![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 1, 2022, 3:28 PM IST
ಬೀದರ: ಟಾಟಾ ಸಹಯೋಗದೊಂದಿಗೆ 150 ಕಡೆಗಳಲ್ಲಿ ಅನುಷ್ಠಾನ ಗೊಂಡಿರುವ ಉದ್ಯೋಗ ಯೋಜನೆ ಇಂದು ದೇಶಕ್ಕೆ ಮಾದರಿಯಾಗಿದೆ. ತರಬೇತಿದಾರರು ಇತ್ತೀಚಿನ ಕೈಗಾರಿಕೆಯ ಬಹು ಕೌಶಲ ತಂತ್ರಜ್ಞಾನ ಕಲಿಯಲು ಉದ್ಯೋಗ ಯೋಜನೆ ಬಲು ಸಹಕಾರಿಯಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕ ಯೋಗೇಶ್ವರ ಎಸ್. ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಜೀವನ ಸಮೃದ್ಧಿ ತರಬೇತಿದಾರರಿಗೆ ವಿಶೇಷ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಯೋಜನೆಯಡಿ ಮೆಕ್ಯಾನಿಕ ಎಲೆಕ್ಟ್ರಿಕ್ ವೆಹಿಕಲ್ ಹಾಗೂ ರೋಬೆಟಿಕ ಕೋರ್ಸ್ ಪ್ರಾರಂಭಿಸಿದೆ. ಇನ್ನು ಅನೇಕ ಅಲ್ಪಾವಧಿ ಕೋರ್ಸ್‌ಗಳು ಸಹ ಉಚಿತವಾಗಿ ಕಲ್ಪಿಸಲಾಗುವುದು. ಕೋಟ್ಯಂತರ ಬೆಲೆಬಾಳುವ ಯಂತ್ರೋಪಕರಣ ಹಾಗೂ ಅತ್ಯಂತ ಬೆಲೆ ಬಾಳುವ ಸಾಪ್ಟವೇರ್ ಅಳವಡಿಸಿದೆ. ಇದೊಂದು ತಂತ್ರಜ್ಞಾನದ ಹಬ್ ಆಗಬೇಕೆಂಬ ವಿಚಾರ ನಮ್ಮೆಲ್ಲರದ್ದಾಗಿದೆ ಎಂದರು.
ದೇಶದಲ್ಲೆ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ ಚಾಲನೆ ಮಾಡಿದ್ದು, ಇಲ್ಲಿ ಕಲಿತ ಎಲ್ಲರಿಗೆ ಖಂಡಿತವಾಗಿ ನೌಕರಿಗಾಗಿ ಪರಿತಪಿಸುವ ಭ್ರಮೆ ಇಲ್ಲ. ಈಗಾಗಲೇ ಟಾಟಾನವರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಪ್ರಾಯೋಗಿಕ ಪರಿಣಿತ ಕುಶಲಕರ್ಮಿಗಳಿಗೆ ಅವರೇ ಉದ್ಯೋಗ ಕೊಡುತ್ತಾರೆ. ತಾವು ಕೇವಲ ಕಲಿಯುವುದರ ಕಡೆಗೆ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಹಿರಿಯ ಪ್ರಾಧ್ಯಾಪಕ ಪ್ರೊ| ಅಶೋಕ ಪಾಟೀಲ ಮಾತನಾಡಿ, ಇಂದು ಶಿಕ್ಷಣಕ್ಕೆ ಬೆಲೆ ಸಿಕ್ಕು, ನೌಕರಿ ಬೇಕೆಂದರೆ ವ್ಯಕ್ತಿಯಲ್ಲಿ ಕೌಶಲ ಕರಗತವಾಗಿರಬೇಕು. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೂ ಎರಡು ವರ್ಷಗಳಿಂದ ಮೆಕ್ಯಾನಿಕಲ್ ಹಾಗೂ ವೆಲ್ಡಿಂಗ್ ಡೆಕ್ನೊಲಾಜಿ ಬಗ್ಗೆ ಇಲ್ಲಿ ಪ್ರಾಯೋಗಿಕ ಹಾಗೂ ವೃತ್ತಿ ಸಿದ್ಧಾಂತ ಹೇಳಿಕೊಡಲಾಗುತ್ತಿದೆ. ಇದರಿಂದ ತುಂಬ ಅನುಕೂಲವಾಗಿದೆ. ಇನ್ಮುಂದೆ ಕೌಶಲ ಇದ್ದವನಿಗೆ ಮಾತ್ರ ನೌಕರಿ ಎಂಬುದು ನಾವೆಲ್ಲರೂ ಅರಿಯಬೇಕಿದೆ ಎಂದು ಹೇಳಿದರು.
ಜಿಲ್ಲಾ ಐಟಿಐ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ, ಅನೇಕ ಸಂಕಷ್ಟಗಳ ಮಧ್ಯೆಯು ಇಲಾಖೆಯ ಮಾರ್ಗದರ್ಶನ ಹಾಗೂ ಸ್ಥಳಿಯ ಜನಪ್ರತಿನಿಧಿಗಳ ಸಹಕಾರ ಜೊತೆಗೆ ಅನೇಕ ಕೈಗಾರಿಕೆಗಳ ಮಾನವ ಸಂಪನ್ಮೂಲ ಅಧಿಕಾರಿಗಳು ನಮ್ಮ ಆಮಂತ್ರಣಕ್ಕೆ ಮನ್ನಣೆ ನೀಡಿರುವ ಫಲವೇ ಇಂದು ನಮ್ಮ ಬೀದರ ಐಟಿಐ ಅಭಿವೃದ್ಧಿ ಹೊಂದಲು ಪ್ರಮುಖ ಕಾರಣವಾಗಿದೆ ಎಂದರು.
ನಿವೃತ್ತ ಪಾಚಾರ್ಯ ಪ್ರೊ| ರಾಜಪ್ಪ ಅವರನ್ನು ಗೌರವಿಸಿದರು. ಇಲಾಖೆಯ ಹಿರಿಯ ಉಪನಿರ್ದೇಶಕ ಕೆ.ಆರ್. ಹಾಲಪ್ಪ ಶೆಟ್ಟಿ, ಪ್ರಾಚಾರ್ಯರಾದ ಲಕ್ಷ್ಮೀಕಾಂತ ಭಾಲ್ಕಿ, ಶಿವಕುಮಾರ ಪಾಟೀಲ, ವೀರೇಶ ಪಾಟೀಲ, ಬಸವರಾಜ ಗುಪ್ತಾ ಸೇರಿ ಇನ್ನಿತರರಿದ್ದರು. ಜಿಲ್ಲಾಡಳಿತದಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಕಿರಿಯ ತರಬೇತಿ ಅಧಿಕಾರಿ ಯೂಸುಫಮಿಯ್ಯ ಜೋಜನಾ ಅವರನ್ನು ಸನ್ಮಾನಿಸಲಾಯಿತು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.