ಖಂಡ್ರೆ ಆರೋಪ ಅರ್ಥಹೀನ
Team Udayavani, Mar 14, 2021, 5:38 PM IST
ಬೀದರ: ಭಾಲ್ಕಿ ಶಾಸಕ ಈಶ್ವರ ಖಂಡ್ರೆಯವರು ನಾನು ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದೇನೆ, ಅಭಿವೃದ್ಧಿ ವಿರೋಧಿ ಎಂದು ಆರೋಪಿ ಸಿರುವುದು ಅರ್ಥಹೀನವಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೀದರ ನಗರದ ಹೊರವಲಯದ ರಿಂಗ್ ರಸ್ತೆ ಮಂಜೂರಿಯಾಗಿ ಕಾಮಗಾರಿ ಪ್ರಗತಿಯಲ್ಲಿತ್ತು. ಆದರೆ, ಗುತ್ತಿಗೆದಾರನ ಮೇಲೆ ದ್ವೇಷ ಸಾಧಿಸಿ ಟೆಂಡರ್ ಅನ್ನು ನೀವೆ ರದ್ದುಪಡಿಸಿರುವುದು ಅಮೃತ ಯೋಜನೆಯಡಿ ಜನವಾಡಾ ಮಾಂಜ್ರಾ ನದಿಗೆ ಬ್ರಿàಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಪೌರಾಡಳಿತ ಸಚಿವರಾಗಿದ್ದಾಗ ರದ್ದು ಮಾಡಿರುವುದು ಅಭಿವೃದ್ಧಿ ವಿರೋಧಿ ನೀತಿ ಅಲ್ಲವೇ ? ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ನಿಮ್ಮ ವ್ಯಕ್ತಿಗೆ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸುಮಾರು 4 ವರ್ಷಗಳಿಂದ ಕೇಂದ್ರ ಪ್ರಾರಂಭಕ್ಕೆ ಬಿಡದಿರುವುದು ಬಡವರ ವಿರೋಧಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ವಿರೋಧಿ ಕೆಲಸ ಮಾಡುವುದು ನಿಮ್ಮ ಇತಿಹಾಸವಿದೆ. ನನ್ನ ಮೇಲೆ ಆರೋಪ ಮಾಡಲು ನಿಮಗೆ ಯಾವ ನೈತಿಕತೆಯಿದೆ ಎಂದು ಹೇಳಿರುವ ಖೂಬಾ, ಜಿಲ್ಲೆಯಲ್ಲಿ ಸಂಸದರ ಅವಧಿಯಲ್ಲಿ ಯಾವ್ಯಾವ ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದನ್ನು ಪುಸ್ತಕದ ರೂಪದಲ್ಲಿ ಹೊರತಂದು ಜನರಿಗೆ ಲೆಕ್ಕ ಕೊಟ್ಟಿರುವ ಮೊದಲ ಸಂಸದ ನಾನು. ಒಬ್ಬ ಸಂಸದನಾಗಿ ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಭ್ರಷ್ಟಾಚಾರ, ತಾನಾಶಾಯಿ, ಸಂವಿಧಾನಕ್ಕೆ ಅಗೌರವ ಹಾಗೂ ಜನರಿಗೆ ಅನ್ಯಾಯವಾಗುತ್ತಿದ್ದರೆ ಅದರ ವಿರುದ್ಧ ಧ್ವನಿ ಎತ್ತುತ್ತೇನೆ. ಅಭಿವೃದ್ಧಿ ಪರ ಕೆಲಸಗಳಿಗೆ ವಿರೋಧ ಮಾಡುವುದಿಲ್ಲ ಎಂದಿದ್ದಾರೆ.
ನಿಮ್ಮ ದುರಾಡಳಿತದಿಂದ ಭಾಲ್ಕಿ ತಾಲೂಕಿನ ಅರ್ಹ ವಸತಿ ಫಲಾನುಭವಿಗಳಿಗೆ ಹಣ ಬರುವುದು ತಡವಾಗಿದೆ. ಆದರೆ, ಈಗ ನಮ್ಮ ಸರ್ಕಾರ ಅರ್ಹ ಫಲಾನುಭವಿಗಳಿಗೆ ಹಣ ನೀಡುತ್ತಿದೆ, ಮುಂದೆಯೂ ನೀಡುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.