ಆದಾಯದಲ್ಲಿ ಹಿಂದುಳಿದಿದ್ದೇ ರೈತರ ಬಡತನಕ್ಕೆ ಕಾರಣ
Team Udayavani, Jul 23, 2019, 4:31 PM IST
ಬೀದರ: ನಗರದ ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬೆಳಗಾವಿ ಮತ್ತು ಬೀದರ ಜಿಲ್ಲೆಯ ಆಯ್ದ ರೈತರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳಿಗಾಗಿ ತರಬೇತಿ ಕಾರ್ಯಗಾರ ನಡೆಯಿತು.
ಬೀದರ: ದೇಶದಲ್ಲಿ ಅತೀ ಹೆಚ್ಚು ಜನರು ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರವು ಆದಾಯ ಗಳಿಕೆಯಲ್ಲಿ ಅತಿ ಹಿಂದುಳಿದಿರುವುದೇ ರೈತರ ಬಡತನಕ್ಕೆ ಕಾರಣವಾಗಿದೆ ಎಂದು ಮಂಡ್ಯದ ಪ್ರಗತಿ ಪರ ರೈತ ಡಾ| ಮಂಜುನಾಥ ಹೇಳಿದರು.
ನಗರದ ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬೆಳಗಾವಿ ಮತ್ತು ಬೀದರ ಜಿಲ್ಲೆಯ ಆಯ್ದ ರೈತರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳಿಗಾಗಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀಜ, ಗೊಬ್ಬರ, ಕ್ರಿಮಿನಾಶಕ, ಕೃಷಿಕೂಲಿ ದಿನದಿಂದ ದಿನಕ್ಕೆ ಬೆಲೆ ಏರುತ್ತಿದ್ದರೆ ಫಸಲಿನ ಮಾರಾಟದ ಸಮಯದಲ್ಲಿ ಉತ್ಪನ್ನದ ಮಾರುಕಟ್ಟೆ, ಖರೀದಿ ದರ ಇಳಿಕೆಯಾಗುತ್ತಿದೆ. ಇದು ರೈತರಿಗೆ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು.
ರೈತರ ಉತ್ಪನಗಳು ಕೃಷಿ ಮಾರುಕಟ್ಟೆಗೆ ಬಂದಾಗ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕಾರಣ ಕೃಷಿಕರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುÛವತ್ತ ಹೆಚ್ಚು ಗಮನ ಹರಿಸಬೇಕು. ರಾಸಾಯನಿಕ ಗೊಬ್ಬರ ಕ್ರಿಮಿನಾಶಕಗಳನ್ನು ಬಳಸುವ ಬದಲು ತಾವೇ ಖರ್ಚಿಲ್ಲದೇ ತಯಾರಿಸಬಹುದಾದ ಉತ್ಪನ್ನಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಕ್ಕರೆ ಕಾರ್ಖಾನೆಗಳ ತ್ಯಾಜ್ಯಗಳಾದ ಬೂದಿ ಮತ್ತು ಮಡ್ಡಿಯನ್ನು ಬಳಸಿಕೊಂಡು ಅತ್ಯುತ್ತಮವಾದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ತಮ್ಮ ವಿಧಾನವನ್ನು ರೈತರೊಂದಿಗೆ ಹಂಚಿಕೊಂಡರು. ಸಕ್ಕರೆ ಉತ್ಪಾದನೆ ಬಳಿಕ ದೊರೆಯುವ ಬೂದಿಯಲ್ಲಿ ಪೊಟಾಷ್‌ನ ಅಂಶ ಅತ್ಯಧಿಕವಾಗಿದೆ. ಅಂತೆಯೇ ಕೊನೆಗೆ ಸಿಗುವ ಮಡ್ಡಿಯಲ್ಲಿ ಅತೀ ಹೆಚ್ಚು ಸಾರಜನಕ ಮತ್ತು ಗಂಧಕವೂ ದೊರಕುತ್ತದೆ. ರೈತರು ಮಡ್ಡಿಯನ್ನಷ್ಟೆ ಬಳಸಿಕೊಳ್ಳತ್ತಿದ್ದು ಸಂಗ್ರಹವಾದ ಬೂದಿ ವಿಲೇವಾರಿಯಾಗದೇ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಬೂದಿ ಮತ್ತು ಮಡ್ಡಿಯನ್ನು 1:2ರ ಪ್ರಮಾಣದಲ್ಲಿ ಬೆರೆಸಿ ಮಿಶ್ರಣಕ್ಕೆ 15 ದಿನಗಳಿಗೊಮ್ಮೆ ಆಕಳ ಸೆಗಣಿ ಗಂಜಲಗಳನ್ನು ಚಿಮುಕಿಸುತ್ತಾ 48 ದಿನಗಳ ಕಾಲ ಕೊಳೆಯಿಸಿದಾಗ ಅತ್ಯುತ್ತಮ ಗೊಬ್ಬರ ತಯಾರಾಗುತ್ತದೆ ಎಂದು ವಿವರಿಸಿದರು.
ಮಂಡ್ಯ ಜಿಲ್ಲೆಯಲ್ಲಿರುವ (ಕೋರಮಂಗಲ) ಸಕ್ಕರೆ ಕಾರ್ಖಾನೆಯೊಂದು ಈ ತರಹದ ಗೊಬ್ಬರ ತಯಾರಿಸಿ ರೈತರಿಗೆ ವಿತರಿಸುತ್ತಿದೆ. ಇದು ರೈತರಿಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಿಗುವ ಗೊಬ್ಬರವಾಗಿದ್ದು, ಲಾಭದಾಯಕವಾಗಿದೆ. ಕಾರ್ಖಾನೆಗಳಿಗೂ ತ್ಯಾಜ್ಯ ವಿಲೇವಾರಿಗೂ ಅನುಕೂಲವಾಗುತ್ತದೆ. ಕಾರಣ ರೈತರು ಈ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕ ಬಸವರಾಜ ಹೆಬ್ಟಾಳೆ ಮಾತನಾಡಿ, ರೈತರು ಆಧುನಿಕ ಕೃಷಿ ವಿಧಾನಗಳ ಜೊತೆಗೆ ಕಮ್ಮಿ ಖರ್ಚಿನ ಬಂಡವಾಳರಹಿತ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಹೊಸ ಮಾದರಿಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕ ಶರಣಪ್ಪಾ ಕನ್ನಾಳ್ಳೆ, ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಸಹಾರ್ದ ತರಬೇತಿ ಸಂಸ್ಥೆಯ ಎಸ್.ಜಿ ಪಾಟೀಲ, ಅನೀಲ್ ಪರಶೆಣ್ಯೆ, ತನ್ವಿರ ರಜಾ, ನಾಗಶೆಟ್ಟಿ ಘೊಡಂಪಳ್ಳಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Atul Subhash Case: ಪತ್ನಿ ಮೇಲಿನ ಕೇಸ್ ರದ್ದತಿಗೆ ನಿರಾಕರಣೆ
Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.