ಮಕ್ಕಳಿಗೆ ಶಿಕ್ಷಕರೇ ದಾರಿದೀಪವಾಗಲಿ
Team Udayavani, Nov 25, 2017, 2:33 PM IST
ಬೀದರ: ಮಕ್ಕಳ ಭವಿಷ್ಯ ಉಜ್ವಲವಾಗುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದ್ದು, ಮಕ್ಕಳಿಗೆ ಶಿಕ್ಷಕರೇ ದಾರಿದೀಪವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ ಕರೆ ನೀಡಿದರು.
ನಗರದ ಶಾರದಾ ರುಡ್‌ಸೆಟ್‌ನಲ್ಲಿ ಶುಕ್ರವಾರ “ಮಕ್ಕಳ ಸಂರಕ್ಷಣೆ’ ಮತ್ತು “ಮಕ್ಕಳ ಗ್ರಾಮ ಸಭೆ ವಿಷಯ ಕುರಿತು
ಸರ್ಕಾರಿ ಪೌಢಶಾಲಾ ಮುಖ್ಯೋಪಾಧ್ಯಾಯರಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಜಾರಿಯಲ್ಲಿರುವ ಹಕ್ಕು ಮತ್ತು ಕಾನೂನುಗಳ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಮಕ್ಕಳ ಸಂರಕ್ಷಣೆ ಮಾಡುವಲ್ಲಿ ಶಿಕ್ಷಕರ ಪಾತ್ರ ಏನು, ಮಕ್ಕಳಿಗಿರುವ ಹಕ್ಕುಗಳು, ಕಾನೂನುಗಳು ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದು, ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಡಿಡಿಪಿಐ ಇನಾಯತ್ ಅಲಿ ಸಿಂಧೆ ಮಾತನಾಡಿ, ಮಕ್ಕಳು ದೈಹಿಕ ಶೋಷಣೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಹೀಗೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹಳ್ಳಿಗಳಲ್ಲಿರುವ ಪಾಲಕರು, ಪೋಷಕರಿಗೆ ಮಕ್ಕಳ ಕಾನೂನು ಹಾಗೂ ಹಕ್ಕುಗಳ ಕುರಿತು ಗೊತ್ತಿರುವುದಿಲ್ಲ. ಆದರೆ ಶಿಕ್ಷಕರು ಈ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಶಿಕ್ಷಕರು ಹೇಳಿದರೆ ಮಕ್ಕಳು ಕೇಳುತ್ತಾರೆ ಎಂದರು.
ಮಕ್ಕಳಿಗೆ ಪುಸ್ತಕದ ಜ್ಞಾನ ಮಾತ್ರ ನೀಡದೇ, ನೀತಿ ಪಾಠಗಳನ್ನು ಕೂಡ ಬೋಧಿ ಸಬೇಕು. ಪ್ರಾರ್ಥನೆಯ ಸಮಯದಲ್ಲಿ 10ರಿಂದ 15 ನಿಮಿಷಗಳ ಕಾಲ ಮಕ್ಕಳ ಸಂರಕ್ಷಣೆಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶಾಲೆಗಳಲ್ಲಿ
ಆಗಬೇಕು. ಮಕ್ಕಳ ಸಮಿತಿ ಸಭೆಗಳನ್ನು ಕಾಟಾಚಾರಕ್ಕೆ ನಡೆಸದೇ ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಧಿಕಾರಿ ಬಿ. ಪಾಂಡುರಂಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ಕೆ. ರಾಘವೇಂದ್ರ ಭಟ್, ಹರೀಶ ಜೋಗಿ, ರಜಿಯ ಬಳಬಟ್ಟಿ, ಮಂಜುಳಾ ಎಂ., ಧನಲಕ್ಷ್ಮೀ ಪಾಟೀಲ, ಬಾಲನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ ಹಾಗೂ ಧನವಂತಿ ಇದ್ದರು. ಮಕ್ಕಳ ರಕ್ಷಣಾಧಿಕಾರಿಗಳಾದ ಪ್ರಶಾಂತ ಬಿರಾದಾರ ನಿರೂಪಿಸಿದರು. ಗೌರಿಶಂಕರ ಪರತಾಪುರೆ ಸ್ವಾಗತಿಸಿದರು. ರವಿರಾಜ ಭಮ್ಮಶೆಟ್ಟಿ ವಂದಿಸಿದರು.
ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್- ಜಿಲ್ಲಾ ಮಕ್ಕಳ
ರಕ್ಷಣಾ ಯೋಜನೆ ಕೊಪ್ಪಳ, ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಗಮನಿಸಿದರೆ ಅದೇ ಗ್ರಾಮದವರೆ ಮಕ್ಕಳ ಮೇಲೆ ದೈಹಿಕ ಶೋಷಣೆ ಮಾಡುತ್ತಾರೆ. 14 ವರ್ಷದೊಳಗಿನ ಮಕ್ಕಳನ್ನು ಪಾಲಕರು ಕೂಲಿಗೆ ಕಳುಹಿಸುವುದು ಹಾಗೂ
ಬಾಲ್ಯವಿವಾಹ ಮಾಡುವುದು ಮಾಡುತ್ತಾರೆ. ಮಕ್ಕಳ ಈ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಿದೆ.
ಕೆಲವೊಮ್ಮೆ ಕೋರ್ಟ್ ಸಹವಾಸ ಬೇಡ ಎಂದು ಮಕ್ಕಳ ಸಂರಕ್ಷಣೆ ವಿಷಯದಲ್ಲಿ ಅಲಕ್ಷ್ಯ ವಹಿಸುತ್ತಾರೆ. ಅಂಥ
ಸಂದರ್ಭದಲ್ಲಿ ಶಿಕ್ಷಕರು ಧೈರ್ಯ ಮಾಡಿ ಅಗತ್ಯ ಸಲಹೆ ಕೊಟ್ಟು ಸಂಶಗಳನ್ನು ದೂರ ಮಾಡಬೇಕು.
ಬಿ. ಪಾಂಡುರಂಗ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.