Low weight Infant: ಕಡಿಮೆ ತೂಕದ ಮಗುವಿಗೆ ಜೀವ ಕೊಟ್ಟ ವೈದ್ಯರು
Team Udayavani, Aug 11, 2023, 1:24 PM IST
ಬಸವಕಲ್ಯಾಣ: ಇಲ್ಲಿನ ವೈದ್ಯರೊಬ್ಬರು ಸತತ 48 ದಿನಗಳ ಕಾಲ ಚಿಕಿತ್ಸೆ ನೀಡಿ ಮಗು ಬದುಕಿಸಿದ್ದಾರೆ. ಇದೀಗ ಮಗುವಿನ ಬಾಯಲ್ಲಿ ನಗು ಕಂಡರೆ ಹೆತ್ತವರ ಖುಷಿಗೆ ಪಾರವೇ ಇಲ್ಲ. ನಗರದ ಹಿರಿಯ ಮಕ್ಕಳ ವೈದ್ಯ ಡಾ|ಜಿ.ಎಸ್. ಭುರಾಳೆ ಅವರು ಚಿಕಿತ್ಸೆ ನೀಡುವ ಮೂಲಕ ಮಗುವನ್ನು ಬದುಕಿಸಿದ್ದಾರೆ.
ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಪೂಜಾ ಪವನ್ ಬನ್ಸೂಡೆ ಎಂಬುವವರ ಅವಧಿ ಪೂರ್ವ ಅಂದರೆ 7ನೇ ತಿಂಗಳಲ್ಲೇ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಅವ ಧಿ ಪೂರ್ವ ಹೆರಿಗೆ ಆದ ಕಾರಣ ಜನಿಸಿದ ಮಗವಿನ ತೂಕ ಕೇವಲ 720 ಗ್ರಾಂ ಮಾತ್ರ ಇತ್ತು. ಇಷ್ಟೊಂದು ಕಡಿಮೆ ತೂಕದ ಮಕ್ಕಳು ಬದುಕುವುದು ಅಪರೂಪ.
ಬದುಕಿದರೂ ದೂರದ ಹೈದ್ರಾಬಾದ್, ಮುಂಬೈ, ಸೊಲ್ಲಾಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಅದಕ್ಕೆ ಖರ್ಚು ಸಹ ಹೆಚ್ಚು. ಆದರೆ, ಪಾಲಕರ ಮನವಿ ಮೇರೆಗೆ ತಮ್ಮ ಆಸ್ಪತ್ರೆಯಲ್ಲಿ ಮಗುವಿಗೆ ದಾಖಲಾತಿ ಮಾಡಿಕೊಂಡ ಹಿರಿಯ ವೈದ್ಯ ಡಾ| ಜಿ.ಎಸ್. ಭುರಾಳೆ ಕಡಿಮೆ ಖರ್ಚಿನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ಮಗುವನ್ನು ಬದುಕಿಸಿದ್ದಾರೆ. ಮಗುವಿನ ನಗು ನೋಡಿ ಕುಟುಂಬದವರ ಮೊಗದಲ್ಲೂ ಸಂತಸ ಮೂಡಿದೆ. ಸದ್ಯ ಮಗುವಿನ ತೂಕ 1100 ಗ್ರಾಂಗೂ ಅಧಿಕವಾಗಿದ್ದು, ಮಗು ಆರೋಗ್ಯವಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.