತ್ತು ಡಿ ವೃಂದದ 83ರ ಪೈಕಿ ಕೇವಲ ಒಬ್ಬ ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ರಿಮ್ಸ್ ಆಸ್ಪತ್ರೆಗೆ ಒಟ್ಟು ಎ ವೃಂದದ 33 ವೈದ್ಯರ ಹುದ್ದೆಗಳು ಮಂಜೂರಾಗಿವೆ.
ಅದರಲ್ಲಿ 31 ಹುದ್ದೆ ನೇರ ನೇಮಕಾತಿ ಹಾಗೂ ನಿಯೋಜನೆ ಮೇರೆಗೆ ಭರ್ತಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ 2 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಅದೇ ರೀತಿ ಬಿ ವೃಂದದ3ರ ಪೈಕಿ 1 ಕಾಯಂ, ಸಿ ವೃಂದದ 158ರ ಪೈಕಿ 68 ಕಾಯಂ ಮತ್ತು ಡಿ ವೃಂದದ 111ರ ಪೈಕಿ ಕೇವಲ 22 ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
1 ಸಹ ಪ್ರಾಧ್ಯಾಪಕ, 3 ಸಹಾಯಕ ಪ್ರಾಧ್ಯಾಪಕರು, 23 ಸೀನಿಯರ್ ರೆಸಿಡೆಂಟ್, ತಲಾ ಒಬ್ಬ ರಿಸರ್ಚ್ ಸೈಂಟಿಸ್ಟ್ (ಮೆಡಿಕಲ್) ರಿಸರ್ಚ್ ಸೈಂಟಿಸ್ಟ್ (ನಾನ್ ಮೆಡಿಕಲ್), 11 ಜನ ಲ್ಯಾಬ್‌ಟೆಕ್ನಿಷಿಯನ್ಸ್ ಹಾಗೂ 7 ಜನ ಡಾಟಾ ಎಂಟ್ರಿ ಆಪರೇಟರ್ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದೆ. ಎಂಬಿಬಿಎಸ್ ಪ್ರಥಮ ವರ್ಷದಿಂದ ಮೂರನೇ ವರ್ಷದವರೆಗೆ ತಲಾ 150 ವಿದ್ಯಾರ್ಥಿಗಳು ಹಾಗೂ ನಾಲ್ಕನೇ ವರ್ಷದಲ್ಲಿ 121 ಮತ್ತು ಸ್ನಾತಕೋತ್ತರಕೋರ್ಸ್‌ನಲ್ಲಿ 7 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.