ಫೆಬ್ರವರಿಯಲ್ಲಿ ಲಿಂಗಾಯತ ಸಮ್ಮೇಳನ
Team Udayavani, Jan 8, 2018, 12:45 PM IST
ಭಾಲ್ಕಿ: ಫೆ.4ನೇ ವಾರದಲ್ಲಿ ಲಿಂಗಾಯತ ಜನಜಾಗೃತಿ ಸಮ್ಮೇಳನ ನಡೆಸಲಾಗುವುದು ಎಂದು ಹಿರೇಮಠ ಸಂಸ್ಥಾನದ ಡಾ|ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ರವಿವಾರ ಜರುಗಿದ ಲಿಂಗಾಯತ ಸಮನ್ವಯ ಸಮಿತಿಯ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಗದುಗಿನಲ್ಲಿ ಪಂಚ ಪೀಠಾಧೀಶರರು, ಲಿಂಗಾಯತರು ಮತ್ತು ವೀರಶೈವರು ಎಲ್ಲರೂ ಒಂದೇ ಎಂದು ಹೇಳಲು ಸೇರಿಸಿದ ಸಮಾವೇಶವನ್ನು, ಬೀದಿಯಲ್ಲಿ ತಿರುಗಾಡುವ ಒಂದು ಎತ್ತನ್ನು ತಂದು ಹುಲ್ಲು ತಿನಿಸುವ ಮೂಲಕ ಉದ್ಘಾಟನೆಗೊಳಿಸಿರುವುದು, ವಿಶ್ವಗುರು ಬಸವಣ್ಣನವರಿಗೂ ಲಿಂಗಾಯತರಿಗೂ ಮಾಡಿರುವ ಅಪಮಾನವಾಗಿದೆ. ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖೀಲ ಭಾರತ ವೀರಶೈವ ಮಹಾಸಭೆಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ವೀರಶೈವ ಮಹಾಸಭೆಗೆ ವೀರಶೈವ ಲಿಂಗಾಯತ ಮಹಾಸಭೆ ಎಂದು ಹೆಸರಿಡುವ ಹುನ್ನಾರ ನಡೆಸುತ್ತಿರುವುದನ್ನು ಬಸವ ಭಕ್ತರು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದರು.
ಲಿಂಗಾಯತ ಸಮನ್ವಯ ಸಮಿತಿ ಸದಸ್ಯ ಕಿರಣ ಖಂಡ್ರೆ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ತಜ್ಞರ ಸಮಿತಿ ಸೇರಿಸಿ, ನಾಲ್ಕು ವಾರಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವರದಿ ಕೇಂದ್ರಕ್ಕೆ ಕಳುಹಿಸಿ ಕೊಡುತ್ತೇವೆ ಎಂದು ಹೇಳಿದ್ದರು. ಈಗ ತಜ್ಞರ ಸಮಿತಿ 6 ತಿಂಗಳ ಕಾಲಾವಕಾಶ ಕೇಳುತ್ತಿರುವುದು ನೋಡಿದರೆ ರಾಜ್ಯ ಸರ್ಕಾರ ಲಿಂಗಾಯತರ ಜೊತೆಗೆ ಆಟವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಪೀಠದ ಶ್ರೀ ಬಸವಪ್ರಭುದೇವರು ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಳ ಚಿಂತನ ಮಂಥನ ಜನಜಾಗೃತಿ ಸಮ್ಮೇಳನವು ಡಾ| ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಕಲ್ಯಾಣ ನಾಡಿನಿಂದಲೇ ನಡೆಯಲಿದೆ ಎಂದು ಹೇಳಿದರು.
ಸಮನ್ವಯ ಸಮಿತಿಯ ಸಂಚಾಲಕರಾದ ಶ್ರೀಕಾಂತ ಸ್ವಾಮಿ, ಲಿಂಗಾಯತ ಮುಖಂಡರಾದ ಆನಂದ ದೇವಪ್ಪ, ಸಿದ್ರಾಮಪ್ಪ ವಂಕೆ ಮಾತನಾಡಿದರು. ಓಂಪ್ರಕಾಶ ರೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಮಹಾನಂದಾ ಮಾಶೆಟ್ಟೆ, ಪ್ರೇಮಲಾ ತೊಂಡಾರೆ, ಅಮೀತ ಅಷ್ಟೂರೆ, ಜಗದೀಶ ಖಂಡ್ರೆ, ಜಯರಾಜ ಪಾತ್ರೆ, ನಾಗಶೆಟ್ಟಿ ಚೋಳಾ, ಮಹೇಶ ಮುಚಳಂಬೆ, ಕಾಶೆಪ್ಪಾ ಸೀತಾ, ನಾಗಯ್ನಾ ಸ್ವಾಮಿ, ಸಿದ್ದು ಬಕ್ಕಾ, ಮಲ್ಲಿಕಾರ್ಜುನ ಡೊಣಗಾಪುರೆ, ಸಂಗಮೇಶ ಖಂಡ್ರೆ, ಮಹಾಂತೇಶ
ದೇಶಮುಖೆ, ಸಂಗಪ್ಪಾ ಟೊಪಾರೆ, ಗುರುಖಂಡ್ರೆ, ಸುನೀಲ ವಲಂಡೆ, ನಾಗೇಶ ಜಾಂತಿ, ಆಕಾಶ ರಿಕ್ಕೆ, ನಾಗೇಶ ತಮಾಸಿಂಗೆ, ಶಶಿ ಬಳತೆ, ದತ್ತು ಕರಕಾಳೆ, ಘನಲಿಂಗ ರುದ್ರಮುನಿ ನಾವದಗಿ ಇನ್ನಿತರರು ಇದ್ದರು. ಕಿರಣ ಖಂಡ್ರೆ ಸ್ವಾಗತಿಸಿದರು. ಶ್ರೀಕಾಂತ ಭೊರಾಳೆ ನಿರೂಪಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.