ಶರಣ ಪರಂಪರೆ ಮುಂದುವರಿಯಲಿ
Team Udayavani, Jan 29, 2018, 1:30 PM IST
ಬಸವಕಲ್ಯಾಣ: 12ನೇ ಶತಮಾನದಲ್ಲಿ ಗುರು ಬಸವಣ್ಣನವರು ಜಾತಿ, ವರ್ಣ, ವರ್ಗ ಮತ್ತು ಲಿಂಗ ಭೇದವನ್ನು ಅಳಿಸಿ, ಸರ್ವ ಸಮಾನತೆ ಧರ್ಮ ಸ್ಥಾಪಿಸಿದ್ದಾರೆ. ಶರಣರ ಆದರ್ಶ ಪರಂಪರೆ ಮುಂದುವರಿಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ ಎಂದು ಬಸವ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮಿ ಹೇಳಿದರು.
ತ್ರಿಪುರಾಂತದ ಶರಣ ಮಾದಾರ ಚನ್ನಯ್ಯ ಅರಿವು ಪೀಠದಿಂದ ಆಯೋಜಿಸಲಾಗಿದ್ದ ಮಾದರ ಚನ್ನಯ್ಯ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಶೈವ ಪರಂಪರೆ ಪುರಾತನವಾದ್ದು. ಈ ಪರಂಪರೆಯಲ್ಲಿ ಸಮಾನತೆಯಿತ್ತು. ಆದರೆ ಮುಂದೆ ವೈದಿಕರ ಶ್ರೇಣಿಕೃತ ಸಮಾಜ ವರ್ಗೀಕರಣದಿಂದ ಅಸಮಾನತೆ ಹುಟ್ಟಿಕೊಂಡಿದೆ ಎಂದರು. ಶರಣ ಮಾದಾರ ಚನ್ನಯ್ಯನವರು ಭಕ್ತಿಯ ಸಾಕಾರ ಮೂರ್ತಿಯಾಗಿದ್ದರು. ಅವರ ಭಕ್ತಿಗೆ ಶಿವನೂ ತಲೆ ಬಾಗಿಸಿದ್ದಾನೆ.
ಅವರ ವಚನಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದು, ಇವುಗಳ ಬಗ್ಗೆ ಅಧ್ಯಯನ ನಡೆಸುವುದು ಅವಶ್ಯಕವಾಗಿದೆ.
ಮಕ್ಕಳಿಗೂ ತಿಳಿಸಿಕೊಡುವ ಅಗತ್ಯವಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಶರಣೆ ಚಿತ್ರಮ್ಮ ತಾಯಿ ಮಾತನಾಡಿ, ಶರಣ ಚನ್ನಯ್ಯನವರ ಭಕ್ತಿಯನ್ನು ಅಖಂಡವಾಗಿ ಗುರುತಿಸಿದವರು ಗುರು ಬಸವಣ್ಣವರು. ಶರಣ ಮಾದಾರ ಚನ್ನಯ್ಯನವರ ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.
ಜೆಡಿಎಸ್ ಮುಖಂಡ ಸಂಜು ಗಾಯಕವಾಡ ಮಾತನಾಡಿ, ಶರಣ ನೂಲಿಯ ಚಂದಯ್ಯ, ಶರಣ ಮಾದಾರ
ಚನ್ನಯ್ಯನವರ ವಚನಗಳ ಪ್ರಚಾರ, ಪ್ರಸಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು. ಶರಣರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನೂಲಿಯ ಚಂದಯ್ಯ ಪಂಚಕಮಿಟಿ ಅಧ್ಯಕ್ಷ ಘಾಳೆಪ್ಪ ಮುಜನಾಯಕ, ಗಿರಿಜಾ ಸಿದ್ದಣ್ಣ, ಸರಸ್ವತಿ ಹೊದಲೂರೆ, ಹರಿಹರ ಗೋಖಲೆ, ದತ್ತು ಡಾಂಗೆ, ಸಿದ್ರಾಮಪ್ಪ ಹಂಗ್ರಿಕರ್, ಶಂಕರ ಐನಾಪೂರ ಇದ್ದರು. ಪೂಜಾ ಸ್ವಾಗತಿಸಿದರು. ಚೇತನಾ ನಿರೂಪಿಸಿದರು. ಶೃತಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.