![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Apr 30, 2021, 2:20 PM IST
ಬೀದರ್: ಕೊವೀಡ್ ಸೋಂಕಿನ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರದಿದ್ದರೆ ರಾಜ್ಯದಲ್ಲಿ ಕರ್ಫ್ಯೂ ಮುಂದುವರೆಸುವುದು ಅನಿವಾರ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆ ಆಗಬೇಕಾದರೆ ಚೈನ್ ಮುರಿಯಬೇಕು. ಅದಕ್ಕಾಗಿ 14 ದಿನ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಜವಾಬ್ದಾರಿಯಿಂದ ವರ್ತಿಸಿ ಚೈನ್ ಕಡಿತತಕ್ಕೆ ಸಹಕರಿಬೇಕಿದೆ. ಪಾಸಿಟಿವ್ ಸಂಖ್ಯೆ ಹೀಗೆ ಮುಂದುವರೆದರೆ ಕಠಿಣ ಕ್ರಮಗಳನ್ನು ಮುಂದುವರೆಸುವುದು ಅನಿವಾರ್ಯ ಆಗುತ್ತದೆ ಎಂದರು.
ಇದನ್ನೂ ಓದಿ:ಆಕ್ಸಿಜನ್ ಬೇಕಿದ್ರೆ ಅಶ್ವತ್ಥ ಮರದ ಕೆಳಗೆ ಹೋಗಿ ಕುಳಿತುಕೊಳ್ಳಿ..ಇದು ಪೊಲೀಸರ ಬಿಟ್ಟಿ ಸಲಹೆ!
ರಾಜ್ಯದಲ್ಲಿ ಕೊವೀಡ್ ಸೋಂಕಿನಿಂದ ಸಾವನ್ನಪ್ಪಿದವರ ತಪ್ಪು ಸಂಖ್ಯೆ ಕೊಡುವ ಪ್ರಶ್ನೆಯೇ ಇಲ್ಲ. ಸೋಂಕಿತರ ಅಂಕಿ ಅಂಶಗಳನ್ನು ಐಸಿಎಂಆರ್ ಪೋರ್ಟಲ್ ನಲ್ಲಿ ಶೇರ್ ಮಾಡಬೇಕಾಗುತ್ತದೆ. ಸರ್ಕಾರ ಮುಚ್ಚಿಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ಕೋವಿಡನಿಂದ ಮೃತಪಟ್ಟಿದ್ದರೆ ಪೋರ್ಟಲ್ ಹೇಳುತ್ತದೆ. ಬೇರೆ ಸಮಸ್ಯೆಯಿಂದ ಮೃತಪಟ್ಟಿದ್ದರೆ ಐಸಿಎಂಅರ್ ನಲ್ಲಿ ಬರುವುದಿಲ್ಲ. ತಾಂತ್ರಿಕ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.