ಜ್ಞಾನ-ಕ್ರಿಯಾಶಕ್ತಿ ಮೂಡಿಸಲು ಸಂಗೀತ ಅಗತ್ಯ
Team Udayavani, Jan 22, 2018, 12:58 PM IST
ಬೀದರ: ಮಕ್ಕಳಲ್ಲಿ ಜ್ಞಾನ ಮತ್ತು ಕ್ರಿಯಾಶಕ್ತಿ ಮೂಡಿಸಲು ಹಾಗೂ ಅಧ್ಯಾತ್ಮಿಕ ಚೈತನ್ಯ ಬೆಳೆಸಲು ಸಂಗೀತ ಅವಶ್ಯಕವಾಗಿದೆ. ಜಾತಿ, ಧರ್ಮ, ದೇಶ ಮೀರಿದ್ದಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಹೇಳಿದರು.
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ವತಿಯಿಂದ ನಗರದ ಲಕ್ಷ್ಮೀಬಾಯಿ ಕಮಠಾಣೆ ಕನ್ಯಾ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲೆಗೊಂದು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಮಕ್ಕಳಲ್ಲಿ ಸಾಕಷ್ಟು ಸಂಗೀತ ಪ್ರತಿಭೆ ಇರುತ್ತದೆ. ಆದರೆ, ಸೂಕ್ತ ಪ್ರೇರಣೆ ಕೊರತೆಯಿಂದ ಪ್ರತಿಭೆ ಮೊಟಕುಗೊಂಡಿರುತ್ತದೆ. ಸೂಪ್ತವಾದ ಕಲೆ ಬಡಿದೆಬ್ಬಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಪ್ರೊ| ಎಸ್.ವಿ. ಕಲ್ಮಠ ಮಾತನಾಡಿ, ಸಂಗೀತದಿಂದ ಹಿಂದೆ ಅನೇಕ ಪವಾಡಗಳು ನಡೆದಿವೆ. ಖ್ಯಾತ ಸಂಗೀತಗಾರ ದೀಪ ರಾಗ ಹಾಡಿ ದೀಪ ಹಚ್ಚಿದ್ದಾರೆ. ಪಂ| ಬಸವರಾಜ ರಾಜಗುರು ಸಂಗೀತದಿಂದಲೇ ಆಕಳಿನ ಹಾಲು ಇಮ್ಮಡಿ ಮುಮ್ಮಡಿ ಹಿಂಡಿದ್ದಾರೆ. ಪಂ| ಪಂಚಾಕ್ಷರ ಗವಾಯಿಗಳು ಸಂಗೀತದಿಂದಲೇ ಮೇಘಧೂತನಿಂದ ಮಳೆ
ಬರಿಸಿದ್ದಾರೆ. ಇತಿಹಾಸದಲ್ಲಿ ಮರೆಯದ ಪವಾಡಗಳಾಗಿವೆ. ಆದ್ದರಿಂದ ಸಂಗೀತವನ್ನು ಆಸಕ್ತಿಯಿಂದ ಮಕ್ಕಳು ಕಲಿತರೆ ಮಕ್ಕಳು ಶಾಂತಿ ಮತ್ತು ಸಮಾಧಾನದಿಂದ ಜೀವನ ಸಾಗಿಸಬಹುದು ಎಂದು ಹೇಳಿದರು.
ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವೇಶ್ವರ ಹಿರೇಮಠ, ಶಾಂಭವಿ ಕೊನಗುತ್ತಿ, ವೀಣಾ ಚಿಮಕೋಡೆ, ಮಡಿವಾಳಯ್ಯ ಸಾಲಿ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಕಲಾವಿದ ರಾಜೇಂದ್ರಸಿಂಗ ಪವಾರ, ಸಂಘದ ಕೋಶಾಧ್ಯಕ್ಷ ಬಿ.ಎಸ್. ಬಿರಾದಾರ, ಸಂಚಾಲಕ ನಿರಂಜನ ಸ್ವಾಮಿ, ಹಿರಿಯ ಸಾಹಿತಿ ವಿ.ಎಂ. ಡಾಕುಳಗಿ ಇದ್ದರು. ಮುಖ್ಯಗುರು ಪ್ರಕಾಶ ಲಕಶೆಟ್ಟಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಕಾಶಿನಾಥ ಬಿರಾದಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.