ಲಿಂಗಾಯತ-ಪಂಚಾಚಾರ್ಯ ಧರ್ಮ ಭಿನ್ನ
Team Udayavani, Feb 18, 2019, 9:05 AM IST
ಬೀದರ: ಲಿಂಗಾಯತ ಧರ್ಮಕ್ಕೂ ಪಂಚಾಚಾರ್ಯರ ಧರ್ಮಕ್ಕೂ ಬಹಳ ವ್ಯತಾಸವಿದೆ. ಲಿಂಗಾಯತರು ಇಷ್ಟಲಿಂಗ ಪೂಜಿಸಿದರೆ, ಪಂಚಾರ್ಯರು ಸ್ಥಾವರ ಲಿಂಗ ಪೂಜಿಸುತ್ತಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ|ಎಸ್. ಎಂ. ಜಾಮದಾರ ಹೇಳಿದರು.
ನಗರದ ಬಸವಗಿರಿಯಲ್ಲಿ ನಡೆದ 16ನೇ ವಚನ ವಿಜಯೋತ್ಸವದಲ್ಲಿ ನಡೆದ ಲಿಂಗಾಯತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದಲ್ಲಿ ಏಕ ದೇವೋಪಾಸಾನೆ ಆಚರಣೆಯಾದರೆ, ಅಲ್ಲಿ ಬಹುದೇವ ಉಪಾಸನೆ ಜಾರಿಯಲ್ಲಿದೆ. ಇಲ್ಲಿ ಜ್ಯೋತಿಷಿಗಳಿಗೆ ಸ್ಥಾನವಿಲ್ಲ.
ಆದರೆ ಅಲ್ಲಿ ಪುರಾಣ, ಮೂಢನಂಬಿಕೆ, ಕಂದಾಚಾರಗಳಿಗೆ ಸ್ಥಾನವಿದೆ. ಬಸವ ತತ್ವವು ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ ಎಂದರು. ಇತ್ತೀಚೆಗೆ ಕರ್ನಾಟಕ ಸರಕಾರವು 15 ವಚನ ಸಂಪುಟಗಳನ್ನು ಪ್ರಕಟಿಸಿದೆ. ಪ್ರಪಂಚದ ಮೊಟ್ಟಮೊದಲನೇಯ ವಿಶ್ವದ ಪಾರ್ಲಿಮೆಂಟ್ ಅನ್ನು ಬಸವಣ್ಣನವರು ಸ್ಥಾಪನೆ ಮಾಡಿದರು.
ಲಿಂಗಾಯತ ಧರ್ಮದಲ್ಲಿ ಸರ್ವರಿಗೂ ಸಮನಾದ ಅವಕಾಶವಿದೆ. ವಿಶ್ವದಲ್ಲಿ ಶಾಂತಿ ನೆಲೆಸುವುದು ಬಸವಣ್ಣನವರ ಹಾಗೂ ಶರಣರ ವಚನಗಳಿಂದ ಮಾತ್ರ ಸಾಧ್ಯ ಎಂದ ಅವರು, ಕಲ್ಯಾಣ ಕರ್ನಾಟಕ ಪವಿತ್ರ ಭೂಮಿಯಾಗಿದೆ. ಈ ಭಾಗದಲ್ಲಿ ಶರಣರ ಚಿಂತನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಬಿ.ಜಿ.ಶಟಕಾರ, ಬಸವರಾಜ ಬುಳ್ಳಾ, ಶಂಕರ ಗೂಡಸ್, ಹನುಮೇಶ ಕಲಮಂಗಿ, ಡಾ| ಸೋಮನಾಥ ಯಾಳವಾರ, ಪ್ರಭುರಾವ ವಸಮತೆ, ಶ್ರೀಕಾಂತ ಸ್ವಾಮಿ, ಪ್ರಭುಲಿಂಗ ಮಹಾಗಾಂವಕರ, ಡಾ| ರವಿಕುಮಾರ ಬಿರಾದಾರ, ರವಿ ಕೊಳಕೂರ, ಸೋಮಶೇಖರ ಪಾಟೀಲ ಗಾದಗಿ, ರಾಜಶೇಖರ ಯಂಕಂಚಿ, ಡಾ| ಜಗನ್ನಾಥ ಹೆಬ್ಟಾಳೆ, ವೀರಶೆಟ್ಟಿ ಮಣಗೆ, ರವೀಂದ್ರ ಶಾಬಾದಿ, ರಾಜಕುಮಾರ ಪಾಟೀಲ, ಆನಂದ ದೇವಪ್ಪ, ರಾಜೇಂದ್ರ ಕುಮಾರ ಗಂದಗೆ, ಕಲ್ಯಾಣಪ್ಪ ಕಲಬುರಗಿ, ಪಿ. ಚನ್ನಬಸವಣ್ಣ, ಅನೀಲಕುಮಾರ ಪನಾಳೆ, ಸಂಜಯ ಪಾಟೀಲ, ಸುಭಾಷ ಕೋಣಿನ್, ಅಪ್ಪಾರಾವ್ ಗೂನಳ್ಳಿ, ಲಿಂಗಾನಂದ ಮಹಾಜನ, ರಾಜಕುಮಾರ ಬೇಲೂರ, ಲಿಂಗರಾಜ ಶಾಶೆಟ್ಟಿ, ಮಲ್ಲಿಕಾರ್ಜುನ ಬಾಗೇವಾಡಿ, ಶರಣಬಸವಗೌಡ,ಗಿ ಇದ್ದರು.
