ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವಂತಾಗಲಿ
Team Udayavani, Jun 23, 2022, 3:13 PM IST
ಭಾಲ್ಕಿ: ಪರಿಣಾಮಕಾರಿ ಬೋಧನೆ ಮೂಲಕ ಉತ್ತಮ ಶಿಕ್ಷಕರು ನಿರ್ಮಾಣವಾಗುತ್ತಾರೆ. ಅಂಥ ಶಿಕ್ಷಕರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಬಿತ್ತುವಂತಾಗಲಿ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮನೋಹರ ಹೋಳಕರ್ ಹೇಳಿದರು.
ತಾಲೂಕಿನ ಲಾಧಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಮತ್ತು ಹೊಸದಾಗಿ ಬಂದವರ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ರಾಜಕುಮಾರ ಜೋಳದಾಬಕೆ ಮಾತನಾಡಿ, ವರ್ಗಾವಣೆಗೊಂಡ ಶಿಕ್ಷಕಿ ಗೋದಾವರಿ ಅವರು ಉತ್ತಮ ಸೇವೆ ಮೂಲಕ ಇಲಾಖೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ಪಾಟೀಲ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಸಂಘದ ಪ್ರಮುಖರಾದ ಸುಭಾಷ ಹುಲಸೂರೆ, ಬಸವರಾಜ ಮಡಿವಾಳ, ಅಶೋಕ ಕುಂಬಾರ, ಬಸವರಾಜ ಬಡದಾಳೆ, ಸಂತೋಷಕುಮಾರಿ ವಾಡೆ, ದತ್ತು ಮುದಾಳೆ, ಬಾಲಾಜಿ ಬೈರಾಗಿ, ಚಂದ್ರಕಾಂತ ತಳವಾಡೆ, ರಂಜೀತಸಿಂಗ್ ಠಾಕೂರ, ಸಂತೋಷ ವಾಡೆ, ಸತ್ಯವಾನ್, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ದೇಗಲೆ, ಗ್ರಾಪಂ ಅಧ್ಯಕ್ಷೆ ಪಂಚಾಬಾಯಿ, ಗೋದಾವರಿ ಕೋಡ್ಲಿ, ಲಕ್ಷ್ಮೀ ಟಿಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ED Raids: ಹಣಕಾಸು ಅಕ್ರಮ ಕೇಸ್: ಲಾಟರಿ ಕಿಂಗ್ ಮಾರ್ಟಿನ್ ಕಚೇರಿಗಳ ಮೇಲೆ ಇ.ಡಿ. ದಾಳಿ
Indira Gandhi ಮುಂದೆ ಅಮಿತ್ ಶಾ ಬಚ್ಚಾ!: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ
BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!
Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ
Bantwala: ಬೋಳಂಗಡಿ; ಅಡಿಕೆ ಕೀಳುತ್ತಿದ್ದ ಕಾರ್ಮಿಕ ಮರದಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.