ಶರಣು ಸಲಗರಗೆ ಬಿಜೆಪಿ ಟಿಕೆಟ್‌ಗಾಗಿ ಪಾದಯಾತ್ರೆ
ಶರಣು ಸಲಗರ ಅವರು ಓರ್ವ ಕ್ರಿಯಾಶೀಲ ಹಾಗೂ ಜನರ ಹಿತ ಚಿಂತಕರಾಗಿದ್ದಾರೆ.
Team Udayavani, Jan 22, 2021, 4:37 PM IST
ಬಸವಕಲ್ಯಾಣ: ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಯುವ ಮುಖಂಡ ಶರಣು ಸಲಗರ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗಲೆಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಾಫರವಾಡಿ ಗ್ರಾಮದಿಂದ ಸುಕ್ಷೇತ್ರ ಹಾರಕೂಡ ಗ್ರಾಮದವರೆಗೆ ದೀಡ್ ನಮಸ್ಕಾರ ಮುಖಾಂತರ ಪಾದಯಾತ್ರೆ ನಡೆಸಿದರು.
ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್ ಹಾಗೂ ಊರಿನ ಹಿರಿಯ ಮುಖಂಡ ಶಾಂತವಿಜಯ ಪಾಟೀಲ್ ಅವರು ಗ್ರಾಮದ ಹನುಮಾನ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಶಾಂತವಿಜಯ ಪಾಟೀಲ್ ಮಾತನಾಡಿ, ಶರಣು ಸಲಗರ ಅವರು ಓರ್ವ ಕ್ರಿಯಾಶೀಲ ಹಾಗೂ ಜನರ ಹಿತ ಚಿಂತಕರಾಗಿದ್ದಾರೆ. ಮೂರು ತಿಂಗಳ ದೀರ್ಘಾವ ಧಿ ಲಾಕ್‌ಡೌನ್ ದಿನಗಳಲ್ಲಿ ಕ್ಷೇತ್ರದ 50,000 ಬಡ ಕುಟುಂಬಗಳಿಗೆ ಅವರು ಮಾಡಿರುವ ಉಚಿತ ಅನ್ನದಾಸೋಹ ಸೇವೆ ಮರೆಯಲಾರದು ಎಂದರು.
ಹುಲಸೂರ, ಪರತಾಪುರ, ಮಂಠಾಳ, ಗುಂಡೂರ, ಯಲ್ಲದಗುಂಡಿ, ಭೋಸಾ, ಕೋಹಿನೂರ ಹಾಗೂ ಸಿರಗಾಪುರ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾಫರವಾಡಿ ಗ್ರಾಮದ ಪ್ರಮುಖರಾದ ಮಹಾರಾಜಪ್ಪ ಮುಳೆ, ಮಾರುತಿ ದಾಸರವಾಡಿ, ಗಣಪತಿ ದಾಸೂರೆ, ಸೂರ್ಯಕಾಂತ್ ಸೂರ್ಯವಂಶಿ, ಮೌನೇಶ್ವರ ಪಾಂಚಾಳ, ಚನ್ನಪ್ಪ ಪಾಟೀಲ್, ಮಹಾದೇವ ಪೂಜಾರಿ ಹಾಗೂ ಪಕ್ಷದ ವಿವಿಧ ಪದಾ ಧಿಕಾರಿಗಳಾದ ರಾಜಕುಮಾರ ಸಿರಗಾಪುರ, ಶಿವರಾಜ ತಾಟೆ, ನಿತ್ಯಾನಂದ ಕೊಂಡಗೆ, ಪ್ರಕಾಶ್ ಸುಂಠಾಣೆ, ರತಿಕಾಂತ್ ಕೋಹಿನೂರ, ನಾಗೇಶ್ ಮೇತ್ರೆ, ಸಿದ್ದು ಬಿರಾದಾರ, ಗುರುನಾಥ ಮೂಲಗೆ, ಸಲ್ಮಾನ್ ಶರೀಫ್, ಜ್ಞಾನೇಶ್ವರ ಪಾಟೀಲ್, ಶಿವಕುಮಾರ ಶೇಟಗಾರ, ಬಾಬುರಾವ ಹಿಂಸೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.