ಮೋಸ ತಡೆಗೆ ಗ್ರಾಹಕರು ಎಚ್ಚರ ವಹಿಸಲಿ
Team Udayavani, Jan 7, 2022, 5:22 PM IST
ಬೀದರ: ಅಂಗಡಿಗಳಲ್ಲಿ ಗ್ರಾಹಕರಿಗೆ ಮುದ್ರಿತ ರಸೀದಿ ಬದಲು ಬಿಳಿ ಚೀಟಿಗಳ ಮೇಲೆ ಬರೆದುಕೊಡುವ ಮೋಸದ ವ್ಯವಹಾರ ನಡೆಯುತ್ತಿದೆ. ಇಂತಹದರಿಂದ ಗ್ರಾಹಕರು ಜಾಗೃತಗೊಂಡು ತಪ್ಪದೆ ಖರೀದಿಸಿದ ವಸ್ತುಗಳಿಗೆ ರಸೀದಿ ಪಡೆದು, ಗುಣಮಟ್ಟ ಪರೀಕ್ಷಿಸಿಕೊಳ್ಳಬೇಕು. ತಪ್ಪು ಕಂಡುಬಂದಲ್ಲಿ ದೂರು ನೀಡಿ ಪರಿಹಾರ ಪಡೆಯಬಹುದು ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಪಿ ಸಿದ್ರಾಮ್ ಹೇಳಿದರು.
ನಗರದ ಲಕ್ಷ್ಮೀಬಾಯಿ ಕಮಠಾಣೆ ಕಾಲೇಜು ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಾಹರಗಳ ಇಲಾಖೆ, ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ 1986ರಲ್ಲಿ ಕಾಯ್ದೆ ಜಾರಿಗೆ ಮಾಡಿತ್ತು, ನಂತರ 2020ರಲ್ಲಿ ತಿದ್ದುಪಡಿ ಮಾಡಿ ಸಂರಕ್ಷಣಾ ಕಾಯ್ದೆ ಅಡಿಯಡಿ ಆನ್‌ಲೈನ್ ಬಿಜ್ನೆಸ್ ಈ ಕಾಮರ್ಸ್ ವ್ಯವಾಹರ ಸೇರ್ಪಡೆಗೊಳಿಸಲಾಯಿತು. ಗ್ರಾಹಕ ಮೋಸ ಹೋದರೆ ಜಿಲ್ಲಾ ಮಟ್ಟದಲ್ಲಿ ಗ್ರಾಹಕರ ವೇದಿಕೆಗೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಬಹುದು 20 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಪರಿಹಾರವನ್ನು ಪಡೆಯಬಹುದಾಗಿದೆ, 10 ಕೋಟಿ ರೂ. ವರೆಗಿನ ಪರಿಹಾರವನ್ನು ರಾಜ್ಯ ಗ್ರಾಹಕರ ಆಯೋಗದಲ್ಲಿ ಪಡೆಯಬಹುದು ಎಂದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಕವಿತಾ ಹುಷಾರೆ ಮಾತನಾಡಿ, ಗ್ರಾಹಕರಿಗೆ 6 ಹಕ್ಕುಗಳನ್ನು ನೀಡಲಾಗಿದೆ. ಮೋಸ ಹೋಗದೇ ಗ್ರಾಹಕರು ಬಿಳಿ ಹಾಳೆಯ ಮೂಲಕ ದೂರು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದರು.
ಇಲಾಖೆಯ ಉಪ ನಿರ್ದೇಶಕ ಬಿ. ಬಾಬುರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗಡಿಗಳಲ್ಲಿ ರಸೀದಿ ನೀಡುವುದಿಲ್ಲ, ಬೀಳಿ ಚೀಟಿಯ ಮೇಲೆ ಬರೆದುಕೊಡುವ ಪರಿಪಾಠ ಬೆಳೆದು ಬಂದಿರುವುದು ವಿಷಾದಕರ ಸಂಗತಿ. ಟ್ರೆಡ್ ಲೈಸನ್ಸ್ ರದ್ದಿಗೂ ಅವಕಾಶವಿದ್ದು, ಈಗ ವ್ಯಾಪಾರಿಗಳು ಚಾಚು ತಪ್ಪದೇ ಆಯೋಗದ ಆದೇಶ ಪಾಲಿಸಬೇಕು. ಇಲ್ಲದಿದ್ದಲ್ಲಿ ಸಿವಿಲ್ ನ್ಯಾಯಾಲಯದ ನಿಯಮದಂತೆ ಲಕ್ಷ ರೂ.ವರೆಗೆ ದಂಡ, ಗರಿಷ್ಠ 3 ವರ್ಷಗಳಿಗೆ ಜೈಲು ಶಿಕ್ಷೆ ವಿಧಿಸಲು ಹೊಸ ಕಾಯ್ದೆಯಲ್ಲಿ ತಿದ್ದುಪಡಿ ಹೊಂದಿದೆ. ಗ್ರಾಹಕರು ಜಾಗೃತಿಗೊಳ್ಳಬೇಕು. ಪ್ರತಿಶಾಲೆಯಲ್ಲಿ ಮಕ್ಕಳಿಗಾಗಿ ವಿದ್ಯಾರ್ಥಿ ಗ್ರಾಹಕರ ಕ್ಲಬ್ ಗಳನ್ನು ರಚಿಸಲಾಗುತ್ತಿದೆ ಎಂದರು.
ಆಯೋಗದ ಸಹಾಯಕ ನಿಬಂಧಕಿ ಸಿದ್ದಮ್ಮ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈಜಿನಾಥ ಕಮಠಾಣೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಅಧ್ಯಕ್ಷ ಬಸವರಾಜ ಪವಾರ, ಅಧಿಕಾರಿಗಳಾದ ಎಸ್.ಎಸ್. ಮಠಪತಿ, ರಾಜು ಸೂರ್ಯಾನ್, ಮಹೇಶ ಪಾಲಂ, ರೇವಣಸಿದ್ದಯ್ನಾ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ ಇನ್ನಿತರರಿದ್ದರು. ಕಾಲೇಜಿನ ಪ್ರಾಂಶುಪಾಲ ನಾಗೇಶ ಬಿರಾದಾರ ಕೌಠಾ ನಿರೂಪಿಸಿ ವಿನೋದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.