ಸಹಾರ್ದ ಸಂಸ್ಥೆಗೆ ಸಿಗಲಿದೆ ಕೋಟಿ ರೂ. ಸಹಾಯಧನ
Team Udayavani, Sep 2, 2017, 12:27 PM IST
ಬೀದರ: ಬೀದರಿನ ಸಹಾರ್ದ ತರಬೇತಿ ಸಂಸ್ಥೆಗೆ ದೇಶದಲ್ಲೇ ಡಿಸಿಸಿ ಬ್ಯಾಂಕ್ ಹೊಂದಿರುವ ಏಕೈಕ ತರಬೇತಿ ಸಂಸ್ಥೆ ಎಂದು ಹೆಸರು ಗಳಿಸಿದೆ. ಇದಕ್ಕೆ ಇನ್ನೂ ಹೆಚ್ಚಿನ ತರಬೇತಿ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಒಂದು ಕೋಟಿ ರೂ. ಸಹಾಯ ನೀಡುವ ಭರವಸೆ ನೀಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಸಿಂಧನೂರು, ಲಿಂಗಸಗೂರು, ಮಸ್ಕಿ ಮತ್ತು ಅಳಂದ ತಾಲೂಕುಗಳ ಪಿಕೆಪಿಎಸ್ ಅಧ್ಯಕ್ಷರಿಗಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಡಿಜಿಟಲ್ ಇಂಡಿಯಾ ಪರಿಕಲ್ಪನೆ ಕುರಿತು ನಡೆದ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಈ ಸೌಲಭ್ಯ ಉಪಯೋಗಿಸಿಕೊಂಡು ಸಹಾರ್ದ ಎಲ್ಲಾ ಸಹಕಾರಿಗಳಿಗೆ ಉತ್ತಮ ತರಬೇತಿ ನೀಡಲಿದೆ ಎಂದರು. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಪಿಕೆಪಿಎಸ್‌ಗಳ ಮೂಲಕ 774 ಕೋಟಿ ರೂ. ಬಡ್ಡಿರಹಿತ ಕೃಷಿ ಸಾಲ ವಿತರಿಸಿ ರೈತರಿಗೆ ನೆರವಾಗಿದೆ. ಸಾಲ ಮನ್ನಾ ಯೋಜನೆಯಡಿ 1,09,000 ರೈತರ ಪೂರ್ಣ ಸಾಲ ಮನ್ನಾ ಆಗಿದ್ದು, ಜಿಲ್ಲೆಯ ರೈತರಿಗೆ
529.34 ರೋಟಿ ರೂ. ಲಾಭವಾಗಿದೆ. ಇವರಲ್ಲಿ 70,000ಕ್ಕಿಂತಲೂ ಹೆಚ್ಚು ಮಹಿಳೆಯರಿರುವುದು ವಿಶೇಷವಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಈಗಾಗಲೇ ಫಸಲ್ ಬೀಮಾ ಯೋಜನೆಯಲ್ಲಿ 1,72,000 ರೈತರು 13.65 ಕೋಟಿ
ಪ್ರಿಮಿಯಂ ತುಂಬಿದ್ದು, ಬೀದರ ಜಿಲ್ಲೆ ಮುಂಚೂಣಿಯಲ್ಲಿದೆ. ಮಧ್ಯಮಾವಧಿ ಕೃಷಿ ಸಾಲಗಳಿಗೂ ಕೂಡ ಬಡ್ಡಿ ಮನ್ನಾ ಯೋಜನೆ ಸರ್ಕಾರದಿಂದ ಜಾರಿಯಾಗಿದ್ದು, ಮಾರ್ಚ್ 2018ರ ಮೊದಲು ಅಸಲು ಕಟ್ಟಿದರೆ ಬಡ್ಡಿ ಪೂರ್ಣವಾಗಿ ಮನ್ನಾ ಆಗಲಿದೆ ರೈತರು ಈ ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದರು.
ಇಫ್ಕೋ ಸಂಸ್ಥೆಯ ರಾಜ್ಯ ಮಾರಾಟ ವ್ಯವಸ್ಥಾಪಕ ಸಿ.ಎಸ್. ಪಾಟೀಲ ಅವರು ಬೇವು ಲೇಪಿತ ಹರಳು ಯೂರಿಯಾ ಗೋಬ್ಬರದ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಈ ಯೂರಿಯಾವನ್ನು ಸಸ್ಯಗಳು ಶೇ.40ಕ್ಕಿಂತಲೂ
ಹೆಚ್ಚು ಹೀರಿಕೊಳ್ಳಬಲ್ಲವು ಮತ್ತು ಇದು ನಿಧಾನವಾಗಿ ಪ್ರಸರಣಗೊಳ್ಳವುದರಿಂದ ಸಸ್ಯಗಳು ಚೆನ್ನಾಗಿ ಉಪಯೋಗ
ಪಡೆಯಬಲ್ಲವು ಎಂದು ಹೇದರು. ಸಹಕಾರಿ ಸಂಘಗಳ ಉಪನಿಂಬಧಕ ವಿಶ್ವನಾಥ ಮೂಲಕೂಡ, ಡಿಸಿಸಿ ಬ್ಯಾಂಕ್ ಸಿಇಒ ಮಲ್ಲಿಕಾರ್ಜುನ ಮಹಾಜನ್, ಬಿ.ಜಿ. ಹಿರೇಮಠ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು
ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳು ಎಸ್ .ಜಿ. ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.