ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡಿ
Team Udayavani, Dec 26, 2017, 10:54 AM IST
ಬೀದರ: ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಕರೆ ನೀಡಿದರು.
ನಗರದ ಸಾಯಿ ಶಾಲಾ ಆವರಣದಲ್ಲಿ ಸೋಮವಾರ ಸಾವಯವ ಪ್ರಥಮ ಜಿಲ್ಲಾ ಸಮ್ಮೇಳನ, ಸಿರಿಧಾನ್ಯ ಮೇಳ ಹಾಗೂ ಫಲ-ಪುಷ್ಪ ಪ್ರದರ್ಶನದ ಸಮಾರೋಪ ಭಾಷಣ ಮಾಡಿದ ಅವರು, ಅನ್ನದಾತರು ಅನಕ್ಷರಸ್ತರು ಎಂಬುದನ್ನು ಮನಗಂಡು ಹಸಿರು ಕ್ರಾಂತಿ ಹೆಸರಲ್ಲಿ ರೈತರನ್ನು ದಾರಿ ತಪ್ಪಿಸಿ ಕುತಂತ್ರಿಗಳೆಲ್ಲರೂ ಕುಬೇರರಾಗಿ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶ್ರಮಿ, ನಿಸ್ವಾರ್ಥಿಗಳಾಗಿದ್ದ ರೈತರಿಗೆ ಹಣದ ಆಮಿಷವೊಡ್ಡಿ ಹಸಿರು ಕ್ರಾಂತಿ ಹೆಸರಲ್ಲಿ ಕೃಷಿ ವಿಜ್ಞಾನಿಗಳು ನಮ್ಮಲ್ಲಿನ ಬೀಜ ತಳಿಗಳನ್ನು ಸಂರಕ್ಷಿಸವಲ್ಲಿ ವಿಫಲರಾಗಿ ಹೊರ ದೇಶದ ಹೈಬ್ರಿಡ್ ತಳಿ ಪರಿಚಯಿಸಿದರು. ಅದು ಹೆಚ್ಚಾಗಿ ಬೆಳೆಯಲು ದುಬಾರಿ ಬೆಲೆಯ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಅನಿವಾರ್ಯ ಎಂದು ನಂಬಿಸಿ, ನಮ್ಮನ್ನು ಸಾಲಗಾರರನ್ನಾಗಿ ಮಾಡಿದರು. ಇದರಿಂದ ಲಕ್ಷಾಂತರ ರೈತರು ಆತ್ಮಹತ್ಯೆಗೆ ಕಾರಣರಾದರು. ಈಗ ಮತ್ತೆ ಸಾವಯವ ಹೆಸರಲ್ಲಿ ದಾರಿ ತಪ್ಪಿಸಲು ಹೊಟಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಮಾತನಾಡಿ, ಸ್ವಾತಂತ್ರ್ಯದ ಸಂದರ್ಭದಲ್ಲಿ 40 ಕೋಟಿ ಜನಸಂಖ್ಯೆ ಇದ್ದಾಗ 6 ಕೋಟಿ ಟನ್ ಬೆಳೆ ಬೆಳೆಸಲಾಗುತ್ತಿತ್ತು. ಇಂದು 128 ಕೋಟಿ ಜನರಿಗೆ 28 ಕೋಟಿ ಟನ್ ಬೆಳೆ ನಮ್ಮಲ್ಲಿದೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಿಂಬಿಗಳಾಗಿದ್ದೇವೆ.
ಕನಿಷ್ಟ ಬೆಂಬಲ ಬೆಲೆ ನೀಡಿ ಸರ್ಕಾರ ಕೇವಲ 6 ಕೋಟಿ ಟನ್ ಆಹಾರ ಧಾನ್ಯ ಖರೀದಿಸಿ, ಉಳಿದ ಆಹಾರ ಪದಾರ್ಥ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವುದನ್ನು ತಡೆದು ಸಮರ್ಪಕ ರೀತಿಯ ಧಾನ್ಯ ವಿತರಣೆಯಾದರೆ ಜಗತ್ತಿನ ನಂಬರ್ ಒನ್, ಸ್ವಾವಲಂಬಿ ದೇಶ ನಮ್ಮದಾಗುತ್ತದೆ ಎಂದರು.
ರಾಜ್ಯ ಕಾರ್ಯದರ್ಶಿ ರವಿಕಿರಣ ಪೊಣಚೆ ಮಾತನಾಡಿ, ಸರ್ಕಾರಗಳು ಕೈಗಾರಿಕೆ ಹೆಚ್ಚಿಸಿ ಉದ್ಯೋಗ ನೀಡುವ ಪೊಳ್ಳು ಭರವಸೆ ಬಿಟ್ಟು, ಮೌಲ್ಯವರ್ಧನ ಮಾದರಿಯಲ್ಲಿ ಶೇ.60ರಷ್ಟು ಕೃಷಿ ಕ್ಷೇತ್ರದಲ್ಲಿ ದುಡಿಯುವ ಕೈಗಳಿಗೆ ಪ್ರೋತ್ಸಾಹ ಧನ, ಉಳಿದವರಿಗೆ ಗುಡಿ ಕೈಗಾರಿಕೆಗಳನ್ನು ಹೆಚ್ಚಿಸಿ ನಿರುದ್ಯೋಗ ಸಮಸ್ಯೆ ದೂರ ಮಾಡಬೇಕು ಎಂದು ಹೇಳಿದರು.
