ಸಂತರಿಂದ ಭಾಷೆ-ಸಂಸ್ಕೃತಿ ರಕ್ಷಣೆ


Team Udayavani, Jan 30, 2019, 8:27 AM IST

bid-3.jpg

ಬೀದರ: ಧರ್ಮ ಉಳಿಯಲು ಸಾಹಿತ್ಯ ಬೇಕು. ಸಾಹಿತ್ಯ ಉಳಿಯಲು ಸಾಹಿತಿಗಳು ಹಾಗೂ ಸಂತರು ಬೇಕು. ಅವರ ಮಾರ್ಗದರ್ಶನದಿಂದ ಮಾತ್ರ ಭಾಷೆ ಬೆಳೆಯುತ್ತದೆ ಎಂದು ಮಹಾರಾಷ್ಟ್ರದ ಸೊಲ್ಲಾಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಧನ್ಯಕುಮಾರ ಬಿರಾಜದಾರ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಹಿಂದಿ ವಿಭಾಗದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಹಿಂದಿ ಸಾಹಿತ್ಯ ವಿಶ್ವದರ್ಜೆಗೇರಲು ಸಂತರ ಶ್ರಮ’ ಕುರಿತ ಮೊದಲನೇ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಾರತೀಯ ಸಂತರಲ್ಲಿ ಮುಖ್ಯವಾಗಿ 19ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಹಿಂದೂ ಸಂಸ್ಕೃತಿ ಎತ್ತಿ ಹಿಡಿಯುವ ಕಾರ್ಯ ಮಾಡಿದರು. ಸಂತರಿಗೆ ಸದಾ ಮಾತೃ ಹೃದಯವಿರುವುದರಿಂದ ಅವರಿಂದ ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಯಾಗುತ್ತಿದೆ ಎಂದರು.

ಜಗತ್ತಿನಲ್ಲಿ ಕೇವಲ ಶಾಸ್ತ್ರಗಳಿಂದ ಮಾತ್ರ ಅಭಿವೃದ್ಧಿಯಾಗುವುದಿಲ್ಲ. ಶಾಸ್ತ್ರದ ಜತೆಗೆ ಸಂಸ್ಕೃತಿ ಆಚರಣೆ ಕೂಡ ಮುಖ್ಯವಾಗುತ್ತದೆ. ಅದು ನಮಗೆ ಮೌಲ್ಯ, ನೈತಿಕತೆ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗುತ್ತದೆ. ಅದರಲ್ಲೂ ಹಿಂದಿ ಸಾಹಿತ್ಯ ಬಹು ಪ್ರಭಾವಶಾಲಿ ಸಾಹಿತ್ಯವಾಗಿರುವುದರಿಂದ ವಿಶ್ವ ಭಾರತದತ್ತ ನೋಡಲು ಸಹಕಾರಿಯಾಗಿದೆ ಎಂದರು. ದೇಶ ಸ್ವತಂತ್ರವಾಗಿ 7 ದಶಕಗಳು ಕಳೆದರೂ ಕೂಡ ಹಿಂದಿ ಅಂತಾರಾಷ್ಟ್ರೀಯ ಭಾಷೆಯಾಗಿ ಗುರುತಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ನಮ್ಮಲ್ಲಿನ ದೇಶಭಕ್ತಿ, ದೇಶಪ್ರೇಮದ ಕೊರತೆ, ಬಡತನ, ಅನಕ್ಷರತೆ, ಜಾತೀಯತೆ, ಭಯೊತ್ಪಾದನೆ, ಭ್ರಷ್ಟಾಚಾರ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಶ್ವ ಶಾಂತಿಗಾಗಿ ಜಗತ್ತಿನಲ್ಲಿ ನೊಬೆಲ್‌ ಪಾರಿತೋಷಕ ನೀಡಲಾಗುತ್ತಿದೆ. ಆದರೆ ಇಂದು ಭಯೋತ್ಪಾದನೆ ಹಾಗೂ ಆಕ್ರಮಣವು ಜಗತ್ತಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದೆ. ತಂತ್ರಜ್ಞಾನ ಹಾಗೂ ಭಾರಿ ಶಸ್ತ್ರಾಸ್ತ್ರಗಳಿಂದ ದೇಶ ಅಭಿವೃದ್ಧಿಯಾಗುವುದಿಲ್ಲ. ಅಲ್ಲಿ ಸಾಹಿತ್ಯದ ಗಂಧ ಬೆಳೆಯಬೇಕೆಂದು ಹೇಳಿದರು.

‘ಹಿಂದಿ ಭಾಷೆಯನ್ನು ಅಂತಾರಾಷ್ಟ್ರೀಯ ಭಾಷೆಯಾಗಿ ಪರಿವರ್ತಿಸಲು ಸಾಹಿತಿಗಳ ಪರಿಶ್ರಮ’ ಕುರಿತು ದೆಹಲಿಯ ಸಾಹಿತಿ ಡಾ| ಹರೀಶ ಅರೋಡಾ ವಿಚಾರ ಮಂಡಿಸಿದರು. ಜಾಗತಿಕ ಮಟ್ಟದಲ್ಲಿ ಹಿಂದಿ ಭಾಷೆಯ ಸ್ಥಿತಿಗತಿ ಕುರಿತು ಡಾ| ಗಣಪತ ರಾಠೊಡ್‌ ವಿಚಾರ ಮಂಡಿಸಿದರು. ಬೆಲ್ಜಿಯಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಮೇಶಚಂದ್ರ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಡಾ| ಸವಿತಾ ತಿವಾರಿ, ಪ್ರೊ| ಹೇಮಾ ಸುಲ್ತಾನಪುರೆ, ಅನುಸೂಯಾ ಗಾಯಕವಾಡ, ಆನಂದರಾವ್‌ ಶೇರಿಕಾರ, ಡಾ| ಲಕ್ಷ್ಮಣ ಭೋಸಲೆ ಹಾಗೂ ಇನ್ನಿತರರು ಇದ್ದರು.

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.