ರಾಜಧಾನಿಗೆ ರೆಕ್ಕೆ ಬಿಚ್ಚಲಿದೆ ಲೋಹದ ಹಕ್ಕಿ!
Team Udayavani, Feb 24, 2022, 1:26 PM IST
ಬೀದರ: ರಾಜಧಾನಿ ಬೆಂಗಳೂರಿಗೆ ಲೋಹದ ಹಕ್ಕಿಯಲ್ಲಿ ಹಾರಾಡಬೇಕೆಂಬ ಧರಿನಾಡು ಬೀದರ ಜನರ ಕನಸು ನನಸಾಗಲಿದೆ. ಏರ್ ಕ್ರಾಫ್ಟ್ (ವಿಮಾನ) ಮತ್ತು ಪ್ರಯಾಣಿಕರ ಕೊರತೆ ನೆಪವೊಡ್ಡಿ ಕಳೆದ ಮೂರ್‍ನಾಲ್ಕು ತಿಂಗಳಿಂದ ವಿಮಾನ ಹಾರಾಟ ಸೇವೆ ಸ್ಥಗಿತಗೊಳಿಸಿದ್ದ ಟ್ರೂಜೆಟ್ ಸಂಸ್ಥೆ, ಫೆ.24ರಿಂದ ಮತ್ತೆ ಪುನರ್ ಆರಂಭಿಸಲು ನಿರ್ಧರಿಸಿದೆ.
ದಶಕಗಳ ಹೋರಾಟದ ಫಲವಾಗಿ ಯುದ್ಧ ವಿಮಾನಗಳ ತರಬೇತಿ ನೆಲೆಯಾಗಿರುವ ಬೀದರನಲ್ಲಿ ನಾಗರಿಕ ವಿಮಾನಯಾನ (ಕೇಂದ್ರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ) ಆರಂಭಿ ಸಲಾಗಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಕೋವಿಡ್ ಮತ್ತು ಲಾಕ್‌ಡಾನ್ ತೆರವು ಬಳಿಕವೂ ಟ್ರೂಜೆಟ್ ಸಂಸ್ಥೆ ವಿಮಾನಗಳ ಕೊರತೆ ಸಮಸ್ಯೆ ಮುಂದಿಟ್ಟು ತನ್ನ ಸೇವೆಯನ್ನು ನಿಲ್ಲಿಸಿತ್ತು. ಹಾಗಾಗಿ ಏರ್‌ಪೋರ್ಟ್ ಉದ್ಘಾಟನೆಗೊಂಡ ಒಂದೂವರೆ ವರ್ಷದಲ್ಲೇ ವಿಮಾನಯಾನಕ್ಕೆ ಗ್ರಹಣ ಹಿಡಿದು, ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.
70 ಆಸನಗಳ ಸೌಲಭ್ಯವುಳ್ಳ ಟ್ರೂಜೆಟ್ ಸಂಸ್ಥೆ ಬೀದರ-ಬೆಂಗಳೂರು ನಡುವೆ ವಿಮಾನ ಹಾರಿಸುತ್ತಿದ್ದು, ಆರಂಭದಲ್ಲಿ ವಾರದ 7 ದಿನಗಳ ಕಾಲ ಲಭ್ಯವಿದ್ದ ವಿಮಾನ ಸೇವೆ ನಂತರ ಕೋವಿಡ್ ಲಾಕ್‌ಡೌನ್ ನಿಂದ 2 ತಿಂಗಳು ವಿಮಾನಯಾನ ಸೇವೆ ಸ್ಥಗಿತಗೊಳಿಸಿತ್ತು. ಲಾಕ್‌ಡೌನ್ ತೆರವು ಬಳಿಕ ವಾರದಲ್ಲಿ ಕೇವಲ 2 ದಿನ ಮಾತ್ರ ಸೇವೆ ನೀಡಿದ್ದ ಟ್ರೂಜೆಟ್ ಸಂಸ್ಥೆ, ಕಳೆದ ನವೆಂಬರನಿಂದ ವಾರದಲ್ಲಿ 4 ದಿನ ವಿಮಾನ ಹಾರಾಟ ಶುರು ಮಾಡಿತ್ತು. ನಂತರ ಎರಡು ವಾರಕ್ಕೊಂದು ವಿಮಾನ ಹಾರಾಡಿ ಬಳಿಕ ಸೇವೆಯನ್ನೇ ಸ್ಥಗಿತಗೊಳಿತ್ತು.
