ಲಾಕ್‌ಡೌನ್‌: ಬೀದಿಗೆ ಬಂತು ಛಾಯಾಗ್ರಾಹಕರ ಬದುಕು


Team Udayavani, Apr 28, 2020, 6:15 PM IST

BIDAR-TDY-1

ಬೀದರ: ದೇಶದಲ್ಲಿ ತಲ್ಲಣ್ಣ ಸೃಷ್ಟಿಸುತ್ತಿರುವ ಕೋವಿಡ್ 19 ಬಾಧೆ ಛಾಯಾಗ್ರಹಣ ಉದ್ಯಮಕ್ಕೂ ಪೆಟ್ಟು ನೀಡಿದೆ. ಲಾಕ್‌ಡೌನ್‌ದಿಂದಾಗಿ ಮದುವೆ ಸೇರಿ ಶುಭ ಕಾರ್ಯಗಳೆಲ್ಲವೂ ರದ್ದಾಗಿರುವುದರಿಂದ

ಫೋಟೋಗ್ರಾಫಿಯನ್ನೇ ನಂಬಿ ಬದುಕಿನ ಬಂಡಿ ಸಾಗಿಸುತ್ತಿದ್ದ ಜಿಲ್ಲೆಯ ನೂರಾರು ಛಾಯಾಗ್ರಾಹಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನಕ್ಕಾಗಿ ಕ್ಯಾಮರಾಗಳನ್ನೇ ಮಾರುವ ಸ್ಥಿತಿ ಬಂದಿದೆ. ಫೆಬ್ರವರಿಯಿಂದ ಜೂನ್‌ ತಿಂಗಳು ಮದುವೆ ಸಮಯ. ಕೋವಿಡ್ 19  ಸೋಂಕಿನ ಭೀತಿಯಿಂದ ಮದುವೆ ಸಮಾರಂಭಗಳಿಗೆ ತಡೆ ಬಿದ್ದಿದೆ. ಇದರಿಂದ ವೃತ್ತಿನಿರತ ಛಾಯಾಗ್ರಾಹಕರ ಉದ್ಯಮಕ್ಕೆ ಕೊರೊನಾ ದೊಡ್ಡ ಮಟ್ಟದ ಹೊಡೆತ ನೀಡಿದೆ. ಹಾಗಾಗಿ ಸಭೆ-ಸಮಾರಂಭಗಳಲ್ಲಿ ಚೆಂದದ ಚಿತ್ರಗಳನ್ನು ಸೆರೆ ಹಿಡಿದು ಎಲ್ಲರ ಮುಖದಲ್ಲೂ ನಗು ಅರಳಿಸುತ್ತಿದ್ದ ಛಾಯಾಗ್ರಾಹಕರ ಮುಖದ ಮೇಲಿನ ನಗುವೇ ಮಾಯವಾಗಿದೆ.

ಬದಲಾದ ಕಾಲಘಟ್ಟದಲ್ಲಿ ಫೋಟೋಗ್ರಾಫಿಯೂ ಸಹ ವೈವಿಧ್ಯತೆಗೆ ಒಳಗಾಗುತ್ತಿದೆ. ಸಮಾರಂಭಗಳ ಜತೆಗೆ ಪ್ರೀ ವೆಡ್ಡಿಂಗ್‌ನಂಥ ಫೋಟೋ ಶೂಟ್‌ ಗಳು ಹೆಚ್ಚುತ್ತಿವೆ. ಇದಕ್ಕಾಗಿ ತಂತ್ರಜ್ಞಾನಕ್ಕೆ ತಕ್ಕಂತೆ ಛಾಯಾಗ್ರಾಹಕರು ಉತ್ತಮ ದರ್ಜೆ ಕ್ಯಾಮೆರಾಗಳನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎರಡೂ¾ರು ಲಕ್ಷ ರೂ. ಬಂಡವಾಳ ಹಾಕಿದ್ದಾರೆ. ಜತೆಗೆ ಪ್ರತ್ಯೇಕವಾದ ಎಲ್‌ ಇಡಿ ಪರದೆ, ಡ್ರೋಣ್‌ ಕ್ಯಾಮರಾ, ಶೂಟಿಂಗ್‌ ಮತ್ತು ಮಿಕ್ಸಿಂಗ್‌ ಯೂನಿಟ್‌ಗಳಿಗೆ ಲಕ್ಷಾಂತರ ರೂ. ಹೂಡಿದ್ದು, ಛಾಯಾಗ್ರಹಣವೂ ಸಹ ಉದ್ಯಮವಾಗಿ ಬೆಳೆದಿದೆ.

