ಪೊಲೀಸ್ ಠಾಣೆ ಆವರಣದಲ್ಲಿ ಮಾದರಿ ಉದ್ಯಾನವನ
Team Udayavani, Sep 9, 2020, 4:24 PM IST
ಭಾಲ್ಕಿ: ಪಟ್ಟಣದ ಪೊಲೀಸ್ ಉಪಾಧೀಕ್ಷಕರ ಉಪ ವಿಭಾಗ (ಡಿವೈಎಸ್ಪಿ) ಕಚೇರಿಗೆ ಸೋಮವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಆವರಣದಲ್ಲಿ ತಲೆಯೆತ್ತುತ್ತಿರುವ ಔಷಧೀಯ ಸಸ್ಯಗಳ ಉದ್ಯಾನವನ, ಪೊಲೀಸ್ ಬೃಂದಾವನ ಹಾಗೂ ಕೃಷಿ ಹೊಂಡ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಡಿವೈಎಸ್ಪಿ ಡಾ|ದೇವರಾಜ್ ಕ್ರಿಯಾಶೀಲರಾಗಿದ್ದು, ಅಧಿ ಕಾರ ವಹಿಸಿ ಕೊಂಡು ಕೆಲವೇ ತಿಂಗಳಾದರೂ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ರೂಪಿಸಿ ಇತರೆ ಪೊಲೀಸ್ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಪೊಲೀಸ್ ಆವರಣದಲ್ಲಿ ಡಿವೈಎಸ್ಪಿ ನೇತೃತ್ವದ ತಂಡ ಔಷಧೀಯ ಸಸ್ಯಗಳ ಹಾಗೂ ಉದ್ಯಾನವನ ಅಭಿವೃದ್ಧಿಪಡಿಸುತ್ತಿರುವುದು ಮಾದರಿ. ಮಾವು, ತೆಂಗು ಸೇರಿದಂತೆ ವಿವಿಧ ತಳಿಯ ಸುಮಾರು 3 ಸಾವಿರ ಸಸಿ ನೆಡುವ ಜತೆಗೆ 78 ವಿವಿಧ ಬಗೆಯ 700ಕ್ಕೂ ಅಧಿಕ ಔಷ ಧೀಯ ಗುಣ ಹೊಂದಿರುವ ಸಸಿ ಬೆಳೆಸುತ್ತಿರುವುದು ಪ್ರಯೋಜನಕಾರಿ. ಸಸಿಗಳ ನಿರ್ವಹಣೆಗೆ ನೀರಿನ ಕೊರತೆಯಾಗದಂತೆ ಕೃಷಿ ಹೊಂಡ, ಕೊಳವೆಬಾವಿ ಬಳಿ ಇಂಗು ಗುಂಡಿ, ಕಾಂಪೌಂಡ್ ನಿರ್ಮಿಸಿರುವುದು ಸಂತಸ ತಂದಿದೆ ಎಂದರು.
ಡಿವೈಎಸ್ಪಿ ಡಾ| ದೇವರಾಜ್.ಬಿ ಮಾತನಾಡಿ, ಪೊಲೀಸ್ ಆವರಣದ ಖಾಲಿ ಪ್ರದೇಶದಲ್ಲಿ ಬೆಳೆದಿದ್ದ ಪಾರ್ಥೇನಿಯಂ, ಕಸ, ಕಡ್ಡಿ ಬೇರ್ಪಡಿಸಿ ದಾನಿಗಳ ಸಹಾಯದಿಂದ ಉದ್ಯಾನವನ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಲಾಗಿದೆ ಎಂದರು. ಈ ವೇಳೆ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಶಶಿಧರ ಕೋಸಂಬೆ, ಕೆ.ಡಿ. ಗಣೇಶ, ರೋಹಿತ ವೈರಾಗ್ಯ, ಕಪಿಲ್ ಕಲ್ಯಾಣೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.