ಕೋವಿಡ್ ಲಾಕ್‌ಡೌನ್ ನಡುವೆಯೂ ವಿಮಾನಯಾನ ಆರಂಭವಾದ ಒಂದು ವರ್ಷದ ಅವಧಿಯಲ್ಲಿಯೇ ಬೀದರ-ಬೆಂಗಳೂರು ನಡುವೆ 166 ವಿಮಾನಗಳ ಹಾರಾಟ ಆಗಿದ್ದು, 6923 ಜನರು ಪ್ರಯಾಣಿಸಿದ್ದರು. ಲಾಕ್ ಡೌನ್ ತೆರವು ಬಳಿಕ ಬೇಡಿಕೆ ಹೆಚ್ಚುತ್ತಿದ್ದರಿಂದ ಹಿಂದಿನಂತೆ ನಿತ್ಯ ಕಾರ್ಯಾಚರಣೆ ಮಾಡಬೇಕು. ಜತೆಗೆ ಬೀದರನಿಂದ ಮುಂಬೈ, ಪುಣೆ, ದೆಹಲಿ ಮತ್ತು ಅಮೃತಸರ್‌ಗೆ ವಿಮಾನ ಹಾರಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಇತ್ತ ಟ್ರೂಜೆಟ್ ಸಂಸ್ಥೆ ಸದ್ಯ ಲಭ್ಯವಿದ್ದ ವಿಮಾನಯಾನ ಸೇವೆಯನ್ನೇ ಕಡಿತ ಮಾಡಿ ಜನರ ಕೆಂಗೆಣ್ಣಿಗೆ ಗುರಿಯಾಗಿತ್ತು.
ಇದರಿಂದ ಜಿಲ್ಲೆಯ ಜನ ಅನಿವಾರ್ಯವಾಗಿ ಕಲ್ಬುರ್ಗಿ ಅಥವಾ ಹೈದ್ರಾಬಾದ್ ಮೂಲಕ ಬೆಂಗಳೂರಿಗೆ ತೆರಳಬೇಕಾದಂಥ, ಇಲ್ಲವೇ ರೈಲು ಮತ್ತು ಬಸ್‌ಗಳ ಮೂಲಕ ಸಂಚರಿಸಬೇಕಾದ ಸ್ಥಿತಿ ಎದುರಾಗಿತ್ತು. ವಿಮಾನಯಾನ ಬಂದ್‌ಗೆ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತಲ್ಲದೇ ಜಿಲ್ಲೆಯ ಶಾಸಕರು ಸಹ ಧ್ವನಿ ಎತ್ತಿದ್ದರು. ಕೊನೆಗೂ ಕೇಂದ್ರದ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ಟ್ರೂಜೆಟ್, ಜಿಎಂಆರ್ ಸಂಸ್ಥೆ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸಿ, ಎದುರಾಗಿದ್ದ ತೊಡಕುಗಳನ್ನು ನಿವಾರಿಸಿ ಮತ್ತೆ ಆಗಸದಲ್ಲಿ ಮತ್ತೆ ವಿಮಾನ ಹಾರಾಟ ಶುರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಟ್ರೂಜೆಟ್ ಸಂಸ್ಥೆ ಫೆ.24ರಿಂದ ಸದ್ಯ ವಾರದಲ್ಲಿ ಮಂಗಳವಾರ, ಗುರುವಾರ ಮತ್ತು ರವಿವಾರ ಮೂರು ದಿನ ವಿಮಾನ ಹಾರಿಸಲು ಮುಂದಾಗಿದೆ.
ವಿಮಾನ ನಂ.2ಟಿ625 ಬೆಳಿಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.10 ಬೀದರ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ವಿಮಾನ ನಂ.2ಟಿ626 ಮಧ್ಯಾಹ್ನ 1.40ಕ್ಕೆ ಬೀದರನಿಂದ ಹೊರಟು ಮಧ್ಯಾಹ್ನ 3.25ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಒಟ್ಟು 1 ಗಂಟೆ 45 ನಿಮಿಷ ಪ್ರಯಾಣ ಇರಲಿದೆ.
ಕೋವಿಡ್ ಹಾಗೂ ಇತರೆ ಕಾರಣದಿಂದಾಗಿ ಬೀದರನಿಂದ ನಾಗರಿಕ ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು. ಇದರಿಂದ ಬೀದರ ಜನತೆಗೆ ಬೆಂಗಳೂರಿಗೆ ಪ್ರಯಾಣಿಸಲು ತುಂಬಾ ಅನಾನುಕೂಲವಾಗುತ್ತಿತ್ತು. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನಕ್ಕೆ ತಂದು ಎಲ್ಲ ತೊಡಕುಗಳನ್ನು ನಿವಾರಿಸಿದ್ದೇನೆ. ಫೆ.24ರಿಂದ ಟ್ರೂಜೆಟ್ ಸಂಸ್ಥೆ ವಿಮಾನ ಹಾರಾಟ ನಡೆಸಲಿದ್ದು, ಜಿಲ್ಲೆಯ ಜನರು ವಿಮಾನಯಾನ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು. -ಭಗವಂತ ಖೂಬಾ, ಕೇಂದ್ರ ಸಚಿವರು, ರಸಗೊಬ್ಬರ- ರಸಾಯನಿಕ ಖಾತೆ
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.