ನೀರು ಶುದ್ಧೀಕರಣ ಘಟಕಕ್ಕೆ ಪುರಸಭೆ ಅಧಿಕಾರಿ ಭೇಟಿ
Team Udayavani, Jul 9, 2019, 11:29 AM IST
ಹುಮನಾಬಾದ: ಕಬೀರಾಬಾದವಾಡಿ ಕ್ರಾಸ್ ಬಳಿಯ ನೀರು ಶುದ್ಧೀಕರಣ ಘಟಕಕ್ಕೆ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಭೇಟಿ ನೀಡಿ ಪರಿಶೀಲಿಸಿದರು.
ಹುಮನಾಬಾದ: ಹುಮನಾಬಾದ -ಚಿಟಗುಪ್ಪ ಹಾಗೂ ಹಳ್ಳಿಖೇಡ(ಬಿ) ಮೂರು ಪಟ್ಟಣ ಹಾಗೂ 10 ಹಳ್ಳಿಗಳು ಸೇರಿ 13 ಊರುಗಳಿಗೆ ಶುದ್ಧ ನೀರಿನ ಬದಲಿಗೆ ಅಶುದ್ಧ ನೀರು ಪೂರೈಸುತ್ತಿರುವ ಕಬೀರಾಬಾದವಾಡಿ ಕ್ರಾಸ್ ಬಳಿಯ ನೀರು ಶುದ್ಧೀಕರಣ ಘಟಕ್ಕೆ ಸೋಮವಾರ ಪುರಸಭೆ ಮುಖ್ಯಾಕಾರಿ ಶಂಭುಲಿಂಗ ದೇಸಾಯಿ ಭೇಟಿನೀಡಿ ಪರಿಶೀಲಿಸಿದರು.
ಅಶುದ್ಧ ನೀರು ಪೂರೈಸುತ್ತಿರುವ ಕುರಿತು ಸೋಮವಾರ ಉದಯವಾಣಿ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಶಾಸಕ ರಾಜಶೇಖರ ಪಾಟೀಲ ಅವರು 10 ವರ್ಷಗಳ ಹಿಂದೆ 13 ಊರುಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಅನುಷ್ಠಾನಕ್ಕೆ ತಂದ ಯೋಜನೆ ಇದಾಗಿದ್ದು, ಆರಂಭದ ದಿನಗಳಲ್ಲಿ ತೋರಿಸಿದ ಆಸಕ್ತಿ ನಂತರದ ದಿನಗಳಳ್ಲಿ ತೋರಿಸದ ಕಾರಣ ಮೂರ್‍ನಾಲ್ಕು ವರ್ಷಗಳಿಂದ ಅಶುದ್ಧ ನೀರು ಪೂರೈಕೆ ಆಗುತ್ತಿತ್ತು. ಈ ಕುರಿತು ಈ ಹಿಂದೆಯೂ ಅದೆಷ್ಟೋ ಬಾರಿ ಸಂಬಂಧಪಟ್ಟ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೇ ಸೋಮವಾರ ಉದಯವಾಣಿಯಲ್ಲಿ ಸುದ್ದಿ ಬೆನ್ನಲ್ಲೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಭೇಟಿ ನೀಡಿದರು. ಸಂಬಂಧಪಟ್ಟ ವಿಭಾಗದ ಸಿಬ್ಬಂದಿಯ ನಿರ್ಲಕ್ಷ್ಯವೇ ಅಶುದ್ಧ ನೀರು ಪೂರೈಕೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.
ಸಿಬ್ಬಂದಿ ಸಮೇತ ಸ್ಥಳಕ್ಕೆ ಭೇಟಿ ನೀಡಿ ಶಂಭುಲಿಂಗ ದೇಸಾಯಿ, ಶುದ್ಧ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಒಂದೆರಡು ದಿನಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.