ಆಕಸ್ಮಿಕ ಬೆಂಕಿ ತಗುಲಿ ಮಾರುತಿ ಒಮ್ನಿ ಭಸ್ಮ!
Team Udayavani, May 15, 2022, 3:16 PM IST
ಹುಣಸಗಿ: ಪಟ್ಟಣದ ಹೊರವಲಯದ ವಜ್ಜಲ ಹತ್ತಿರ ರಾಜ್ಯ ಹೆದ್ದಾರಿ ಮಾರ್ಗಮಧ್ಯದಲ್ಲಿ ಮಾರುತಿ ಒಮ್ನಿ ವಾಹನ ಸ್ಪಾರ್ಕ್‌ನಿಂದ ಆಕಸ್ಮಿಕ ಬೆಂಕಿ ತಗುಲಿ ಬೆಂಕಿಗಾಹುತಿಯಾದ ಘಟನೆ ಶನಿವಾರ ನಡೆದಿದೆ.
ಬೆಂಕಿಗಾಹುತಿಯಾದ ವಾಹನ ವೆಂಕಣ್ಣ ಮಡಿವಾಳರ ಜೈನಾಪುರ ಎಂಬುವವರಿಗೆ ಸೇರಿದ್ದು, ಚಾಕ್‌ಲೆಟ್ ವ್ಯಾಪಾರಿಯಾಗಿದ್ದರು ಎನ್ನಲಾಗಿದೆ.
ಎರಡು ತಿಂಗಳ ಹಿಂದಷ್ಟೇ ಹಳೆಯ ಮಾರುತಿ ವಾಹನವನ್ನು ತನ್ನ ವ್ಯಾಪಾರಕ್ಕಾಗಿ ಖರೀದಿಸಿದ್ದರು. 40 ಸಾವಿರ ರೂ. ಬೆಲೆಬಾಳುವ ಚಾಕ್‌ಲೆಟ್ ಮತ್ತು ಸಿಹಿ ಕುರುಕಲು ತಿನಿಸುಗಳೊಂದಿಗೆ ಮಾರಾಟಕ್ಕೆ ದೇವಾಪುರ ಕ್ರಾಸ್ ವರೆಗೆ ಹೋಗಿ ಮರಳಿ ಹುಣಸಗಿಗೆ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಸ್ಥಳೀಯರು ಟ್ಯಾಂಕರ್ ನೀರು ಬಳಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಅಷ್ಟೋತ್ತಿಗಾಗಲೇ ವಾಹನ ಸಂಪೂರ್ಣ ಸುಟ್ಟು ಹೋಗಿತ್ತು. ಡ್ಯಾಶ್ ಬೋರ್ಡ್ ನಲ್ಲಿ ಹೊಗೆ ಕಂಡು ಬಂದು ನನಗೆ ಸಂಶಯ ಉಂಟಾಯಿತು. ನಂತರ ವಾಹನದೊಳಗಿನ ಚಾಕಲೆಟ್ ಹೊರಗೆ ಎಸೆಯಬೇಕು ಅನ್ನುವಷ್ಟರಲ್ಲಿ ದಿಢೀರ್ ಬೆಂಕಿ ಹತ್ತಿಕೊಂಡಿತು ಎಂದು ವ್ಯಾಪಾರಿ ತಿಳಿಸಿದರು. ಇದರಿಂದ ವ್ಯಾಪಾರಕ್ಕೆ ಹಾನಿಯಾಗಿದೆ. ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ ಎಂದು ದುಃಖ ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.