ವಚನಗಳ ಮೌಲ್ಯ ಅನುಷ್ಠಾನಕ್ಕೆ ಬರಲಿ
Team Udayavani, Jun 12, 2018, 11:35 AM IST
ಬೀದರ: 12ನೇ ಶತಮಾನದ ಶರಣರ ವಚನಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಹೇಳಿದರು. ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅನುಭವ ಮಂಟಪವೆಂಬ ಪಾರ್ಲಿಮೆಂಟ್ ಸ್ಥಾಪಿಸಿದ ಮಹಾನುಭಾವ ಬಸವಣ್ಣನವರ ಕ್ರಾಂತಿಯ ಫಲವಾಗಿ ನಮ್ಮಂಥವರು ಇಂದು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ. ಮಾನವನ ಜೀವನ ಕಲ್ಯಾಣವಾಗಲು ಪ್ರತಿಯೊಬ್ಬ ನಾಗರಿಕರು ಶರಣರ ವಚನಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅರವಿಂದ ಅರಳಿ ಮಾತನಾಡಿ, ಬಸವಣ್ಣನವರ ಕಾಯಕವೇ ಕೈಲಾಸ ತತ್ವದಂದತೆ ಕೆಲಸ ಮಾಡಿದ ಫಲವಾಗಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಅಧಿಕಾರ ಇರುವರೆಗೆ
ಪ್ರಾಮಾಣಿಕ ಕೆಲಸ ಮಾಡಿ ಜನರ ಸೇವೆಗೆ ಅಣಿಯಾಗುತ್ತೇನೆ ಎಂದರು.
ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಓರ್ವ ವ್ಯಕ್ತಿ ಪಡೆಯುವ ಪದವಿಗಳಿಗಿಂತ ಒಳ್ಳೆ ನಡತೆ ಮುಖ್ಯ. ಸಮಾಜ ಸುವ್ಯಸ್ಥಿತ, ಸುಭದ್ರವಾಗಿ ನಿರ್ಮಾಣವಾಗಲು, ಜೀವನ ಸಾರ್ಥಕವಾಗಲು ಮೊದಲು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಹನೆ-ತಾಳ್ಮೆ ಮುಖ್ಯ. ಸುಖ-ದುಃಖ, ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಸಾಮರ್ಥ್ಯ ಇರಬೇಕು. ಸಹನೆ, ತಾಳ್ಮೆಯಿಲ್ಲದ ಜೀವನ ಪ್ರಯೋಜನವಿಲ್ಲ ಎಂದರು.
ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿ ಅರುಣ ಅಶೋಕಗೆ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸಲು ಪ್ರತಿಷ್ಠಾನದಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಸಾಧನೆಗೈದ ಜಿಲ್ಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಡಾ| ವಿಪಿನ ಗೋಯಲ್, ಡಾ| ಗಂಗಾಂಬಿಕೆ ಅಕ್ಕ, ಸಿ.ಎಸ್. ಪಾಟೀಲ, ಡಾ| ಸುಭಾಷ ಬಶೆಟ್ಟಿ, ಸಿ.ಎಸ್. ಗಣಾಚಾರಿ, ಗಂಗಪ್ಪ ಸಾವೆ, ಜಯರಾಜ ಖಂಡ್ರೆ, ರಮೇಶ ಮಠಪತಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.