ದೀಪದಿಂದ ಆತ್ಮನಿರ್ಭರತೆ ಶಕ್ತಿ ಪ್ರಜ್ವಲಿಸಲಿ: ಸ್ವಾಮೀಜಿ
Team Udayavani, Dec 16, 2020, 7:12 PM IST
ಬೀದರ: ಜ್ಞಾನದ ಪ್ರತೀಕವಾಗಿರುವ ದೀಪವನ್ನು ಬೆಳಗುವುದರಿಂದ ಮನುಷ್ಯರಲ್ಲಿ ಆತ್ಮ ನಿರ್ಭರತೆಯ ದಿವ್ಯಶಕ್ತಿ ಸಹಜವಾಗಿ ತುಂಬಿ ಬರುತ್ತದೆ ಎಂದು ಬೇಮಳೇಡ ಹಿರೇಮಠದ ಕಿ. ರಾಜಶೇಖರ ಶಿವಾಚಾರ್ಯರುನುಡಿದರು.
ನಗರದ ನೌಬಾದ್ ಬಳಿಯ ಜ್ಞಾನ ಶಿವಯೋಗಾಶ್ರಮದಲ್ಲಿ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಅವರು, ಭಾರತೀಯರಿಗೆ ಶ್ರಾವಣದಂತೆ ಕಾರ್ತಿಕ ಮಾಸವು ಅಷ್ಟೇ ಪವಿತ್ರವಾಗಿದೆ. ಸುಂದರ ಮತ್ತು ಸಮೃದ್ಧ ಜೀವನಕ್ಕಾಗಿ ಕಾರ್ತಿಕ ದೀಪಾರಾಧನೆಯನ್ನು ಸನಾತನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದ್ದು, ಈ ವರ್ಷ ಕೊರೊನಾ ಮಹಾಮಾರಿ ವಿನಾಶಾರ್ಥಕ್ಕಾಗಿ ಆಶ್ರಮದಲ್ಲಿ ಕಾರ್ತಿಕ ದೀಪೋತ್ಸವ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಹಂದಿ ಸಾಕಾಣಿಕೆಗೆ ಸರ್ಕಾರಿ ಜಾಗ ಗುರುತಿಸಿ
ಜೀವನದಲ್ಲಿ ಅನೇಕ ಕಷ್ಟಕಾರ್ಪಣ್ಯಗಳು ಬರುವುದು ಸಹಜವಾಗಿದ್ದು, ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ನಮ್ಮಲ್ಲಿ ಆ ಧೈರ್ಯ ಬರಬೇಕಾದರೆ ಪ್ರತಿಯೊಬ್ಬರೂ ಕಾರ್ತಿಕ ದೀಪಾರಾಧನೆ ದೀಪೋತ್ಸವವನ್ನು ತಪ್ಪದೇ ಆಚರಿಸಬೇಕು ಎಂದರು.
ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಕರುಣಾದೇವಿ ಮಾತಾ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಸ್ವಾಮಿ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಕಾಶಿನಾಥ ಶಂಭು, ರೇವಪ್ಪಾ ಮುದ್ದಾ, ಶಕುಂತಲಾ ತಂಬಾಕೆ, ಡಾ| ಸುಭಾಷ ಪಾಟೀಲ, ಸಂಗಶೆಟ್ಟಿ ಚಿದ್ರಿ, ಮಾದಪ್ಪ ಭಂಗೂರೆ, ಮಹಾದೇವಿ ಮಠಪತಿ, ಸಂಗಮೇಶ ಬಿರಾದಾರ, ಹಣಮಂತಪ್ಪ ಕಪಲಾಪುರ, ಮಲ್ಲಿಕಾರ್ಜುನ ಶಂಭು, ಶಿವಯ್ಯ ಸ್ವಾಮಿ, ಮಹಾಂತೇಶ ಡೊಂಗರಗಿ, ರಾಜಕುಮಾರ ಮಾಳಗೆ, ಸುರೇಶ ಶಂಭು, ಪ್ರತಾಪ ತಾಂಬಾಕೆ, ಲೋಕೇಶ ಡೊಂಗರಗಿ, ಶಿವರಾಜ ಕೊಳಾರ ಇದ್ದರು. ಡೊಂಗರಗಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.