ಪ್ರತಿ ವರ್ಷ ಮದುವೆ ಸೀಸನ್‌ ದಿನಗಳಲ್ಲಿ 15-20 ಸಮಾರಂಭಗಳನ್ನು ಮಾಡುತ್ತ ಲಕ್ಷಾಂತರ ರೂಪಾಯಿಗಳ ಉತ್ತಮ ವಹಿವಾಟು ನಡೆಸುತ್ತಿದ್ದ ಛಾಯಾಗ್ರಾಹಕರು ಉಳಿದ ತಿಂಗಳು ನಾಮಕರಣ, ಮನೆ ವಾಸ್ತು, ಜನ್ಮದಿನದಂತಹ ಕಾರ್ಯಕ್ರಮ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅನೇಕ ಯುವಕರ ಉದ್ಯೋಗಕ್ಕೆ ಈ ವ್ಯವಹಾರ ಆಶ್ರಯವೂ ಆಗಿದೆ. ಆದರೆ, ಈಗ ಛಾಯಾಗ್ರಾಹಣ ಉದ್ಯಮಕ್ಕೆ ಕೋವಿಡ್ 19 ಲಾಕ್‌ಡೌನ್‌ ಬರಸಿಡಿಲು ಬಡಿದಂತಾಗಿದ್ದು, ದುಡಿಮೆ ಕಿತ್ತುಕೊಂಡಿದೆ. ಬಹುತೇಕ ಮದುವೆಗಳು ಮುಂದೂಡಲಾಗಿದ್ದರೆ, ಕೆಲವರು ಸರಳವಾಗಿ ದೇವಸ್ಥಾನ, ನೋಂದಣಿ ಕಚೇರಿಯಲ್ಲಿ ಶುಭ ಕಾರ್ಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೈಗೆ ಕೆಲಸವೂ ಇಲ್ಲದೇ, ಇತ್ತ ಗ್ರಾಹಕರಿಗೆ ಮುಂಗಡ ಹಣ ವಾಪಸ್‌ ನೀಡಲು ಸಹ ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.

ಬೀದರ ನಗರ ಸೇರಿದಂತೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಛಾಯಾಗ್ರಾಹಕರಿದ್ದು, ವಿಡಿಯೋ ಮತ್ತು ಫೋಟೋಗ್ರಾಫಿ ವೃತ್ತಿ ರೂಢಿಸಿಕೊಂಡಿದ್ದಾರೆ. 90ಕ್ಕೂ ಹೆಚ್ಚು ಸ್ಟುಡಿಯೋಗಳು ನಡೆಸುತ್ತ ವ್ಯವಹರಿಸುತ್ತಾರೆ. ಕೆಲವರು ಮನೆಯಿಂದಲೇ ಆರ್ಡರ್‌ ತೆಗೆದುಕೊಂಡು ವಹಿವಾಟು ಮಾಡುತ್ತಿದ್ದಾರೆ. ಈಗ ಈ ವೃತ್ತಿಯನ್ನು ನಂಬಿರುವ ಕುಟುಂಬಗಳು ಬೀದಿಗೆ ಬಂದಿವೆ.

ಕೋವಿಡ್ 19  ಸೋಂಕು ಛಾಯಾಗ್ರಾಹಕರ ದುಡಿತಯನ್ನೇ ಕಿತ್ತುಕೊಂಡಿದೆ. ಲಾಕ್‌ಡೌನ್‌ದಿಂದಾಗಿ ಮದುವೆ ಸಮಾರಂಭಗಳು ರದ್ದಾಗಿ ಲಕ್ಷಾಂತರ ರೂ. ನಷ್ಟ ಆಗಿದೆ. ಕಾರ್ಯಕ್ರಮಗಳು ರದ್ದಾಗಿರುವುದರಿಂದ ಗ್ರಾಹಕರು ಕೊಟ್ಟ

ಮುಂಗಡ ಹಣವನ್ನು ಹಿಂದಿರುಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲಸಗಾರರ ಪರಿಸ್ಥಿತಿ ಹೇಳ ತೀರದ್ದಾಗಿದೆ. ಸರ್ಕಾರ ಇಂಥವರ ನೆರವಿಗೆ ಧಾವಿಸಬೇಕಿದೆ.  ಉದಯ ಜೀರ್ಗೆ, ಸ್ಟುಡಿಯೋ ಮಾಲೀಕ

 

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಖಂಡ್ರೆ

By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.