ಬೆಳಗ್ಗೆ ನೀರಸ-ಸಂಜೆ ಬಿರುಸಿನ ಮತದಾನ
Team Udayavani, May 13, 2018, 3:17 PM IST
ಬೀದರ: ಜಿಲ್ಲೆಯಲ್ಲಿ ಶನಿವಾರ ಮತದಾನವು ಸುಗಮ ಮತ್ತು ನೈತಿಕ ಚುನಾವಣೆ ಗುರಿಯಂತೆ ನಡೆಯಿತು. ಜಿಲ್ಲೆಯ
ಬಸವಕಲ್ಯಾಣ, ಹುಮನಾಬಾದ್, ಬೀದರ ದಕ್ಷಿಣ, ಬೀದರ, ಭಾಲ್ಕಿ ಮತ್ತು ಔರಾದ ಕ್ಷೇತ್ರ ಸೇರಿದಂತೆ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ನಡೆಯಿತು.
ಕೆಲ ಮತಗಟ್ಟೆಗಳಲ್ಲಿ ಮತದಾನವು ಬೆಳಗ್ಗೆಯಿಂದಲೇ ಬಿರುಸಿನಿಂದ ಕೂಡಿತ್ತು. ಕೆಲ ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಚುರುಕುಗೊಂಡಿತು. ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನದ ಮುಕ್ತಾಯದ ಅವಧಿವರೆಗೆ ಯಾವುದೇ ತೊಂದರೆಯಿಲ್ಲದೇ ಶಿಸ್ತುಬದ್ಧವಾಗಿ ನಡೆಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದರು.
ಬೆಳಗಿನ 9:40ರ ವೇಳೆಗೆ ಬೀದರ ಕ್ಷೇತ್ರ ವ್ಯಾಪ್ತಿಯ ಮರಕಲ್‌ನ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ
ಮತಚಲಾವಣೆಗೆ ಗ್ರಾಮಸ್ಥರು ಹೆಚ್ಚು ಸಂಖ್ಯೆಯಲ್ಲಿ ಸಾಲಾಗಿ ನಿಂತಿದ್ದು ಕಂಡು ಬಂದಿತು. ಮತಗಟ್ಟೆ ಸಂಖ್ಯೆ 36ರಲ್ಲಿ 1,182 ಮತದಾರರ ಪೈಕಿ 200, ಮತಗಟ್ಟೆ ಸಂಖ್ಯೆ 37ರಲ್ಲಿ 729 ಮತದಾರರ ಪೈಕಿ 100 ಜನರು ಮತದಾನ ಮಾಡಿದ್ದು ಕಂಡು ಬಂದಿತು.
ಬೆಳಗಿನ 10ರ ವೇಳೆಗೆ ಔರಾದ ಕ್ಷೇತ್ರ ವ್ಯಾಪ್ತಿಯ ಕೌಠಾ (ಬಿ)ನ ಮತಗಟ್ಟೆಗಳಲ್ಲಿ ಶೇ.20ರಷ್ಟು ಮತದಾನ ದಾಖಲಾಗಿತ್ತು. ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿದ್ದ ಮತಗಟ್ಟೆ ಸಂಖ್ಯೆ 264 ಹಾಗೂ 247 ಮತಗಟ್ಟೆಗಳಲ್ಲಿ ಮತದಾನ ಅಚ್ಚುಕಟ್ಟಾಗಿ ನಡೆದಿತ್ತು. ಬೆಳಗಿನ 10:20ರ ವೇಳೆಯಲ್ಲಿ ತಾಲೂಕಿನ ಅಲಿಯಂಬರ್ ಸರ್ಕಾರಿ ಶಾಲಾ
ಕಟ್ಟಡದಲ್ಲಿದ್ದ ಮತಗಟ್ಟೆ ಸಂಖ್ಯೆ 18ರಲ್ಲಿ ಶೇ.16ರಷ್ಟು ಹಾಗೂ 20ರಲ್ಲಿ ಶೇ.20ರಷ್ಟು ಮತದಾನವಾಗಿತ್ತು.
ಬೆಳಗ್ಗೆ 11ಕ್ಕೆ ಭಾಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆರೂರ ಸರ್ಕಾರಿ ಶಾಲಾ ಕಟ್ಟಡದಲ್ಲಿನ ಮತಗಟ್ಟೆ ಸಂಖ್ಯೆ 135ರಲ್ಲಿ ಒಟ್ಟು
ಮತದಾರರ ಪೈಕಿ ಶೇ.27ರಷ್ಟು ಜನರು ಮತಹಕ್ಕು ಚಲಾಯಿಸಿದ್ದರು. ಮಹಿಳೆಯರು ಸರದಿ ಸಾಲಿನಲ್ಲಿ ಕುಳಿತು ಮತಹಕ್ಕು ಚಲಾಯಿಸುವುದು ಕಂಡು ಬಂದಿತು.
11:45ರ ವೇಳೆಗೆ ಭಾಲ್ಕಿ ಮತಕ್ಷೇತ್ರದ 129 ಮತಗಟ್ಟೆಯಲ್ಲಿ ಮತದಾನದ ಪ್ರಮಾಣ ಶೇ.40ರಷ್ಟಾಗಿತ್ತು. ಮಧ್ಯಾಹ್ನ
12:15ರ ವೇಳೆಗೆ ಖಟಕ್ ಚಿಂಚೋಳಿಯ ಪಿಕೆಪಿಎಸ್ ಬ್ಯಾಂಕ್ ಕಟ್ಟಡದಲ್ಲಿದ್ದ ನಂ.239 ಮತಗಟ್ಟೆಯಲ್ಲಿ ಶೇ.50ರಷ್ಟು
ಮತದಾನವಾಗಿತ್ತು. 12:45ರ ವೇಳೆಗೆ ಚಳಕಾಪುರದ ಗ್ರಾಪಂ ಕಚೇರಿಯಲ್ಲಿದ್ದ ಸಂಖ್ಯೆ 247ರ ಮತಗಟ್ಟೆಯಲ್ಲಿ 1,321 ಮತದಾರರ ಪೈಕಿ 227 ಜನರು ಮತ ಚಲಾಯಿಸಿದರು.
ಮಧ್ಯಾಹ್ನ 1:25ರ ವೇಳೆಗೆ ಹುಮನಾಬಾದ ಕ್ಷೇತ್ರದ ಹಳ್ಳಿಖೇಡ (ಬಿ) ಸರ್ಕಾರಿ ಪ್ರೌಢಶಾಲೆ ಮತಗಟ್ಟೆ ನಂ.44ರಲ್ಲಿ ಶೇ.47ರಷ್ಟು ಹಾಗೂ ಕಟ್ಟಡದ ಬಲಭಾಗದಲ್ಲಿದ್ದ 44ಎ ಮತಗಟ್ಟೆಯಲ್ಲಿ ಶೇ.42.85ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 2 ಗಂಟೆ ವೇಳೆಗೆ ಬೀದರ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಆಣದೂರನ ಗ್ರಾಪಂ ಕಟ್ಟಡ ಆವರಣದಲ್ಲಿದ್ದ ನಂ.16 ಮತಗಟ್ಟೆಯಲ್ಲಿ ಮತದಾನ ಪ್ರಮಾಣವು ಶೇ.49.35ರಷ್ಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.