ವೈದ್ಯರು ಮಾನವೀಯತೆ ಮೈಗೂಡಿಸಿಕೊಳ್ಳಲಿ
Team Udayavani, Aug 22, 2021, 4:42 PM IST
ಬೀದರ: ಶಿಕ್ಷಣ ಎಂದರೆ ಕೇವಲ ಜ್ಞಾನವಲ್ಲ. ಜ್ಞಾನದಜೊತೆಗೆ ಮಾನವೀಯತೆ, ಸಹಕಾರ ಮತ್ತು ಪ್ರೀತಿವಾತ್ಸಲ್ಯ ಇತರರಿಗೆ ತೋರಿಸುವುದಾಗಿದೆ. ಭವಿಷ್ಯದವೈದ್ಯರಾದ ನೀವುಗಳು ಇವುಗಳನ್ನು ಮೈಗೂಡಿಸಿಕೊಂಡುಉತ್ತಮ ಸೇವೆ ಸಲ್ಲಿಸಬೇಕೆಂದು ಕೇಂದ್ರದ ಮಾಜಿ ಸಚಿವಶಿವರಾಜ ಪಾಟೀಲ ಚಾಕೂರಕರ್ ಹೇಳಿದರು.
ನಗರದ ಎನ್.ಕೆ ಜಾಬಶೆಟ್ಟಿ ಆಯುರ್ವೇದಿಕ್‌ಮೆಡಿಕಲ್ ಕಾಲೇಜು ಹಾಗೂ ಸಿದ್ಧಾರೂಢಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಸಿದ್ಧಾರೂಢಧರ್ಮಾರ್ಥ ಆಸ್ಪತ್ರೆಯಲ್ಲಿ ನಡೆದ ಪದವಿ ಮುಗಿಸಿದವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ಎಂದರೆ ದೇವರಿಗೆ ಸಮಾನ ಎಂಬಮಾತಿದೆ. ಆ ನಿಟ್ಟಿನಲ್ಲಿ ಇಂದಿನ ವೈದ್ಯರು ಬದುಕಲುಪ್ರಯತ್ನ ಮಾಡಬೇಕು. ಕಾಲೇಜಿನ ಶಿಸ್ತುಬದ್ಧವಾತಾವರಣ, ಬಹುತೇಕ ಮಹಿಳೆಯರು ಹೆಚ್ಚು ಪದವಿಪಡೆದಿರುವುದು ಸಂತಸ ತಂದಿದೆ. ವೈದ್ಯರು ಎಂದರೆತ್ಯಾಗಮೂರ್ತಿಗಳು. ರೋಗಿಯ ಜೀವ ಕಾಪಾಡುವಲ್ಲಿಅವರ ಪಾತ್ರ ಪ್ರಮುಖವಾಗಿದೆ ಎಂದರು.ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಹಾಗೂ ರಾಸಾಯನಿಕ ರಸಗೊಬ್ಬರ ಖಾತೆಯ ರಾಜ್ಯಸಚಿವ ಭಗವಂತ ಖೂಬಾ ಮಾತನಾಡಿ, ಆಯುರ್ವೇದಪದ್ಧತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ ದೇಶ.ಪ್ರಧಾನಿ ಮೋದಿಯವರ ಯೋಜನೆಯಾದ ಜನೌಷ ಧಿಕೇಂದ್ರದ ಮೂಲಕ ರೋಗಿಗಳಿಗೆ ಕಡಿಮೆ ದರದಲ್ಲಿಔಷಧ ವಿತರಣೆ ಮಾಡಲಾಗುತ್ತಿದೆ ಎಂದರು.
ಪ್ರಾಚಾರ್ಯ ಡಾ| ಎ.ಆರ್.ವಿ ಮೂರ್ತಿ ಮಾತನಾಡಿ,ರೋಗಿಯ ನೋವು ಅರ್ಥಮಾಡಿಕೊಂಡವನೇನಿಜವಾದ ವೈದ್ಯ. ರೋಗಿಗೆ ಭಯಪಡಿಸದೆ ಸೂಕ್ತಚಿಕಿತ್ಸೆ ನೀಡಿ ಧೈರ್ಯ ತುಂಬಬೇಕು. ವೈದ್ಯರಾದವರುಸಂಪೂರ್ಣ ಜ್ಞಾನ ಪಡೆಯಬೇಕು. ರೋಗಿಗಳಿಗೆಧನಾತ್ಮಕ ವಿಚಾರ ಕುರಿತು ತಿಳಿಸಿ, ರೋಗ ಗುಣಮುಖಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಇದುವೇನಿಜವಾದ ವೈದ್ಯರ ಕರ್ತವ್ಯ ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಡಾ|ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ,ಪ್ರಭುಶೆಟ್ಟಿ ಮುದ್ದಾ, ಡಾ| ವಿ.ಎಸ್. ಪಾಟೀಲ, ಬಿ.ಜಿ.ಶೆಟಕಾರ, ಡಾ| ಚಂದ್ರಕಾಂತ ಹಳ್ಳಿ, ಡಾ| ಬ್ರಹ್ಮಾನಂದಸ್ವಾಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.