ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಿಲ್ಲದು: ಕಿರಣಕುಮಾರ
Team Udayavani, Jul 18, 2022, 5:35 PM IST
ಭಾಲ್ಕಿ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಪ್ರಾರಂಭಿಸಿ ಇಂದಿಗೆ 5 ವರ್ಷಗಳು ಗತಿಸಿವೆ. ಲಿಂಗಾಯತರು ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೆ ಸುಮ್ಮನಿರುವೆವು ಎಂದು ಜಾಗತಿ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಕಿರಣಕುಮಾರ ಖಂಡ್ರೆ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿವಾರ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ 5ನೇ ವರ್ಷದ ಸಾಂಕೇತಿಕ ಧರಣಿ ನಿಮಿತ್ತ ಬಸವ ಧರ್ಮ ಧ್ವಜ ಹಾರಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸ್ವತಂತ್ರ ಧರ್ಮದ ಹೋರಾಟ ತಣ್ಣಗಾಗಿತ್ತು. ಜು.17, 2018ರಿಂದ ಇಂದಿನ ವರೆಗೆ 5 ವರ್ಷಗಳ ಕಾಲದಿಂದಲೂ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೋವಿಡ್ ಮಹಾಮಾರಿ ತಣ್ಣಗಾಗಿದೆ. ಆದರೆ, ಲಿಂಗಾಯತ ಹೋರಾಟದ ಗತಿ ತಣ್ಣಗಾಗದು ಎಂದು ಹೇಳಿದರು.
ವಿಶ್ವಕ್ರಾಂತ ದಿವ್ಯ ಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿ, ಲಿಂಗಾಯತ ಮಠಾಧಿಧೀಶರ ಒಕ್ಕೂಟ ಕಟ್ಟಿಕೊಂಡ ಮಠಾಧಿ àಶರು ಬಸವಣ್ಣವರ ಹೆಸರಿನಲ್ಲಿ ಮಠಗಳ ಅಭಿವೃದ್ಧಿ, ಆಸ್ತಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಡ ಲಿಂಗಾಯತರು ಇಂದು ಬೀದಿ ಪಾಲಾಗುತ್ತಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶ್ರೀಕಾಂತ ಭೊರಾಳೆ ಮಾತನಾಡಿದರು. ಡಾ| ಅಮೀತ ಅಷ್ಟೂರೆಯವರಿಂದ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಖಂಡರಾದ ಜೈರಾಜ ಕೊಳ್ಳಾ, ನಾಗಶೆಟ್ಟೆಪ್ಪ ಲಂಜವಾಡೆ, ದತ್ತುಕುಮಾರ ಕರಕಾಳೆ, ದೀಪಕ ಸಿಂಧೆ, ವೈಜಿನಾಥ ತಗಾರೆ, ರಾಜಕುಮಾರ ಜಲೆª, ಪ್ರಕಾಶ ಜವಳಗಾ, ಈಶ್ವರ ಕಿನೆಗಾವೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.