ಇಟಗಾ ಗ್ರಾಮದಲ್ಲಿ ಸಂಗೀತ ರಸದೌತಣ!
Team Udayavani, Mar 6, 2019, 6:20 AM IST
ಹುಮನಾಬಾದ: ಹತ್ತಿರದ ಇಟಗಾ ಶಿವಸಿದ್ಧ ಯೋಗಾಶ್ರಮದ ಗುರುಭದ್ರೆಶ್ವರ ಮುಕ್ತಿಮಠದಲ್ಲಿ ಬೀದರ್ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘವು ರಾಜ್ಯಮಟ್ಟದ ಸಂಗೀತ ಸಮ್ಮೇಳನವನ್ನು ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನ ಪೀಠಾಧಿಪತಿ ಡಾ| ಜ್ಞಾನರಾಜ ಶ್ರೀಗಳ ಸರ್ವಾಧ್ಯಕ್ಷತೆಯಲ್ಲಿ ಮಾ.6, 7ರಂದು ಎರಡು ದಿನಗಳ ಕಾಲ ಆಯೋಜಿಸಿದೆ.
ಈಗಾಗಲೇ ಸಮ್ಮೇಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖ್ಯಾತ ಸಂಗೀತ ಕಲಾವಿದರು ಸಂಗೀತ ರಸದೌತಣ ಉಣಬಡಿಸಲಿದ್ದಾರೆ. ಸಂಗೀತ ಆಲಿಕೆಗಾಗಿ 5 ಸಾವಿರ ಕಲಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಿದ ಸಮ್ಮೇಳನ ಸ್ವಾಗತ ಸಮಿತಿ ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದೆ.
ಎರಡು ದಿನಗಳ ಕಾಲ ನಡೆಯುವ ಐತಿಹಾಸಿಕ ಸಂಗೀತ ಸಮ್ಮೇಳನದಲ್ಲಿ ಬೆಂಗಳೂರಿನ ಖ್ಯಾತ ಸಂಗೀತಗಾರ ವೆಂಕಟೇಶಕುಮಾರ ಅಲಕೋಡ್, ಅನನ್ಯ ಭಾರ್ಗವ್, ರಾಜೇಂದ್ರಸಿಂಗ್ ಪವಾರ, ಪಂಡಿತ ರಾಮುಲು ಗಾದಗಿ, ಕೋಲಕತ್ತಾದ ಕೃಷ್ಣ ಮುಖೇಡಕರ್, ಹಣಮಂತ ಮಳವಳ್ಳಿ, ರಾಜಕುಮಾರ ಮದಕಟ್ಟಿ, ನೀಲಯ್ಯ ಹಿರೇಮಠ, ರಾಮಚಂದ್ರ ಕಲಹಿಪ್ಪರಗಾ, ಡಾ| ಬಿ.ಎಂ.ಜಯಶ್ರೀ, ವಿದ್ವಾನ್ ಅನಂತ ಸತ್ಯಂ, ಅಯ್ಯಪಯ್ಯ ಹಲಗಲಿಮಠ್… ಸೇರಿದಂತೆ ಅನೇಕ ಕಲಾವಿದರು, ಸಂಗೀತ ಕಲಾಸಕ್ತರು ಕಣ್ಮನ ತಣಿಸಲಿದ್ದಾರೆ.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಚೌಧರಿ, ಸದಸ್ಯ ಮಹಾರುದ್ರಪ್ಪ ಆಣದೂರ, ಪಂಚಾಕ್ಷರ ಗವಾಯಿ ಸೇವಾ ಸಂಘದ ಗೌರವಾಧ್ಯಕ್ಷ ಪ್ರೊ| ದೇವೇಂದ್ರ ಕಮಾಲ, ಅಧ್ಯಕ್ಷ ಎಸ್.ವಿ.ಕಲ್ಮಠ್…, ಉಪಾಧ್ಯಕ್ಷ ರಾಜೇಂದ್ರಸಿಂಗ್ ಪವಾರ, ನೀಲಕಂಠ ಇಸ್ಲಾಂಪೂರ ಒಳಗೊಂಡಂತೆ ಎಲ್ಲ ಪದಾಧಿಕಾರಿಗಳು ಸಮ್ಮೇಳನದ ಸಿದ್ಧತೆಯನ್ನು ಮಂಗಳವಾರ ರಾತ್ರಿ ಪರಿಶೀಲಿಸಿದರು.
