ಸಾಹಿತಿಗಳು ಸಮಾಜಮುಖೀಯಾಗಲಿ
Team Udayavani, Oct 22, 2018, 12:08 PM IST
ಬೀದರ: ದಮನಿತರು, ಶೋಷಿತರು, ದಲಿತ, ನಿರ್ಗತಿಕರ ಹಾಗೂ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸಾಹಿತಿಗಳು ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಾಹಿತಿ ಶಶಿಕಲಾ ವಸ್ತ್ರದ ಹೇಳಿದರು.
ನಗರದ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಜಾನಪದ ಕಲಾವಿದರ ಬಳಗ ಮತ್ತು ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೀದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಾಟಕೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ನಾನು 45 ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಥೆ, ಕಾದಂಬರಿ, ಕಾವ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದೇನೆ. ಕಾವ್ಯ ಎಲ್ಲರಿಗೂ ಒಗ್ಗುವ ಸಾಹಿತ್ಯವಲ್ಲ. ಸತತ ಅಧ್ಯಯನ ಮಾಡಿ ಹೊಸ ಹೊಸ ಶಬ್ದಗಳ ಸಂಗ್ರಹ ಮಾಡಿದ ಬಳಿಕ ಕಾವ್ಯ ರಚನೆಗೆ ಪೂರಕ ಶಕ್ತಿ ದೊರೆಯುತ್ತದೆ. ತಮ್ಮದಷ್ಟೇ ಅಲ್ಲ, ಬೇರೆಯವರ ಸಾಹಿತ್ಯ ಓದಬೇಕು. ಇದರಿಂದ ಸಾಹಿತಿಗಳಿಗೆ ಹೊಸ ವಿಚಾರಗಳು ಮೂಡುತ್ತವೆ. ಆಗ ಮನಸ್ಸಿನಿಂದ ತನ್ನಿಂದ ತಾನೆ ಕಾವ್ಯ ಹೊರ ಹೊಮ್ಮುತ್ತದೆ ಎಂದರು.
ಈ ಹಿಂದೆ ವಿರ್ಮಶಕರು ಮಹಿಳಾ ಸಾಹಿತಿಗಳ ಬಗ್ಗೆ ವೈಯಕ್ತಿಕ ವಿಚಾರಗಳನ್ನು ವಿರ್ಮಶೆಯಲ್ಲಿ ಅನಾವಶ್ಯಕವಾಗಿ ಎಳೆದು ತರುತ್ತಿದ್ದರು. ಆದರೆ, ಈಗ ಅದು ಇಲ್ಲ. ಈಗ ಎಲ್ಲ ಬದಲಾಗಿದೆ. ಮಹಿಳಾ ಸಾಹಿತಿಗಳು ಸಶಕ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಹಿತ್ಯದ ಪ್ರತಿಯೊಂದು ಪ್ರಕಾರಗಳಲ್ಲಿ ಬರೆಯುವ ಹುಮ್ಮಸ್ಸು, ಉತ್ಸಾಹ ಅವರಲ್ಲಿ ಮನೆ ಮಾಡಿದೆ ಎಂದರು.
ಸಾಹಿತಿ ದೇಶಾಂಶ ಹುಡಗಿ ಮಾತನಾಡಿ, ದೇವಿದಾಸ ಚಿಮಕೋಡೆಯವರು ದಲಿತರ ಮಧ್ಯೆ ಬಾಳಿ, ದಲಿತರ ಭಾವನೆಗಳಿಗೆ ಗಾಯನ ಸ್ವರೂಪ ಕೊಟ್ಟು ಹಾಡಿದ ಕಲಾವಿದರು. ಅವರು ಹೊಸ ಹೆಜ್ಜೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇವರ ಹೆಜ್ಜೆಗಳು ಹೀಗೇ ಅಭಿವೃದ್ಧಿ ಪಥದಲ್ಲಿ ಸಾಗಲ್ಲಿ ಎಂದರು.
ಕಾರ್ಯಕ್ರಮಕ್ಕೆ ಮುನ್ನ ಗದಗ ಜಿಲ್ಲೆಯ ಡಾ| ತೋಂಟದ ಸಿದ್ಧಲಿಂಗ ಸ್ವಾಮಿಜೀಯವರು ನಿಧನಕ್ಕೆ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ದೇವದಾಸ ಚಿಮಕೋಡೆಯವರ ಹೊಸ ಹೆಜ್ಜೆ (ಜನ ಜಾಗೃತಿ ಹಾಡುಗಳು) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಬಿ.ಸಂದೀಪ ಕಲಬುರಗಿ, ಆಶಾ ಚಿಮಕೊಡೆ, ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಮುದಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಜಾನಪದ ಕಲಾವಿದರ ಬಳಗದ ಅಂಬರೀಶ ಮಲ್ಲೇಶಿ, ಭಾರತಿ ವಸ್ತ್ರದ, ಪಾರ್ವತಿ ಸೋನಾರೆ, ಫರ್ನಾಂಡೀಸ್ ಹಿಪ್ಪಳಗಾಂವ, ಶಂಭುಲಿಂಗ ವಾಲೊಡ್ಡಿ, ಎಂ.ಎಸ್. ಮನೋಹರ, ಚಂದ್ರಪ್ಪ ಹೆಬ್ಟಾಳಕರ, ಅರುಣ ಪಟೇಲ, ಮಹೇಶ ಗೋರನಾಳಕರ್, ರಾಜಕುಮಾರ ಶೇರಿಕಾರ ಗಾದಗಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.