ಜನತಾ ಪ್ರಜಾಪ್ರಭುತ್ವ ಸ್ಥಾಪನೆಯಾಗಲಿ
Team Udayavani, Nov 25, 2021, 2:21 PM IST
ದೇವದುರ್ಗ: ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ, ಬಡತನ ನಿವಾರಣೆ ದೂರವಾಗಲು ದೇಶದಲ್ಲಿ ಜನತಾ ಪ್ರಜಾಪ್ರಭುತ್ವ ರಂಗ ಸ್ಥಾಪನೆ ಆಗಬೇಕು ಎಂದು ಸಿಪಿಐಎಂ ಸಂಘಟನೆ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.
ತಾಲೂಕಿನ ಜಾಲಹಳ್ಳಿ ಗ್ರಾಮದ ಪೊಲೀಸ್ ಠಾಣೆ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾ 13ನೇ ಸಿಪಿಐಎಂ ಸಮ್ಮೇಳನ ಬಹಿರಂಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ, ಕೂಲಿ ಕಾರ್ಮಿಕರಿಗೆ, ಯುವಕರಿಗೆ ಉದ್ಯೋಗ ಶುಭ ದಿನ ತರುತ್ತೇವೆ ಎಂದು ಅಧಿಕಾರಕ್ಕೆ ಬಂದು ಏಳು ವರ್ಷವಾದರೂ ಸುಳ್ಳಿನ ಭರವಸೆಯಲ್ಲೇ ಕಾಲಹರಣ ಮಾಡಲಾಗುತ್ತಿದೆ. ಹಸಿವು, ಅಪೌಷ್ಟಿಕತೆಯಿಂದ ಐದು ಸೆಕೆಂಡ್‌ಗೆ 12 ಜನರು ಸಾವನ್ನಪುತ್ತಿದ್ದಾರೆ. ಕೇಂದ್ರ ಸರಕಾರಕ್ಕೆ 35ರಿಂದ 40 ಲಕ್ಷ ಕೋಟಿ, ರಾಜ್ಯ ಸರಕಾರಕ್ಕೆ 2 ಲಕ್ಷ ಕೋಟಿ ರೂ. ಜನರಿಂದ ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ದೇಶದಲ್ಲಿ ಹಸಿವು, ಅಪೌಷ್ಟಿಕತೆ, ಬಡತನ ನಿವಾರಣೆ ಆಗುತ್ತಿಲ್ಲ ಎಂದು ದೂರಿದರು.
107 ದೇಶಗಳಲ್ಲಿ ಅಪೌಷ್ಟಿಕತೆ ಹೆಚ್ಚಿದ್ದು, ಅದರಲ್ಲಿ ಭಾರತ್ 101ನೇ ಸ್ಥಾನದಲ್ಲಿದೆ. ಬಿಸಿಯೂಟ, ಅಸಂಘಟಿತರು, ಕೂಲಿ ಕಾರ್ಮಿಕರಿಗೆ ದಿನಕ್ಕೆ 750 ರೂ. ವೇತನ ಸೌಲಭ್ಯ ಜಾರಿಗೆ ತರಬೇಕು. ರೈತರು ಬೆಳೆದ ಬೆಳೆಗಳಿಗೆ ವೆಚ್ಚ ಭರಿಸದಷ್ಟು ಬೆಂಬಲ ಬೆಲೆ ನೀಡಬೇಕು. ಖರೀದಿ ಕೇಂದ್ರಗಳು ಆರಂಭಿಸಬೇಕು. ಈ ದೇಶದ ಬೆನ್ನಲು ರೈತರು ಎಂಬುವುದು ಮಾತಿಗೆ ಸಿಮೀತವಾಗದಂತೆ ಅವರ ಕಷ್ಟ ನಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸಬೇಕು. ಜನತಾ ಪ್ರಜಾಪ್ರಭುತ್ವ ರಂಗ ದೇಶದಲ್ಲಿ ಸ್ಥಾಪನೆಗೊಂಡಾಗ ಮಾತ್ರ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.
ಜನರಿಂದ ಬರುವಂತ ತೆರಿಗೆ ಹಣದಲ್ಲಿ ಬಡವರ ಹಸಿವು ನೀಗಿಸಲು ಸಾಧ್ಯವಾಗುತ್ತಿಲ್ಲ. ಅಪೌಷ್ಟಿಕತೆಯಿಂದ ಸಾವಿನ ಸಂಖ್ಯೆ ದೇಶದಲ್ಲಿ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭ್ರಷ್ಟಾಚಾರ ದೇಶ ಮುಕ್ತಿ ಮಾಡುತ್ತೇನೆ. ಕಪ್ಪು ಹಣ ತಂದು ಬಡವರ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇನೆ ಎಂದು ಹೇಳಿದ ಮೋದಿ ಸರಕಾರ ಮಾತು ತಪ್ಪಿದೆ ಎಂದು ದೂರಿದರು.
ಸಮ್ಮೇಳನ ಮೆರವಣಿಗೆ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಿಂದ ರಂಗನಾಥ ದೇವಸ್ಥಾನ, ಮಹರ್ಷಿ ವಾಲ್ಮೀಕಿ ವೃತ್ತ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಡೊಳ್ಳು ಕುಣಿತ, ಘೋಷಣೆಗಳು ಕೂಗುತ್ತ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ನಿತ್ಯನಂದ ಸಾಮಿ, ಎಚ್.ಪದ್ಮಾ, ಕರಿಯಪ್ಪ ಅಚ್ಚಾಳ್ಳಿ, ಶೇಕ್ಷಾಖಾದ್ರಿ, ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ಶಬ್ಬೀರ ಜಾಲಹಳ್ಳಿ, ಡಿ.ಎಸ್. ಶರಣಬಸವ, ಮಹಾಲಿಂಗ ದೊಡ್ಡಮನಿ, ಶೇಖಮ್ಮ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.