12ನೇ ಶತಮಾನದ ನಂತರದ ವರ್ಷಗಳಲ್ಲಿ ಕೇವಲ 350 ವಚನಗಳು ದೊರೆಕಿದ್ದವು. ಆ ನಂತರ ಸಂಶೋಧನೆ ಹುಡುಕಾಟದ ನಂತರ 15 ಸಾವಿರ ವಚನಗಳು ಸಿಕ್ಕಿವೆ. ಪುರೋಹಿತಶಾಹಿಗಳು ಪಟ್ಟಭದ್ರ ಹಿತಾಸಕ್ತಿಗಳು ಸಾವಿರಾರು ವಚನಗಳನ್ನು ನಾಶ ಪಡಿಸಿದ್ದಾರೆ.
ಡಾ| ಎಸ್.ಎಂ. ಜಾಮದಾರ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ
ಸಾಮೂಹಿಕ ಇಷ್ಟಲಿಂಗ ಪೂಜ ಅಂಗ-ಲಿಂಗ ಒಂದಾದರೆ ಜೀವನ ಸಮರಸ
ಬೀದರ: 16ನೇ ವಚನ ವಿಜಯೋತ್ಸವ ನಿಮಿತ್ಯ ರವಿವಾರ ಬಸವಗಿರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಜಗನ್ನಾಥ ರಾಯಚೋಟ್ಟಿ ಮಾತನಾಡಿ, ಅಂಗ-ಲಿಂಗ ಒದಾದರೆ ಜೀವನ ಸಮರಸವಾಗುತ್ತದೆ. ಪ್ರತಿನಿತ್ಯ ಲಿಂಗಾರ್ಚನೆ ಮಾಡುವ ಮೂಲಕ ಜೀವನ ಸ್ವಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಕ್ಕ ಅನ್ನಪೂರ್ಣ ಅವರು ಮಾತನಾಡಿ, ಲಿಂಗಾರ್ಚನೆ ಮೂಲಕ ಜೀವನದಲ್ಲಿ ಒತ್ತಡದಿಂದ ಹೊರಬರ ಬರಲು ಸಾಧ್ಯ. ವೈಜ್ಞಾನಿ ದೃಷ್ಟಿಯಿಂದ ಕೂಡಿದ ಲಿಂಗಾರ್ಚನೆಯಿಂದ ದುಃಖ ದುಮ್ಮಾನಗಳಿಂದ ಹೋರಬರಲು ಸಾಧ್ಯವಾಗುತ್ತದೆ. ಜೀವನದಲ್ಲಿ ಸಂತೃಪ್ತಿ ನೆಮ್ಮದಿ, ಶಾಂತಿ ನೆಲೆಗೊಳಿಸಬೇಕಾದರೆ ನಿತ್ಯ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಮಾಡಬೇಕು.
ಪರಮ ಸತ್ಯ ಅರಿಯಬೇಕಾದರೆ ಇಷ್ಟಲಿಂಗದ ಮೊರೆ ಹೋಗಬೇಕು. ಇಷ್ಟಲಿಂಗದಲ್ಲಿ ಆರ್ಕಷಣೆ ಶಕ್ತಿಯಿದೆ. ಮಾನಸಿಕ ನೆಮ್ಮದಿ ಇದೆ. ಶಾರರೀಕವಾಗಿ ಸದೃಢಗೊಳಿಸುತ್ತದೆ ಎಂದು ವಿವರಿಸಿದರು. ಶ್ರೀ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿ, ರಮೇಶ ಮಠಪತಿ ಲಿಂಗಪೂಜಾ ವಿಧಾನಗಳನ್ನು ವಿವರಿಸಿದರು. ಡಾ| ಗಂಗಾಂಬಿಕಾ, ಪ್ರಭುದೇವರು, ಸಿದ್ಧರಾಮಪ್ಪ ಕಪಲಾಪುರೆ, ಪ್ರಶಾಂತ ಪರ್ತಾಪುರೆ, ಶಿವಾನಂದ ಪಾಟೀಲ, ಚಂದ್ರಕಾಂತ ರತ್ನಾಪುರೆ, ಶರಣ ಕಂಟೆಪ್ಪ ಗಂದಿಗುಡೆ, ಮಲ್ಲಮ್ಮ ನಾಗನಕೇರಿ, ವಿದ್ಯಾವತಿ ಸೋಮನಾಥಪ್ಪ ಅಷೂರ, ವಿರೂಪಾಕ್ಷ ಗಾದಗಿ, ಅಣ್ಣಾರಾವ್ ಮೊಗಶೆಟ್ಟಿ, ಶರಣಪ್ಪ ಬಿರಾದಾರ, ಜಗನ್ನಾಥ ರಾಯಚೋಟಿ, ಅಣ್ಣಾರಾವ್ ಮೊಗಶೆಟ್ಟಿ, ಶರಣಪ್ಪ ಬಿರಾದಾರ, ಶರಣ ಚಂದ್ರಶೇಖರ ಉಳಗಡ್ಡಿ, ಶಾಮರಾವ್ ಮೋರಗಿಕರ್, ಹಣಮಂತರಾವ್ ಕೊಳಕ್ಕೂರ, ಅರವಿಂದ ರಗಟೆ, ಸಂತೋಷ ಹಡಪದ, ವೀರೇಶ ಜಗನ್ನಾಥ ಸಿರ್ಸೆ, ಚಂದ್ರಕಾಂತ ಹೆಬ್ಟಾಳೆ, ಹಾವಗಿರಾವ್ ವಟಗೆ, ಸಂತೋಷ ಪಾಟೀಲ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Bidar; ಗುತ್ತಿಗೆದಾರ ಸಚಿನ್ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.