ಖಾಸಗಿಗೆ ಸೆಡ್ಡು ಹೊಡೆದ ಮುರ್ಕಿ ಸರ್ಕಾರಿ ಶಾಲೆ
Team Udayavani, Feb 7, 2019, 10:46 AM IST
ಕಮಲನಗರ: ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಖಾಸಗಿ ಶಾಲೆಗಳು ಪೈಪೋಟಿಯೊಡ್ಡುತ್ತಿದ್ದು, ಪೋಷಕರು ಕೂಡ ಅವುಗಳತ್ತ ಆಕರ್ಷಿತರಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಆದರೆ ಸರ್ಕಾರ ಖಾಸಗಿ ಶಾಲೆಗಳಿಗೆ ಪೈಪೋಟಿಯೊಡ್ಡುವ ರೀತಿಯಲ್ಲಿ ಸಕಲ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಆ ನಿಟ್ಟಿನಲ್ಲಿ ಮುರ್ಕಿ ಸರ್ಕಾರಿ ಶಾಲೆಯೂ ಒಂದು.
ಮಕ್ಕಳು-ಪಾಲಕರ ಆಕರ್ಷಣೆ: ಶಾಲೆ ಒಂದು ರೈಲು ಉಗಿ ಬಂಡಿಯಂತೆ ಕಾಣುತ್ತಿದ್ದು, ಕೋಣೆಗಳಿಗೆ ರೈಲಿನ ಬೋಗಿ ಬಣ್ಣ ಬಳಿಯಲಾಗಿದೆೆ. ಮಧ್ಯದಲ್ಲಿರುವ ಖಾಲಿ ಸ್ಥಳ ಪ್ಲಾಟ್ಫಾರ್ಮ್ನಂತೆ ಕಾಣುತ್ತಿದ್ದು, ಮಕ್ಕಳು-ಪಾಲಕರನ್ನು ಆಕರ್ಷಿಸುತ್ತಿದೆ.
ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ: ಶಾಲೆ ಆವರಣ ಸ್ವಚ್ಛತೆಯಿಂದ ಕೂಡಿದ್ದು, ಶಾಂತತೆ ಮನೆ ಮಾಡಿದ್ದು, ಮಕ್ಕಳ ಮನಸ್ಸು ಕೇಂದ್ರೀಕೃತವಾಗಿದೆ. ಶಾಲೆಯಲ್ಲಿ ಶಿಕ್ಷಕ ವೃಂದ, ನುರಿತವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜೊತೆಗೆ ಪಾಠದೊಂದಿಗೆ ಆಟದಲ್ಲಿಯೂ ಮಕ್ಕಳನ್ನು ತೊಡಗಿಸಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಶಿಕ್ಷಕರಿಗೆ ಸಹಕಾರ: ಕೋಣೆಗಳಲ್ಲಿ ಎಲ್ಲ ವಿಷಯಕ್ಕೆ ಸಂಬಂಧಿಸಿದ ವಿಷಯವಾರು ಮಾಹಿತಿ ಚಿತ್ರ ಗೋಡೆ ಮೇಲೆ ಬಿಡಿಸಲಾಗಿದೆ. ಶಾಲೆಯಲ್ಲಿ ಕನ್ನಡ ಹಾಗೂ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿದ್ದಾರೆ. ಒಟ್ಟು 324 ಮಕ್ಕಳು, 12 ಶಿಕ್ಷಕರು ಇದ್ದಾರೆ. ಅಲ್ಲದೇ ಪಾಲಕರೂ ಸಹ ಶಿಕ್ಷಕರಿಗೆ ಸಹಕಾರ ನೀಡಿ ಶಾಲೆ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ.
ಶಾಲೆ ಸುತ್ತ-ಮುತ್ತ ಹಸಿರುಮಯ ವಾತಾವರಣ, ಕಂಪ್ಯೂಟರ್ ಶಿಕ್ಷಣ, ವ್ಯವಸ್ಥಿತ ಆಟದ ಮೈದಾನ, ಉತ್ತಮ ಶಿಕ್ಷಣ, ಸುಸಜ್ಜಿತ ಕಟ್ಟಡ, ಶೌಚಾಲಯ ಸೇರಿ ಹಲವು ಸೌಲಭ್ಯಗಳಿವೆ. ಗುಣಮಟ್ಟದ ಶಿಕ್ಷಣ ಗಡಿಭಾಗದ ಪ್ರದೇಶದಲ್ಲಿ ಸಿಗಲು ಗ್ರಾಮಸ್ಥರ ಹಾಗೂ ಸಿಆರ್‌ಸಿ ವೆಂಕಟರಾವ್ ಭಾಲ್ಕೆ ಹಾಗೂ ಶಿಕ್ಷಕರ ಶ್ರಮವೇ ಕಾರಣ ಎನ್ನುವುದು ಸಾರ್ವಜನಿಕರ ಮಾತು.
ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಅಭ್ಯಾಸ ಮಾಡಿಸಲು ಕಂಪ್ಯೂಟರ್, ಪ್ರೊಜೆಕ್ಟರ್ ಶಾಲೆಗಳಲ್ಲಿ ದೃಶ್ಯ ಮತ್ತು ಶ್ರವ್ಯ ಸಾಧನ ಬಳಸಿ ಮಕ್ಕಳಿಗೆ ನೈಜ ಚಿತ್ರಗಳನ್ನು ತೋರಿಸುವ ಮೂಲಕ ಕಲಿಕೆ ಸುಲಭವಾಗಿಸಲಾಗುತ್ತಿದೆ.
ಮುರ್ಕಿ ಶಾಲೆ ಸುಂದರ ಶಾಲೆ. ಶಿಕ್ಷಕರು ಪ್ರಾಮಾಣಿಕ, ದಕ್ಷತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದರಿಂದ ಶಾಲೆ ತಾಲೂಕಿನಲ್ಲಿ ಉತ್ತಮ ಹೆಸರು ಗಳಿಸಿದೆ.
•ವೆಂಕಟರಾವ್ ಭಾಲ್ಕೆ, ಸಿಆರ್‌ಸಿ
ಸಿಆರ್‌ಸಿ ವೆಂಕಟರಾವ್ ಭಾಲ್ಕೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿಯಾಗಿದೆ.
•ವಿದ್ಯಾಲತಾ, ಮುಖ್ಯ ಶಿಕ್ಷಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.