ಶಿವಯ್ಯ ಸ್ವಾಮಿ ಹಾಗೂ ಚಂದ್ರಶೇಖರ ಜಮಖಂಡಿ ಮಾತನಾಡಿದರು. ಶ್ರೀ ರಾಜೇಶ್ವರ ಶಿವಾಚಾರ್ಯರು ಸಾನ್ನಿಧ್ಯ ಮತ್ತು ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೈಜಿನಾಥ ನೌಬಾದೆ ನಿರ್ಣಯ ಮಂಡಿಸಿದರು. ಜಿಪಂ ಸದಸ್ಯ ರವಿಂದ್ರ ರೆಡ್ಡಿ, ವೈದ್ಯ ಡಾ| ಅಶೋಕಕುಮಾರ ನಾಗೂರೆ, ಮುಖಂಡರಾದ ಶಿವಕುಮಾರ ಸ್ವಾಮಿ, ರಾಜು ಕಡ್ಯಾಳ್, ಓಂಪ್ರಕಾಶ ರೊಟ್ಟೆ, ದಯಾನಂದ ಸ್ವಾಮಿ, ಕೋಂಡಿಬಾರಾವ್ ಪಾಂಡ್ರೆ, ಶಾಮಣ್ಣ ಬಾವಗಿ, ವಿಠಲರೆಡ್ಡಿ ಅಣದೂರ, ಶೋಭಾ ಕಾರಬಾರಿ, ಸಿದ್ರಾಮಪ್ಪ ಅಣದುರೆ, ಖಾಸೀಮ್ ಅಲಿ, ಸತೀಶ ನನ್ನೂರೆ, ಸಿದ್ದಣ್ಣ ಬೂಶಟ್ಟಿ, ಶ್ರೀಮಂತ ಬಿರಾದಾರ, ಶೇಷರಾವ್ ಕಣಜಿ, ಬಾಬುರಾವ್ ಜೋಳದಾಬಕಾ ಮತ್ತಿತರರು ಇದ್ದರು. ಸಂಜೀವಕುಮಾರ ಸ್ವಾಮಿ ಸ್ವಾಗತಿಸಿದರು. ಸುನಿತಾ ದಾಡಗೆ ನಿರೂಪಿಸಿದರು.
ರಾಜಕುಮಾರ ಹೆಬ್ಟಾಳೆ ವಂದಿಸಿದರು. ಕೃಷಿ ಇಲಾಖೆ, ಜಿಲ್ಲಾ ರೈತ ಸಂಘ, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಕರ್ನಾಟಕ ಜಾನಪದ ಪರಿಷತ್ತು, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜಗಳ ಜಂಟಿ ಆಶ್ರಯದಲ್ಲಿ ಮೇಳ ಹಮ್ಮಿಕೊಳ್ಳಲಾಗಿತ್ತು.
ಬಿಸಿಯೂಟದಲ್ಲಿ ಸಿರಿಧಾನ್ಯ ಬಳಸಿ ಕೃಷಿ ಸುಧಾರಕ ಕಾಳೇಕರ್ ವರದಿಯಂತೆ ಶಿಕ್ಷಣ, ಆಹಾರ, ಆರೋಗ್ಯದಲ್ಲಿ ಬದಲಾವಣೆ ಅಗತ್ಯ. ಇದರಿಂದ ರಾಸಾಯನಿಕ ಜಗತ್ತು ನಾಶವಾಗಿ ನೈಸರ್ಗಿಕ ಪ್ರಪಂಚ ಮತ್ತೆ ಸೃಷ್ಟಿಯಾಗುತ್ತದೆ. ಅದಕ್ಕಾಗಿ ಸಿರಿಧಾನ್ಯ ಬಳಿಸಿ ಅಂಗನವಾಡಿ ಮಕ್ಕಳಿಂದ ಶಾಲಾ ಮಕ್ಕಳ ವರೆಗೆ ಬಿಸಿಯುಟದಲ್ಲಿ ಸಿರಿಧಾನ್ಯ ವಿತರಿಸಲಿ. ಈ ಕಾರ್ಯ ಬೀದರ ಜಿಲ್ಲೆಯಿಂದಲೇ
ಆರಂಭವಾಗಲಿ.
ಬಡಗಲಪೂರ ನಾಗೇಂದ್ರಪ್ಪ, ರೈತ ಸಂಘದ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.