ಹೊನ್ನಡಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
Team Udayavani, Nov 2, 2021, 10:39 AM IST
ಬೀದರ: ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚಿಸಿ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲೂಕಿನ ಹೊನ್ನಡ್ಡಿ ಗ್ರಾಮದಲ್ಲಿ ಟೋಕರೆ ಕೋಲಿ ಸಮಾಜ ಸಂಘದಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಜನರ ಬೇಡಿಕೆಯಂತೆ ಬೀದರ ದಕ್ಷಿಣ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ 1 ಕೋಟಿ ರೂ. ಅನುದಾನ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್ ಮತ್ತು ಯುವ ಘಟಕದ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮಾತನಾಡಿದರು. ಹಳ್ಳಿಖೇಡ (ಕೆ) ಆಶ್ರಮದ ದತ್ತಾತ್ರೇಯ ಗೂರುಜಿ ಸಾನಿಧ್ಯ ವಹಿಸಿದ್ದರು. ವಿಠಲಪೂರ್ ಆಶ್ರಮದ ಶಾಂತಿಬಾಬಾ, ಪಿಎಸ್‌ಐ ಸಂಗೀತಾ, ಸಂಜುಕುಮಾರ ಕೋಲಿ, ಶನ್ಮೂಖಪ್ಪಾ ಶೇಕಾಪೂರ್, ಘಾಳೆಪ್ಪಾ ಚೆಟನಳ್ಳಿ, ಸಂತೋಷ ಪಾಟೀಲ, ವೀರಶೆಟ್ಟಿ ನೇಳಗೆ, ಪ್ರಭು ತಾಳಮಡಗಿ, ಶಾಂತಕುಮಾರ ತಡಪಳ್ಳಿ, ರಾಜಕುಮಾರ ಔಂಟಿ, ಸಂತೋಷ ಔಂಟಿ, ಪ್ರಕಾಶ ಪುಂಡ್ಲೀಕ್, ಲಕ್ಷ್ಮಣ ಭಂಗಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.