![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Oct 30, 2021, 10:55 AM IST
ಬೀದರ: ಮನುಷ್ಯ ಪ್ರಸಿದ್ಧನಾಗಲು ವಿಶ್ವಾಸ ಗಳಿಸಬೇಕು ಎಂದು ಚಿದಂಬರಾಶ್ರಮದ ಡಾ| ಶಿವಕುಮಾರ ಮಹಾಸ್ವಾಮಿಜಿ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಡಾ| ಸಿದ್ಧಾರೆಡ್ಡಿ ಫೌಂಡೇಶನ್ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹಯೋಗದಲ್ಲಿ ನಡೆದ ಸಾಧಕರ ಮಾದರಿ ಜೀವನಗಾಥೆಯ “ನೆಲದ ನೆನಪು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಡಾ| ಸಿದ್ದಾರೆಡ್ಡಿ ಕುಟುಂಬ ಯಾವತ್ತೂ ಕೊಡುಗೈ ದಾನಿಗಳಾಗಿದ್ದಾರೆ. ಲಿಂ| ಸಿದ್ದಾರೆಡ್ಡಿ ಅವರ ಶ್ರಯಸ್ಸಿಗೆ ತಾಯಿ ಗುರಮ್ಮ ಸಿದ್ದಾರೆಡ್ಡಿ ಅವರ ವಿಶ್ವಾಸ ಮುಖ್ಯ ಕಾರಣವಾಗಿದೆ ಎಂದು ಬಣ್ಣಿಸಿದರು.
ಪುಸ್ತಕ ಪರಿಚಯ ಮಾಡಿದ ಬಸವ ಸೇವಾ ಪ್ರತಿಷ್ಠಾನದ ಡಾ| ಗಂಗಾಂಬಿಕೆ ಅಕ್ಕ ಮಾತನಾಡಿದರು. ಮಾಜಿ ಸಚಿವ ಡಾ| ಭೀಮಣ್ಣ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2021ನೆಯ ಸಾಲಿನ “ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರಶಸ್ತಿಗೆ ಭಾಜನರಾಗಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರಿಗೆ ಭಕ್ತಿ ಪೂರ್ವಕವಾಗಿ ಗೌರವಿಸಲಾಯಿತು.
ಪುಸ್ತಕದ ಸಂಪಾದಕ ಡಾ| ರಘುಶಂಖ ಭಾತಂಬ್ರಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಫೌಂಡೇಶನ್ ಗೌರವಾಧ್ಯಕ್ಷೆ ಗುರಮ್ಮ ಸಿದ್ಧಾರೆಡ್ಡಿ, ಡಾ| ಬಲಬೀರ ಸಿಂಗ್, ಡಾ| ಚನಬಸಪ್ಪ ಹಾಲಹಳ್ಳಿ. ಬಿ.ಜಿ. ಶೆಟಗಾರ, ಸುರೇಶ ಚನಶೆಟ್ಟಿ, ಡಾ| ಗೀತಾ ಖಂಡ್ರೆ, ಡಾ| ಅಬ್ದುಲ್ ಖದೀರ್, ಡಾ| ವಿಜಯಶ್ರೀ ಬಶೆಟ್ಟಿ, ನರಸಿಂಗರಾವ್ ಸೂರ್ಯವಂಶಿ, ಡಾ| ರಾಜೇಶ್ರಿ ರೆಡ್ಡಿ, ಡಾ| ವಿಕ್ರಮ ಕೊಂಡಾ, ಡಾ| ಪ್ರವೀಣ ಶಿಂಧೆ, ರಾಣಿ ಸತ್ಯಮೂರ್ತಿ, ಡಾ| ಎಚ್.ಬಿ ಭರಶೆಟ್ಟಿ, ಪುಣ್ಯವತಿ ವಿಸಾಜಿ ಮತ್ತು ಕೆ.ಎಸ್ ಚಳಕಾಪುರೆ ಇದ್ದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.