ಕನ್ನಡ ಸಂಘ ಸಮಾಜದಲ್ಲಿ ಸೌಹಾರ್ದ ಗಟ್ಟಿಗೊಳಿಸಲಿ
Team Udayavani, Sep 1, 2022, 7:20 PM IST
ಬೀದರ: ಕನ್ನಡ ಸಂಘಗಳು ಸಾಹಿತ್ತಿಕ ಚಟುವಟಿಕೆಗಳ ಜತೆಗೆ ಸಮಾಜದಲ್ಲಿ ಕೋಮು ಸೌಹಾರ್ದ ಗಟ್ಟಿಗೊಳಿಸುವ ಕೆಲಸವನ್ನೂ ಮಾಡಬೇಕು ಎಂದು ಪ್ರಾಚಾರ್ಯ ಡಾ| ದೇವಿದಾಸ ತುಮಕುಂಟೆ ಹೇಳಿದರು.
ರೇ. ಡಾ| ಜೆ.ಟಿ. ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಗರದ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಡಾ| ಜೆ.ಟಿ. ಸೀಮಂಡ್ಸ್ ಅವರ ಪುಣ್ಯ ಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಸೇವೆಯೆಂದರೆ ಕೇವಲ ಕತೆ, ಕವಿತೆ, ನಾಟಕ ಬರೆಯುವುದಷ್ಟೇ ಅಲ್ಲ. ಸಾಹಿತ್ಯ ಕೃಷಿಯೊಂದಿಗೆ ತಳ ಸಮುದಾಯದವರ ಬದುಕು ಕಟ್ಟಿಕೊಡುವ, ಅವರ ಬವಣೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸವೂ ಆಗಬೇಕು. ಸಂಘಗಳು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಸಹ ಶ್ರಮಿಸಬೇಕು ಎಂದರು.
ಎಸ್‌ಬಿಐ ನಿವೃತ್ತ ವ್ಯವಸ್ಥಾಪಕ ಜೈಕರ್ ರತ್ನಪ್ಪ ಮಾತನಾಡಿ, ಡಾ| ಸೀಮಂಡ್ಸ್ ಕುಟುಂಬ, ಅವರ ತಂದೆ ತಾತ ಸೀಮಂಡ್ಸ್ ಕೂಡ ಕನ್ನಡ ಸೇವೆ ಮಾಡಿದ್ದರು. ಆಂಗ್ಲ ಮಿಷನರಿಗಳ ಪ್ರತಿನಿಧಿಗಳು ಕನ್ನಡ ಕಲಿತಿದ್ದರು. ಅಚ್ಚ ಕನ್ನಡದಲ್ಲೇ ಮಾತನಾಡುತ್ತಿದ್ದರು. ವೇಷ ಭಕ್ತಿ-ವಿಶೇಷ ಭಕ್ತಿ, ನೀನು ಹೊಸದಾಗಿ ಹುಟ್ಟಬೇಕು. ಶಿಲುಬೆಗಳು, ಯೇಸುವಿನ ಕೈಗಳು ಮತ್ತು ಭಕ್ತಿ ಭಜನೆ ಸಂಗ್ರಹ ಸೇರಿ ಹಲವು ಕನ್ನಡ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಕೆ. ಸುಂದರರಾಜ್ ಮಾತನಾಡಿ, ಕ್ರೈಸ್ತರಲ್ಲಿಯೂ ಪ್ರತಿಭಾವಂತ ಸಾಹಿತಿಗಳು, ಸಂಶೋಧಕರು ಇದ್ದಾರೆ. ಸಂಘ ಅಂಥವರನ್ನು ಗುರುತಿಸಿ, ವೇದಿಕೆ ಒದಗಿಸುವ ಕೆಲಸ ಮಾಡುತ್ತಿದೆ. ಬರುವ ದಿನಗಳಲ್ಲಿ ಸಾಹಿತ್ಯ ರಚನೆ, ಸಂಶೋಧನೆ ಹಾಗೂ ಪ್ರಕಟಣೆ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಸಹಾಯಕ ಸಭಾಪಾಲಕ ಪುನೀತಕುಮಾರ ಮಾತನಾಡಿ, ಜಗತ್ತಿನ ಕೆಲವೇ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಈ ಭಾಷೆ ಓದಲು, ಬರೆಯಲು ಹಾಗೂ ಮಾತನಾಡಲು ಬಹಳ ಸರಳವಾಗಿದೆ. ಇಂಥ ಸುಲಭ, ವಿದ್ವತ್ ಪೂರ್ಣ ಸಾಹಿತ್ಯ ಹೊಂದಿರುವ ಭಾಷೆ ಜಗತ್ತಿನಲ್ಲೇ ಮತ್ತೂಂದಿಲ್ಲ ಎಂದು ಹೇಳಿದರು. ಚರ್ಚ್ ಸಹಾಯಕ ಸಭಾಪಾಲಕ ರೇ. ಸ್ಯಾಮಸನ್ ಡ್ಯಾನಿಯಲ್, ರೇ. ದೇವದಾನ ಆನಂದಪ್ಪ ಇದ್ದರು.ಸಂಘದ ಉಪಾಧ್ಯಕ್ಷ ಟಿ.ಜೆ. ಹಾದಿಮನಿ ನಿರೂಪಿಸಿದರು. ಗೌರವಾಧ್ಯಕ್ಷ ಶಿರೋಮಣಿ ತಾರೆ ಸ್ವಾಗತಿಸಿದರು. ಕಾನೂನು ಸಲಹೆಗಾರ ಯೇಶಪ್ಪ ಮೇತ್ರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.