ಮನ ತಣಿಸಿದ ವಚನ ಸಂಗೀತೋತ್ಸವ-ಕಲಾವಿದರಿಂದ ಸಂಗೀತ ಸೇವೆ
Team Udayavani, May 4, 2022, 3:26 PM IST
ಬೀದರ: ಬಸವ ಜಯಂತಿ ಉತ್ಸವ ಸಮಿತಿಯು ನಗರದ ರಂಗ ಮಂದಿರದಲ್ಲಿ ಬಸವ ಜಯಂತಿ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ವಚನ ಸಂಗೀತ್ಯುತ್ಸವವು ಸಭಿಕರ ಮನ ತಣಿಸಿತು.
ಬೆಂಗಳೂರಿನ ದೂರದರ್ಶನ, ಆಕಾಶವಾಣಿ ಕಲಾವಿದರಾದ ಡಿ. ಕುಮಾರದಾಸ ಹಾಗೂ ಪಂಡಿತ ಶಾಂತಲಿಂಗ ದೇಸಾಯಿ ಕಲ್ಲೂರ ಅವರು ವಚನ ಸಂಗೀತದ ಸುಧೆ ಹರಿಸಿದರು. ಕಲ್ಯಾಣಪುರದ ಬಸವಣ್ಣ, ಕಲ್ಯಾಣವೆಂಬ ಪ್ರಣತೆಯಲ್ಲಿ ಸೇರಿದಂತೆ ಬಸವಣ್ಣ, ಅಕ್ಕಮಹಾದೇವಿ ಮೊದಲಾದ ಶರಣ-ಶರಣೆಯರ ವಚನಗಳನ್ನು ಸುಮಧುರವಾಗಿ ಹಾಡಿ ನೆರೆದವರು ತಲೆದೂಗುವಂತೆ ಮಾಡಿದರು.
ಶರಣ ಕಲಾ ಲೋಕದ ಸಂಗ್ರಾಮ ಎಂಗಳೆ ಅವರ ನಿರ್ದೇಶನದಲ್ಲಿ 12ನೇ ಶತಮಾನದ 41 ಶರಣೆಯರ ವೇಷ-ಭೂಷಣ, ಕಾಯಕ ಪರಿಕರಗಳೊಂದಿಗೆ ಪಾತ್ರಧಾರಿಗಳು ನೀಡಿದ ಪ್ರದರ್ಶನ ಎಲ್ಲರ ಮೆಚ್ಚುಗೆ ಗಳಿಸಿತು. ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ಹಾಗೂ ತಂಡದವರು ವಚನ ನೃತ್ಯ ಪ್ರಸ್ತುತಪಡಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ಕುಂಬಾರವಾಡ ಹಾಗೂ ಅಲ್ಲಮ ಪ್ರಭುನಗರದ ತಂಡಗಳು ಕೋಲಾಟ ಪ್ರದರ್ಶನ ನೀಡಿದವು.
ನೂತನ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಮಹೇಶ ಬಿರಾದಾರ ಹಾಗೂ ಬಸವ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಹಿಳಾ ಸಹಕಾರ ಮಹಾ ಮಂಡಲ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಅಧ್ಯಕ್ಷತೆ ವಹಿಸಿದ್ದರು.
ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಕಾರ್ಯಾಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಪ್ರಮುಖರಾದ ಗುರುನಾಥ ಕೊಳ್ಳೂರ, ರಮೇಶ ಪಾಟೀಲ ಸೋಲಪುರ, ಸೋಮಶೇಖರ ಪಾಟೀಲ ಗಾದಗಿ, ಶರಣಪ್ಪ ಮಿಠಾರೆ, ರಾಜೇಂದ್ರಕುಮಾರ ಗಂದಗೆ, ಡಾ| ರಜನೀಶ್ ವಾಲಿ, ದೀಪಕ ವಾಲಿ, ಡಾ| ಅಮರ ಏರೋಳಕರ್, ಚಂದ್ರಶೇಖರ ಹೆಬ್ಟಾಳೆ, ರಾಜಕುಮಾರ ಪಾಟೀಲ, ರೇವಣಸಿದ್ದಪ್ಪ ಜಲಾದೆ, ಹಾವಶೆಟ್ಟಿ ಪಾಟೀಲ, ಅಶೋಕಕುಮಾರ ಕರಂಜಿ, ಅರುಣ ಹೋತಪೇಟ್, ನೀಲಮ್ಮ ರೂಗನ್, ಕಸ್ತೂರಿ ಪಟಪಳ್ಳಿ, ರತ್ನಾ ಪಾಟೀಲ, ಬಸವರಾಜ ಭತಮುರ್ಗೆ, ವಿರೂಪಾಕ್ಷ ಗಾದಗಿ ಇನ್ನಿತರರಿದ್ದರು. ಉತ್ಸವ ಸಮಿತಿಯ ವೇದಿಕೆ ಸಮಿತಿ ಅಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ; ನಟ ಸೋನು ಸೂದ್ ಚಾಲನೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.