ಸಮ್ಮೇಳನ ಅಧ್ಯಕ್ಷರ ಪರಿಚಯ: ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಧರ್ಮ ಸಮನ್ವಯತೆಗೆ ಹೆಸರಾದ ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ 6ನೇ ಪೀಠಾಧಿ ಪತಿ ಡಾ| ಜ್ಞಾನರಾಜ ಮಹಾರಾಜರು ರಾಜ್ಯಮಟ್ಟದ ಸಂಗೀತ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು
ಪ್ರಭು ಸಂಸ್ಥಾನದ ಭಕ್ತರು ಹಾಗೂ ಎಲ್ಲ ಸಂಗೀತರಾಸಕ್ತರಿಗೂ ಖುಷಿ ನೀಡಿದೆ.
ಸರ್ವ ಕಲೆಗಳನ್ನು ಕರಗತವಾಗಿಸಿಕೊಂಡಿರುವ ಡಾ| ಜ್ಞಾನರಾಜ ಮಾಣಿಕಪ್ರಭುಗಳು, ಮಾಣಿಕಪ್ರಭು ಸಂಸ್ಥಾನದ ಹಿಂದಿನ ಪೀಠಾಧಿಪತಿ ಸಿದ್ಧರಾಜ ಮಹಾರಾಜ ಹಾಗೂ ಮಾತೆ ಮೀರಾಬಾಯಿ ಅವರ ಹಿರಿಯ ಪುತ್ರರಾಗಿದ್ದಾರೆ. 1958ರ ಡಿಸೆಂಬರ್ 3ರಂದು ಜನನ. ಶ್ರೀಗಳ ಶಿಕ್ಷಣ ಗ್ವಾಲಿಯರ್‌ನಲ್ಲೇ
ಪೂರ್ಣಗೊಂಡಿದೆ. 1974-75ನೇ ಸಾಲಿನಲ್ಲಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಚಿನ್ನದ ಪದಕ ವಿಜೇತರಾಗಿದ್ದಾರೆ. ಪದಕವನ್ನು ಅಂದಿನ ರಾಷ್ಟ್ರಪತಿ ಅವರು ಶ್ರೀಗಳಿಗೆ ಪ್ರದಾನ ಮಾಡಿದ್ದಾರೆ.
ಮುಂದೆ ಹಿಂದಿ ತತ್ವಜ್ಞಾನದಲ್ಲಿ ಸ್ನಾತ್ತಕೋತ್ತರ ಪದವಿ ಪೂರೈಸಿರುವ ಶ್ರೀಗಳು ಅತ್ತುತ್ತಮ ಪ್ರವಚನಕಾರರೂ ಹೌದು. ಭಜನೆಯನ್ನು ಅತ್ಯಾಕರ್ಷಕವಾಗಿ ಹಾಡುತ್ತಾರೆ. ತಂದೆ ಸಿದ್ಧರಾಜ ಮಹಾರಾಜರು 2009ರಲ್ಲಿ ಸಂಜೀವಿನಿ ಸಮಾಧಿ ಯಲ್ಲಿ ಐಕ್ಯರಾದ ಬಳಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಸ್ಥಾನದ 6ನೇ ಪೀಠಾ ಧಿಪತಿಯನ್ನಾಗಿ ನೇಮಿಸಿ ಜವಾಬ್ದಾರಿ ವಹಿಸಿಕೊಡಲಾಗಿದೆ.
ಸಂಗೀತ ಕಲಾಸಕ್ತರ ಮೆಕ್ಕಾ: ಶತಮಾನದಿಂದ ನಡೆದುಕೊಂಡು ಬರುತ್ತಿರುವ ದತ್ತಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತ ಸಂಗೀತ ಕಲಾವಿದರನ್ನು ಆಹ್ವಾನಿಸಿ, ಸಂಗೀತ ರಸಸ್ವಾದ ಉಣಬಿಡುವ ಪರಂಪರೆ ಹೊಂದಿರುವ ಈ ಸಂಸ್ಥಾನ ಸಂಗೀತ ಕಲಾವಿದರ ಪಾಲಿಗೆ ಮೆಕ್ಕಾದಷ್ಟೇ ಪವಿತ್ರ ಸ್ಥಾನವಾಗಿದೆ. ಪ್ರತಿಯೊಬ್ಬ ಸಂಗೀತ ಕಲಾವಿದ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪ್ರಭು ಸಂಸ್ಥಾನದಲ್ಲಿ ಸಂಗೀತ ಸೇವೆ ಸಲ್ಲಿಸಿದರೇ ಜೀವನ ಸಾರ್ಥಕವಾಗುತ್ತದೆ ಎಂಬ ನಂಬಿಕೆ ಹೊಂದಿರುವುದು ಪ್ರಭು ಸಂಸ್ಥಾನ ಸಂಗೀತ-ಸಾಹಿತ್ಯಕ್ಕೆ ನೀಡಿದ ಮಹತ್ವಕ್ಕೆ ಸಾಕ್ಷಿಯಾಗಿ¨
ಶಶಿಕಾಂತ ಕೆ.ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.